ಗುಂಟೂರಿನಲ್ಲಿ ದುಡಿಯುವ ಮಹಿಳೆಯರ 11ನೇ ಅಖಿಲ ಭಾರತ ಸಮಾವೇಶ

ಸಂಪುಟ: 
10
ಸಂಚಿಕೆ: 
44
Sunday, 23 October 2016

ಸುನಂದ ಎಚ್.ಎಸ್.

ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ 11 ನೇ ಅಖಿಲ ಭಾರತ ಸಮಾವೇಶ ಆಂದ್ರದ ಗುಂಟೂರಿನಲ್ಲಿ ಸೆಪ್ಟಂಬರ್ 29-30 ರಂದು ನಡೆಯಿತು. ಗುಂಟೂರಿನ ರೆವಿನ್ಯೂ ಕಲ್ಯಾಣ ಭವನದಲ್ಲಿ ನಡೆದ ಸಮಾವೇಶದ ಧ್ವಜಾರೋಹಣ ಹಿರಿಯ ಸಂಗಾತಿ ಅಖಿಲಭಾರತ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷರು ಹಾಗೂ ಸಿಐಟಿಯು ಅಖಿಲ ಭಾರತ ಮುಖಂಡರಾದ ಕಾಂ. ನೀಲಿಮಾ ಮೈತ್ರ ನಡೆಸಿದರು. 14 ರಾಜ್ಯಗಳಿಂದ ಬಂದ 196 ಪ್ರತಿನಿಧಿಗಳು ಸಿಐಟಿಯು ಯೂನಿಯನುಗಳಲ್ಲದೆ, ವಿಮೆ, ಬ್ಯಾಂಕೆ, ಕೇಂದ್ರ/ರಾಜ್ಯ ಸರಕಾರಿ ನೌಕರರು, ಮೆಡಿಕಲ್ ರೆಪ್ ಕ್ಷೇತ್ರಗಳ ಸೋದರ ಸಂಘಟನೆಗಳಿಂದಲೂ ಬಂದಿದ್ದರು. ಸಮಾವೇಶದ ಸ್ಥಳಕ್ಕೆ ಕಾ. ಆರತಿ ಗುಪ್ತ ಅವರ ಹೆಸರು ಇಡಲಾಗಿತ್ತು.

ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಂ. ತಪನ್ ಸೇನ್ ರವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಿಐಟಿಯು ಯೂನಿಯನುಗಳಲ್ಲಿ ಸಂಘಟಿತರಾದ ದುಡಿಯುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. 1998 ರಲ್ಲಿ 7.7% ಇದ್ದ ಸಂಖ್ಯೆ 2016ರಲ್ಲಿ 32.3% ಕ್ಕೆ ಏರಿದೆ. ಸಂಖ್ಯೆ ಏರಿದೆ. ಆದರೆ ಸಮಸ್ಯೆ ಬಗೆಹರಿದಿದೆಯೇ ಎಂಬುದನ್ನು ನೋಡಬೇಕಿದೆ. ಈ ದಿನ ಅಸಂಘಟಿತ ಕ್ಷೇತ್ರದಲ್ಲಿ ಲಕ್ಷಾಂತರ ಮಹಿಳೆಯರು ಸ್ಕೀಂ ಕೆಲಸ ಅಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಜಾಗತಿಕರಣ ಉದಾರಿಕರಣದಿಂದ ಇಂದು ಎಲ್ಲಾ ಮಹಿಳೆಯರು ದುಡಿಯಬೇಕಾದ ಸ್ಥಿತಿ ಇದೆ. ಜೊತೆಗೆ ಕೇಂದ್ರ ಸರ್ಕಾರದ ದುಡಿಯುವ ವರ್ಗದ ವಿರೋಧಿ ನೀತಿಗಳಿಂದ ಪೆನ್ಸನ್ ನೀತಿಯಲ್ಲಿ ತಂದ ಬದಲಾವಣೆಗಳಿಂದ  ಲಕ್ಷಾಂತರ ಮಹಿಳೆಯರು ಕರ್ನಾಟಕದಂತಹ ಕಡೆ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಅದಲ್ಲದೆ ಸಂಘಟನೆಯ ಒಳಗೆ ಬರದ ಬಹಳಷ್ಟು ಜನ ಇದ್ದಾರೆ. ತಲುಪದವರನ್ನು ತಲುಪುವ ಕೆಲಸ ಆಗಬೇಕಿದೆ. ಈ ದಿನ ಪ್ಲಾಂಟೆಶನ್‍ಗಳಲ್ಲಿ, ಪುಡ್ ಪ್ರೋಸೆಸಿಂಗ್ ನಲ್ಲಿ ಗುತ್ತಿಗೆ ಕಾರ್ಮಿಕರಾಗಿ, ಮಿನುಗಾರರಾಗಿ ಪುರುಷ ಮಹಿಳೆ ಒಂದೇ ಕಡೆ ದುಡಿಯುವ ಕ್ಷೇತ್ರಗಳಲ್ಲಿ ಮಹಿಳೆಯರ ಸಿಐಟಿಯು ಉಪಸಮಿತಿ ಮಾಡಬೇಕಿದೆ. ಇನ್ನು ಕೆಲವು ಕಡೆ ರಾತ್ರಿಪಾಳೀ ಕೆಲಸ, ಪ್ರತ್ಯೇಕ ಶೌಚಾಲಯದ ಸಮಸ್ಯೆಯ ಬೇಡಿಕೆ ಇಟ್ಟು ಸಿಐಟಿಯು ಹೋರಾಟ ನಡೆಸುವುದು. ಜೊತೆಗೆ ಮುನ್ಸಿಪಾಲಿಟಿಯಿಂದ ಹಿಡಿದು ವಿಮಾನ ಚಾಲನೆವರೆಗೂ ಎಲ್ಲಾ ವರ್ಗದಲ್ಲಿ ದುಡಿಯುವವರನ್ನು ಸಂಘಟಿಸಬೇಕು ಮತ್ತು ಅವರ ಪ್ರತ್ಯೇಕ ಸಮಸ್ಯೆಗಳಿಗೆ ಹೋರಾಟ ನಡೆಸಬೇಕಿದೆ ಎಂದರು.

ಅಖಿಲ ಭಾರತ ಸಂಚಾಲಕರಾದ ಹೇಮಲತಾ 3 ವರ್ಷಗಳ ಕರಡು ವರದಿ ಮಂಡಿಸಿದರು. ವರದಿ ಮೇಲೆ ಎಲ್ಲಾ ರಾಜ್ಯಗಳಿಂದ ಚರ್ಚೆ ನಡೆಸಿದರು. ಕರ್ನಾಟಕದಿಂದ ಕಾಂ. ಸುನಂದ ಹೆಚ್.ಎಸ್. ಕಾಂ. ಸೆಲ್ವಿ, ಕಾಂ. ಮಾಲಿನಿ ಮೇಸ್ತ ಮಾತನಾಡಿದರು. ಅಧ್ಯಕ್ಷೀಯ ಮಂಡಳಿಯಲ್ಲಿ ಕರ್ನಾಟಕದಿಂದ ಕಾಂ. ಯಮುನಾ ಗಾಂವ್ಕರ್, ಪರಿಚಯ ಪತ್ರ ಮಂಡಳಿಯಲ್ಲಿ ಕಾಂ. ಟಿ. ಲೀಲಾವತಿ, ನಿರ್ಣಯ ಮಂಡಳಿಯಲ್ಲಿ ಕಾಂ. ಸಿ.ಕುಮಾರಿ ಭಾಗವಹಿಸಿದ್ದರು. 

ಚರ್ಚೆಗೆ ಉತ್ತರವಾಗಿ ಕಾ. ಹೇಮಲತಾರವರು ಮಾತನಾಡುತ್ತಾ ಸಿಐಟಿಯುನಲ್ಲಿಯೂ ಮಹಿಳಾ ಮುಖಂಡತ್ವವು ಹಿಂದಿಗಿಂತ ಹೆಚ್ಚಾಗಿದೆ.  ಕರ್ನಾಟಕ, ಪಶ್ಚಿಮಬಂಗಾಳ, ಕೇರಳ ಅಂತಹ ಕಡೆಗಳಲ್ಲಿ ಜಿಲ್ಲಾ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಹಾಗೂ ತಾಲ್ಲೂಕುಗಳಲ್ಲಿ ಕೂಡ ಸಿಐಟಿಯು ಮುಖ್ಯ ಹುದ್ದೆಯಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಸಿಐಟಿಯುನ ರಾಜ್ಯಾಧ್ಯಕ್ಷರಾಗಿ ಇದ್ದಾರೆ. ಹಾಗೂ ಸರ್ಕಾರದೊಟ್ಟಿಗೆ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 

