ನಿವೇಶನ ಇಲ್ಲದವರಿಗೆ ನಿವೇಶನಕ್ಕಾಗಿ ಸಿಪಿಐ(ಎಂ) ಪ್ರತಿಭಟನೆ

Monday, 24 October 2016

ಆಯ್ಕೆ ಮಾಡಿರುವ 2,000 ನಿವೇಶನ ರಹಿತರ ಹೆಸರನ್ನು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿ, ಅರ್ಹ ನಿವೇಶನ ರಹಿತರನ್ನು ನಿವೇಶನ ರಹಿತರ ಪಟ್ಟಿಯಿಂದ ದುರುದ್ದೇಶದಿಂದ ಕೈ ಬಿಟ್ಟಿರುವ ಹೆಸರನ್ನು ಶೀಘ್ರ ಸೇರಿಸಬೇಕೆಂದು. ನಿವೇಶನಕ್ಕಾಗಿ ಮೀಸಲಿಟ್ಟ ಕಣ್ಣೂರಿನ ಕನ್ನಗುಡ್ಡೆಯ 11.25 ಎಕರೆ ಜಾಗದ ಸ್ಪಷ್ಟ ಮಾಹಿತಿ ನೀಡಬೇಕೆಂದು ಹಾಗೂ ಈ ಎಲ್ಲಾ ವಿಷಯ ಸಂಬಂಧ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಬೇಕೆಂದು ಮಂಗಳೂರಿನ ನಿವೇಶನ ರಹಿತರ ಹೋರಾಟ ಸಮಿತಿಯು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) -ಸಿಪಿಐ(ಎಂ) ನೇತೃತ್ವದಲ್ಲಿ  ಅಕ್ಟೋಬರ್ 24, 2016ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಸಂತೋಷ ಜಪ್ಪಿನಮೊಗುರು ಮುಂತಾದ ಮುಖಂಡರು ಮಾತನಾಡಿದರು.