ವೇತನ ಬಿಡುಗಡೆಗಾಗಿ ನೌಕರರ ಪ್ರತಿಭಟನೆ

Monday, 24 October 2016

ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್ ಯೂನಿಯನ್ ವತಿಯಿಂದ ಕಾರ್ಮಿಕ ಭವನ ಎದುರು ಅಕ್ಟೋಬರ್ 24, 2016ರಂದು ಮಧ್ಯಾಹ್ನ 2.30ಕ್ಕೆ 6 ತಿಂಗಳ ಬಾಕಿ ವೇತನಕ್ಕಾಗಿ, ಐಟಿ ನೌಕರರು 1 ತಿಂಗಳು ಮತ್ತು ಕಡಿತ ಮಾಡಿರುವ ವೇತನಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದರು.

ಸುಮಾರು 5 ಗಂಟೆಗಳು ಕಳೆದ ನಂತರ ಕಾರ್ಮಿಕ ಆಯುಕ್ತರು ಮತ್ತು ಸಿಐಟಿಯು ಯೂನಿಯನ್ ವತಿಯಿಂದ ಕಾಂ. ಮೀನಾಕ್ಷಿಸುಂದರಂ, ಕಾಂ. ಗೋಪಾಲ್ ಗೌಡ್ರು ಹಾಗೇ ನಮ್ಮ ಯೂನಿಯನ್ ವತಿಯಿಂದ ಅಧ್ಯಕ್ಷರಾದ ತನುಜಾಕ್ಷಿ ಉಪ ಅಧ್ಯಕ್ಷರು, ಶಾರದ, ಪ್ರಧಾನ ಕಾರ್ಯದರ್ಶಿ ಪಳನಿ ಜಂಟಿ ಕಾರ್ಯದರ್ಶಿ ಮಂಜುಳ, ಸಮಿತಿ ಸದಸ್ಯರಾದ ಗೋಪಾಲ್ ಸಮ್ಮುಖದಲ್ಲಿ ಸಭೆ ನಡೆಯಿತು. ನೌಕರರ ಬೇಡಿಕೆಗಳ ಬಗ್ಗೆ ಮುಖಂಡರು ಮಾತನಾಡಿದರು.

ಕಾರ್ಮಿಕ ಆಯುಕ್ತರು ``ಬಿಬಿಎಂಪಿ ಅಪರ ಆಯುಕ್ತರಿಗೆ ದೂರವಾಣಿ ಮೂಲಕ ನಿಮ್ಮ ಕಚೇರಿ ಕೆಲಸ ಮಾಡುತ್ತಿರುವ ನೌಕರರಿಗೆ ವೇತನ ಬಾಕಿ ಇದೆ ಎಂದು ನಮ್ಮ ಬಳಿಗೆ ಬಂದಿದ್ದರೆ ಎಂದು ಹೇಳಿದರು. ಅವರು ಈಗಾಗಲೇ ಆಯುಕ್ತರ ಸಹಿ ಆಗಿದೆ ಎಂದು ಹೇಳಿದರು. ಒಂದು ವಾರದಲ್ಲಿ ಆಗಬಹುದು ಎಂದು ಉತ್ತರಿಸಿದರು.

ಅದರೆ ನೌಕರರು ನಾವೂಗಳು ಸಹಿ ಹಾಕಿರುವುದು ಟೆಂಡರ್ ಡ್ರಾಫ್ಟ್ ಗೆ, ವೇತನ ಬಿಡುಗಡೆಗಲ್ಲ ಆದುದರಿಂದ ನಮಗೆ ವೇತನ ಬಿಡುಗಡೆ ಆಗುವವರೆಗೆ ನಾವು ಯಾರು ಬಿಬಿಎಂಪಿ ಕಚೇರಿಗಳಿಗೆ ಕೆಲಸಕ್ಕೆ ಹೋಗುವುದಿಲ್ಲವೆಂದು ತಿಳಿಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮುಖಂಡರು ಮಾತನಾಡಿ ``ಬೇಗ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಿಸಿ ಕೊಡಬೇಕೆಂದು ಒತ್ತಾಯಿಸಿದರು ಮತ್ತು ಗುತ್ತಿಗೆದಾರರು ವೇತನ ಕೊಡಲಿಕ್ಕೆ ಬರಲಿಲ್ಲ ಅಂದ್ರೆ operators union registered union ಆಗಿರುವುದರಿಂದ ನಮಗೆ ಕೊಡಿ ಅಲ್ಲಿಂದಲೇ ವೇತನ ನೀಡುತ್ತೇವೆ ಎಂದು ಕಾರ್ಮಿಕ ಆಯುಕ್ತರಿಗೆ ಒತ್ತಾಯಿಸಿದರು.

ಆಯುಕ್ತರು ನಾಳೆ ಮಾತಾಡೋಣ ಅಂತ ತಿಳಿಸಿದ್ದಾರೆ. ನಮ್ಮ ಧರಣಿ ಮರುದಿನ ಬೆಳಿಗ್ಗೆ 10 ರಿಂದ ಮುಂದುವರಿಯುವುದು ಎಂದು ನೌಕರರು ನಿರ್ಧರಿಸಿದರು. ಮತ್ತು ಎಲ್ಲಾ ನೌಕರರು ಭಾಗವಹಿಸಬೇಕ್ಕಾಗಿ ವಿನಂತಿಕೊಂಡರು.

 

ವರದಿ : ಪಳನಿಸ್ವಾಮಿ ಜಿ.ಕೆ.