Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಝಾರ್ಖಂಡ್‍ನಲ್ಲಿ ಆದಿವಾಸಿ ಪ್ರತಿಭಟನಾಕಾರರ ಮೇಲೆ ಗೋಲೀಬಾರ್

Tuesday, 25 October 2016

ಬಿಜೆಪಿ ಸರಕಾರ ಈ ರಾಜ್ಯ ನಿರ್ಮಾಣದ ಉದ್ದೇಶವನ್ನೇ ಹುಸಿಯಾಗಿಸುತ್ತಿದೆ  -  ಸಿಪಿಐ(ಎಂ) ಪೊಲಿಟ್‍ಬ್ಯುರೊ

ಝಾರ್ಖಂಡ್‍ನ ಖುಂಟಿ ಜಿಲ್ಲೆಯ ಸೆಕೋ ಎಂಬ ಹಳ್ಳಿಯಲ್ಲಿ ಅಕ್ಟೋಬರ್ 22ರಂದು ಬುಡಕಟ್ಟು ಜನಗಳ ಮೇಲೆ ಪೋಲೀಸ್ ಗೋಳೀಬಾರಿಗೆ ಒಬ್ಬ ಬುಡಕಟ್ಟು ಮುಖಂಡ, ಅಬ್ರಹಾಂ ಮುಂಡಾ ಬಲಿಯಾಗಿದ್ದಾರೆ ಮತ್ತು ಇತರ  ಐವರಿಗೆ ತೀವ್ರ ಗಾಯಗಳಾಗಿವೆ. ಈ ಗ್ರಾಮದ ಬುಡಕಟ್ಟು ಜನಗಳ ಒಂದು ಗುಂಪು ರಾಜ್ಯದ ರಾಜಧಾನಿ ರಾಂಚಿಯಲ್ಲಿ 40 ಆದಿವಾಸಿ ಸಂಘಟನೆಗಳ ಜಂಟಿ ವೇದಿಕೆ ‘ಆದಿವಾಸಿ ಸಂಘರ್ಷ ಮೋರ್ಚಾ’ ಕರೆ ನೀಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಹೊರಟಿದ್ದರು. ರಾಜ್ಯದ ಬಿಜೆಪಿ ಸರಕಾರ ಬುಡಕಟ್ಟು ಜನಗಳ ಪಾರಂಪರಿಕ ಮತ್ತು ಕಾನೂನುಬದ್ಧ ಭೂಮಿ ಲಭ್ಯತೆಯನ್ನು ವಂಚಿಸಲು ಛೋಟಾನಾಗ್ಪುರ್ ಮತ್ತು ಸಂತಾಲ್ ಪರಗಣಾ ಗೇಣಿ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಷೆ ವಿರುದ್ಧ ಅಕ್ಟೋಬರ್ 24ರಂದು ರ್ಯಾಲಿಯನ್ನು ಯೋಜಿಸಲಾಗಿತ್ತು.

ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಗೋಲೀಬಾರನ್ನು ಬಲವಾಗಿ ಖಂಡಿಸಿದೆ. 

ಕಳೆದ ಒಂದು ತಿಂಗಳಲ್ಲಿ ಝಾರ್ಖಂಡ್‍ನ ಬಿಜೆಪಿ ಸರಕಾರ ರಾಜ್ಯದ ಹಲವೆಡೆಗಳಲ್ಲಿ ಇಂತಹ ಪ್ರತಿಭಟನೆಗಳ ಮೇಲೆ ಗುಂಡು ಹಾರಿಸಿದೆ. ಈ ಅವಧಿಯಲ್ಲಿ ಪೋಲೀಸ್ ಕಸ್ಟಡಿಯಲ್ಲಿ ಎರಡು ಸಾವುಗಳು ಸಂಭವಿಸಿವೆ. 

ಈ ಹಿಂದೆ ಬಿಹಾರ ರಾಜ್ಯದ ಭಾಗವಾಗಿದ್ದ ಝಾರ್ಖಂಡ್ ರಾಜ್ಯವನ್ನು ನಿರ್ಮಿಸಿದ್ದೇ ಬುಡಕಟ್ಟು ಜನಗಳ ಹಿತಾಸಕ್ತಿಗಳ ರಕ್ಷಣೆಯ ಹೆಸರಲ್ಲಿ. ತದ್ವಿರುದ್ಧವಾಗಿ ಬಿಜೆಪಿ ಸರಕಾರ ಸತತವಾಗಿ ಬುಡಕಟ್ಟು ಜನಗಳು ಮತ್ತು ಇತರ ದುರ್ಬಲ ವಿಭಾಗಗಳಿಗೆ ಬೆದರಿಕೆ ಒಡ್ಡುತ್ತಲೇ ಇದೆ, ಈ ಮೂಲಕ ಈ ರಾಜ್ಯದ ನಿರ್ಮಾಣದ ಉದ್ದೇಶವನ್ನೇ ನಿರಾಕರಿಸುತ್ತಿದೆ ಎಂದು ಪೊಲಿಟ್‍ಬ್ಯುರೊ ಟೀಕಿಸಿದೆ.

ಈಗ ಸ್ಥಾಪಿತಗೊಂಡಿರುವ ಸಂಸದೀಯ ಆಚರಣೆಗಳ ಪ್ರಕಾರ ಬುಡಕಟ್ಟು ಜನಗಳನ್ನು ಸಾಯಿಸುವುದು ಕೇವಲ ರಾಜ್ಯ ಕಾನೂನು ವ್ಯವಸ್ಥೆಯ ಪ್ರಶ್ನೆಯೆಂದು ಪರಿಗಣಿಸಲಾಗುತ್ತಿಲ್ಲ. ಕೇಂದ್ರ ಸರಕಾರ ಬುಡಕಟ್ಟು ಜನಗಳ ಹಕ್ಕುಗಳು ಲಭ್ಯವಿರುವಂತೆ ಮಾಡಲು ಮಧ್ಯಪ್ರವೇಶಿಸಬೇಕು, ಇದರಲ್ಲಿ ಪ್ರತಿಭಟನೆಯ ಪ್ರಜಾಪ್ರಭುತ್ವ ಹಕ್ಕು ಮತ್ತು ಭೂಮಿ ಮತ್ತು ಅರಣ್ಯ ಉತ್ಪನ್ನಗಳ ಮೇಲೆ ಅವರ ಹಕ್ಕುಗಳ ಇನ್ನಷ್ಟು ಅತಿಕ್ರಮಣ ಸಲ್ಲದು ಎಂಬುದೂ ಸೇರಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ನೆನಪಿಸಿದೆ.