Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಹೊರಗುತ್ತಿಗೆ ನೌಕರರ ಪ್ರತಿಭಟನಾ ಸ್ಥಳಕ್ಕೆ ಸಚಿವ ಆಂಜನೇಯ

Saturday, 22 October 2016

ಕಳೆದ ಹತ್ತಾರು ವರ್ಷಗಳಿಂದ ದಿನಗೂಲಿಗಳಾಗಿ, ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ ಘೋರ ಖಂಡಿಸಿ, ಗುತ್ತಿಗೆದಾರರ ಶೋಷಣೆಯನ್ನು ಅನುಭವಿಸುತ್ತಾ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು, ಶೇ.90 ಮಹಿಳೆಯರೇ ಆಗಿದ್ದಾರೆ. ದಲಿತರು, ಹಿಂದುಳಿದ ವರ್ಗಗಳಿಗೆ ಸೇರಿದವರು ಮತ್ತು ಅಲ್ಪಸಂಖ್ಯಾತರುವ ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕೆಂದು ಅಕ್ಟೋಬರ್ 20ರಂದು ಬೆಂಗಳೂರು ಚಲೋ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಮೂರನೇ ದಿನಕ್ಕೆ ಮುಂದುವರೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವರಾದ ಹೆಚ್.ಅಂಜನೇಯರವರು ಮನವಿ ಸ್ವೀಕರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘಟನೆ ನೇತೃತ್ವದಲ್ಲಿ ನಗರದ ರೈಲ್ವೇ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿಗೆ ಮುಂದಾದರು. ಸಾವಿರಾರು ಸಂಖ್ಯೆಯಲ್ಲಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

ಧರಣಿಯನ್ನು ಉದ್ದೇಶಿಸಿ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿರವರು ಮಾತನಾಡಿ ``ಹೊರಗುತ್ತಿಗೆ ಪದ್ಧತಿಯು ನೌಕರರ ಶೋಷಣೆಗೆ ಆಸ್ಪದ ಕೊಡುತ್ತದೆ. ಲೇಬರ್ ಗುತ್ತಿಗೆದಾರರು ನೌಕರರಿಗೆ ಸರ್ಕಾರ ನೀಡುವ ವೇತನವನ್ನು ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡುವುದಿಲ್ಲ. ಹೊರಗುತ್ತಿಗೆ ಪದ್ಧತಿಯು `ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಆಶಯಕ್ಕೆ ವಿರುದ್ಧವಾಗಿದೆ. ನೌಕರರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುವಂತಾಗಲೂ ಅವರ ಸೇವೆಯನ್ನೂ ಆದಷ್ಟು ಬೇಗ ಕಾಯಂ ಮಾಡಿ, ಕಣ್ಣೀರು ಹಾಕುತ್ತಿರುವ ಬಡಪಾಯಿ ನೌಕರರ ಕೊರಗನ್ನು ನೀಗಿಸಬೇಕು'' ಎಂದು ತಿಳಿಸಿದರು.

ನೌಕರರನ್ನು ಉದ್ದೇಶಿಸಿ ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷರಾದ ಕೆ.ಹನುಮೇಗೌಡ, ಖಜಾಂಚಿ ಚಂದ್ರಪ್ಪ ಹೊಸ್ಕೆರಾ, ಮತ್ತು ಆದಿವಾಸಿ ಸಂಘಟನೆ ಮುಖಂಡರಾದ ಎಸ್.ವೈ.ಗುರುಶಾಂತ್, ರಾಜ್ಯ ರೈತ ಸಂಘ ಮುಖಂಡರಾದ ವೀರಸಂಗಯ್ಯ, ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಮತ್ತಿತರ ಮುಖಂಡರು ಮಾತನಾಡಿದರು.