ಸಮಾರೋಪದಲ್ಲಿ ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಕಾಂ. ಎ.ಕೆ.ಪದ್ಮನಾಭನವರು 2006 ರಲ್ಲಿ ಅಂಗನವಾಡಿ ನೌಕರರ ದೊಡ್ಡ 10 ದಿನಗಳ ಹೋರಾಟ ಆಗಿ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಲಕ್ಷಾಂತರ ಮಹಿಳೆಯರನ್ನು ಬೀದಿಗಿಳಿಸಿ ಹೋರಾಟ ನಡೆಸಿದ್ದು ಮಹಿಳಾ ಸಂಗಾತಿಗಳೇ ಆಗಿದ್ದಾರೆ. ದುಡಿಯುವ ಮಹಿಳೆಯರ ಈ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಒರಿಸ್ಸಾದ ಪುರಿಯಲ್ಲಿ ನಡೆಯುವ ಸಿಐಟಿಯು ನ ಅಖಿಲಭಾರತ ಸಮ್ಮೇಳನದಲ್ಲಿ ತೆಗೆದುಕೊಂಡು ಚರ್ಚೆ ಮಾಡಲಾಗುವುದು ಮತ್ತೆ ಎಲ್ಲಾ ರಾಜ್ಯದಲ್ಲೂ ಸಮನ್ವಯ ಸಮಿತಿ ರಚನೆಗೆ ಹೆಚ್ಚು ಒತ್ತು ಕೊಡಲಾಗುವದು. ಈ ದಿನ ಅಖಿಲ ಭಾರತ ಮಟ್ಟದಲ್ಲಿ ಮಹಿಳಾ ಪಧಾದಿಕಾರಿಗಳು ಇದ್ದಾರೆ. ದೇಶದಲ್ಲಿ ಪೋಸ್ಟಲ್‍ನಲ್ಲಿ ಇರುವ ಕಾಂ. ಸೀತಾಲಕ್ಷೀಯವರು ಅಖಿಲ ಭಾರತ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಇದ್ದಾರೆ ಎಂದರು.

ರಾಜ್ಯದಿಂದ ಒಟ್ಟು 19 ಜನ ಸಮಾವೇಶದಲ್ಲಿ ಭಾಗವಹಿಸಿದ್ದರು.. ಕಾ. ಎಸ್. ವರಲಕ್ಷ್ಮೀ, ಕಾ. ಸುನಂದ, ಕಾ. ಯಮುನಾ ಗಾಂವ್ಕರ್, ಕಾ. ಮಾಲಿನಿ ಮೇಸ್ತ, ಕಾ. ಗಂಗಾ ನಾಯ್ಕ, ಕಾ. ಟಿ.ಲಿಲಾವತಿ, ಕಾ. ಬಿ.ಎಸ್. ನಾಗರತ್ನ, ಕಾ. ಸಿ. ಕುಮಾರಿ, ಕಾ. ಪಾರ್ವತಮ್ಮ, ಕಾ. ಸೆಲ್ವಿ, ಕಾ. ಸೌಮ್ಯ, ಕಾ. ಸುಮಾ. ಕಾ. ಗೀತಾ ಚಕ್ರಸಾಲಿ, ಕಾ. ಪದ್ಮಾವತಿ ಶೆಟ್ಟಿ, ಕಾ. ಶಾಂತಾ ಘಂಟೆ, ಕಾ. ಆಶಾ, ಕಾ. ವಿಜಯಲಕ್ಷ್ಮೀ, ಕಾ. ಚಿತ್ರಾ, ಕಾ. ಶ್ರೀಮತಿ ಭಾಗವಹಿಸಿದ್ದರು.