ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್ ರ ಧರಣಿ 3ನೇ ದಿನಕ್ಕೆ

Wednesday, 26 October 2016

ಈಗ ಹೋರಾಟದಲ್ಲಿ ಐಟಿ ಇಂಜಿನಿಯರ್, ಸಹಾಯ ಕೇಂದ್ರ ಆಪರೇಟರ್ ಗಳು ಮತ್ತು ವಿವಿಧ ಬಿಬಿಎಂಪಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಸುಮಾರು 635ಕ್ಕೂ ಹೆಚ್ಚು ಕಾರ್ಮಿಕ ಭವನ ಎದುರು ಧರಣಿ ಕುಳಿತಿದ್ದು 6 ತಿಂಗಳ ಬಾಕಿ ದುಡಿಮೆಯ ವೇತನಕ್ಕಾಗಿ ಒತ್ತಯಿಸಿ ಧರಣಿ ಮುಂದುವರಿಸಿದ್ದಾರೆ. ಸಿಐಟಿಯು ನೇತೃತ್ವದಲ್ಲಿ ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್ ಯೂನಿಯನ್ ನಿಂದ ಅಕ್ಟೋಬರ್ 25, 2016ರ ಮಂಗಳವಾರ ಸಂಜೆ 5 ಗಂಟೆಗೆ ಕಾರ್ಮಿಕ ಆಯುಕ್ತರನ್ನ ಭೇಟಿ ಮಾಡಿದರೆ, ನೀವು ಬಿಬಿಎಂಪಿ ಅಪರ ಆಯುಕ್ತರು ಅಡಳಿತರವರನ್ನು ಭೇಟಿ ಮಾಡಿ ಎಂದು ತಿಳಿಸಿದರು. 

ತದ ನಂತರ ಯೂನಿಯನ್ ವತಿಯಿಂದ ಅಧ್ಯಕ್ಷರು, ಉಪ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸಮಿತಿ ಸದಸ್ಯರು ಸಂಜೆ 6.30 ರ ನಂತರ ಬಿಬಿಎಂಪಿ ಅಪರ ಆಯುಕ್ತರನ್ನ ಭೇಟಿ ಮಾಡಲಾಯಿತು.

ಅಗ್ರೀಮೆಂಟ್ ಗೆ ಸಹಿಹಾಕಲಾಗಿದೆ. ಒಂದು ವಾರದಲ್ಲಿ ವೇತನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಹಾಗೇ ಮುಂದಿನ ದಿನಗಳಲ್ಲಿ ಅಗ್ರೀಮೆಂಟ್ 3 ವರ್ಷಗಳಿಗೊಮ್ಮೆ ಮಾಡುವಂತೆ ಬದಲಾವಣೆ ಸಹ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಐಟಿ ನೌಕರರಿಗೆ ಕೊಡುತ್ತಿದ್ದ ವೇತನದಲ್ಲಿ 3 ವರ್ಷ ದಿಂದ 1,000 ರಿಂದ 1,500 ಕ್ಕೂ ಹೆಚ್ಚು ಕಡಿತ ಮಾಡಿ ಪಾವತಿ ಮಾಡಲಾಗುತ್ತಿದೆ. ನೀಡುತ್ತಿದ್ದ ಭತ್ಯೆಯನ್ನು ನಿಲ್ಲಿಸಿದ್ದಾರೆ. ಗುತ್ತಿಗೆ ಪಡೆದ ದಿನದಿಂದ 7 ನೇ ತಾರೀಖು ವೇತನ ನೀಡಿದ ನಿರ್ದೇಶನವೇ ಇಲ್ಲಾ ಎಂದು ತಿಳಿಸಲಾಯಿತು. ಪಿಎಫ್ ಹಣ ಸರಿಯಾಗಿ ಜಮಾ ಆಗುತ್ತಿಲ್ಲ. 1 ತಿಂಗಳ ವೇತನ ಬಾಕಿ ಇದೆ ಎಂದು ಹೇಳಲಾಯಿತು.

ಅಪರ ಆಯುಕ್ತರು ನಾಳೆ(ಬುಧವಾರ) ಸಭೆಗೆ ಜಂಟಿ ಆಯುಕ್ತರು. ಗುತ್ತಿಗೆ ದಾರರು ಮತ್ತು ಯೂನಿಯನ್ ಮುಖಂಡರನ್ನು ಕರೆಯುತ್ತೇನೆ ಎಂದು ತಿಳಿಸಿದರು. ನೌಕರರು ವೇತನ ಕೊಡುವವರಿಗು ಮತ್ತು ಕನಿಷ್ಟ ಬೇಡಿಕೆ ಇತ್ಯರ್ಥ ವಾಗುವವರೆಗೆ ಕಾರ್ಮಿಕ ಭವನ ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದರು. 

ನಾಳೆಯೂ ಕೂಡ ಧರಣಿ ಮುಂದುವರಿಲಯಲಿದ್ದು ವೇತನ ನೀಡುವವರಿಗೆ ಯಾರು ಕಚೇರಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ನೌಕರರು ನಿರ್ಧಾರ ಮಾಡಿದ್ದಾರೆ. ಈ ನಡುವೆ ಸಹಿ ಸಂಗ್ರಹವನ್ನು ಸಹ ನಡೆಸಲಾಗುತ್ತಿದೆ, ನೌಕರರೆಲ್ಲರೂ ಇದರಲ್ಲಿ ಭಾಗವಹಿಸಬೇಕೆಂದು ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಪಳನಿ ಸ್ವಾಮಿ ಜಿ.ಕೆ. ತಿಳಿಸಿದರು.

 

 

ವರದಿ : ಪಳನಿ ಸ್ವಾಮಿ ಜಿ.ಕೆ.