ವಿದ್ಯಾರ್ಥಿ ಸಂಘಟನೆಯಿಂದ ಬರಗೂರು ರಾಮಚಂದ್ರಪ್ಪನವರಿಗೆ ಶುಭಕೋರಿಕೆ

Thursday, 13 October 2016

ಬೆಂಗಳೂರು ಅ.13: ರಾಯಚೂರು ಜಿಲ್ಲೆಯಲ್ಲಿ 2016 ಡಿಸೆಂಬರ್ 2 ರಿಂದ 4ರವರಿಗೆ  ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಹಾಗೂ ನಾಡೋಜ ಪ್ರಶಸ್ತಿ ಪುರಷ್ಕ್ರತರಾದ ಬರಗೂರು ರಾಮಚಂದ್ರಪ್ಪನವರನ್ನು ಇಂದು ಅವರ ನಿವಾಸದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ.)ನ ರಾಜ್ಯ ಮಟ್ಟದ ನಿಯೋಗ ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಈ ಸಮಯದಲ್ಲಿ ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿರುವರು ಮಾತನಾಡಿ ``ಇಂದು ಜಾರಿಯಾಗುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ವಿಷಯ ಪ್ರಸ್ತಾಪಿಸಿದಾಗ, ಪ್ರತಿಕ್ರಿಯಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪರವರು ಎಲ್ಲಾ ಹಂತದಲ್ಲೂ ಶಿಕ್ಷಣದ ಹಿತ ಕಾಪಾಡುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿಯಾದ ಗುರುರಾಜ ದೇಸಾಯಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಪೂಜಾರ, ಮುಖಂಡರಾದ ವೇಗನಂದ, ಹನುಮಂತ ದುರ್ಗದ, ಮಹೇಶ್, ರಘು, ಡಿವೈಎಫ್ಐ ನ ಮುಖಂಡರಾದ ನರೇಂದ್ರರವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

 

 

ಕೃಪೆ : ಹನುಮಂತ ದುರ್ಗದ