ಮಹದಾಯಿ : ರೈತರ ಮೇಲಿನ ಸುಳ್ಳು ಮೊಕದ್ದಮೆ ವಾಪಸ್ಸಾಗಲಿ

Friday, 14 October 2016

ನವಲಗುಂದ, ಅಕ್ಟೋಬರ್ 14: ಮಹದಾಯಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಲಾದ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕೆಂದು, ಸಾಲ ಮನ್ನಾ. ಬೆಳೆ ವಿಮೆ, ಬರಗಾಲ ನಿರ್ವಹಣೆಗೆ ವಿಶೇಷ ಪ್ಯಾಕೇಜ, ಮಹದಾಯಿ ಸಮಸ್ಯೆ ಪರಿಹಾರ ಸೇರಿದಂತೆ ಈ ಭಾಗದ ರೈತರ ಸಮಸ್ಯೆಗಳನ್ನು ಚರ್ಚಿಸಲು ವಿಷೇಶ ಅಧಿವೇಶನ ಕರೆಯಲು ಮತ್ತು ಮಹದಾಯಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಅಕ್ಟೋಬರ್ 14, 2016ರಂದು ಪ್ರತಿಭಟನೆ ನಡೆಸಲಾಯಿತು.

ನವಲಗುಂದ ಮಿನಿ ವಿಧಾನಸೌದದ ಎದುರು ನಡೆದ ಸದರ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮಹದಾಯಿ ಮಲಪ್ರಬಾ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷರಾದ ಶ್ರೀ ಲೊಕನಾಥ ಹೆಬಸುರು ಮಾತನಾಡಿ ``ಹೋರಾಟ ಆರಂಭವಾದ ದಿನದಿಂದಲೂ ಸಿಪಿಐಎಂ ಪಕ್ಷ ನಿರಂತರ ಬೆಂಬಲ ನೀಡಿದೆ ಅಲ್ಲದೇ ರಾಜ್ಯ ಸರಕಾರ ಪೊಲೀಸ್ ರ ಮೂಲಕ ನಡೆಸಿದ ಅಮಾನವೀಯ ದೌರ್ಜನ್ಯದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದವರು ಹುಬ್ಬಳ್ಳಿಯಿಂದ ಯಮನೂರಿಗೆ ನಮ್ಮ ನಡಿಗೆ ಯಮನೂರುನೆಡೆಗೆ' ಎಂಬ ಪಾದಯಾತ್ರೆ ಕೈಗೊಂಡು ನವಲಗುಂದ ತಲುಪಿ ರೈತರ ಹೋರಾಟ ಬೆಂಬಲಿಸಿದ್ದಾರೆ.

ದಿನಾಂಕ. 21/10/2016 ರಂದು ಮಂಬೈನಲ್ಲಿ ನಡೆಯಲಿರುವ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆಯಲ್ಲಿ ಮಹದಾಯಿ ಕಳಸಾ ಬಂಡೂನೀರಿನ ವಿವಾದವನ್ನು ಬಗೆಹರಿಸಬೇಕು. ಬಿ.ಜೆ.ಪಿ.ಹಾಗೂ ಕಾಂಗ್ರೆಸ್ ಪಕ್ಷಗಳು ಸದರ ನೀರಿನ ವಿವಾದವನ್ನು ರಾಜಕೀಯಗೊಸಲು ಪ್ರಯತ್ನ ಮಾಡುವುದನ್ನು ಬಿಟ್ಟು ರಾಜ್ಯದ ರೈತರ ಹಿತ ಕಾಪಾಡಿಕೊಂಡು ಬರಬೇಕು. ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆವಹಿಸಬೆಕು ಎಂದು ಅಗ್ರಹಿಸಿದರು.

ನಂತರ ನವಲಗುಂದ ತಹಶೀಲದ್ದಾರ್ ರವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಧರಣಿ ಸತ್ಯಾಗ್ರಹದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಿತ್ಯಾನಂದಸ್ವಾಮಿ ಹಾಗು ಸಿಪಿಐಎಂ ಪಕ್ಷದ ಮುಖಂಡರಾದ ಬಿ.ಎಸ್.ಸೊಪ್ಪಿನ, ಬಿ.ಎನ್ ಪೂಜಾರ. ಮಹೇಶ ಪತ್ತಾರ್, ಕೆ.ಎಚ್.ಪಾಟೀಲ. ಮಹೇಶ ಹಿರೇಮಠ, ಪಿರೂ ರಾಠೊಡ. ಮಾರುತಿ ಚಿಟಗಿ ಸಂಕಪ್ಪ ಕುರಹಟ್ಟಿ ಪತಾಕ ತೋಟದ ಮುಂತಾದವರು ಭಾಗವಹಿಸಿದ್ದರು.

 

 

ಕೃಪೆ  : ಕೆ.ಹೆಚ್. ಪಾಟೀಲ್