Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸರಕಾರಿ ಜಾಗದಲ್ಲಿ ನಿವೇಶನ ಹಕ್ಕು ಪತ್ರಕ್ಕಾಗಿ ಬೃಹತ್ ಪ್ರತಿಭಟನೆ

Monday, 26 September 2016

ಕುಂದಾಪುರ, ಸೆ.26: ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಎಕ್ರೆ ಜಾಗ ಲಭ್ಯವಿದ್ದು, ಈ ಜಾಗದಲ್ಲಿರುವ ದೊಡ್ಡ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯವರಿಂದ ಅಭಿಪ್ರಾಯ ಪಡೆದು ನಂತರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯ ಅನುಪಾಲನಾ ವರದಿ ಗುರುತಿಸಿದ್ದನ್ನು ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಡಲು ಸರಕಾರ ಕ್ರಮವಹಿಸಬೇಕು ಎಂದು ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಹೇಳಿದರು. 

ಅವರು ತಲ್ಲೂರು, ಉಪ್ಪಿನಕುದ್ರು, ಗ್ರಾಮಗಳ ಮನೆ, ನಿವೇಶನ ರಹಿತರ- ಬೃಹತ್ ಸಮಾವೆಶ ಉದ್ಘಾಟಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ತಲ್ಲೂರು ಗ್ರಾಮದಲ್ಲಿ – ಕಂದಾಯ ಇಲಾಖೆ- ಸರಕಾರಿ ಜಾಗ 6.00 ಎಕ್ರೆ ಅತಿಕ್ರಮಣ ಸ್ಥಳವನ್ನು ಸ್ಥಳೀಯ ಗ್ರಾಮ ಪಂಚಾಯತ್‍ಗೆ ಹಸ್ತಾಂತರ ಮಾಡಲಾಗಿದ್ದು, ಕೂಡಲೇ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ತಲ್ಲೂರು ಗ್ರಾಮದ ಸ.ನಂ. 168 ವಿಸ್ತೀರ್ಣ 2.20 ಎಕ್ರೆ, ಸ.ನಂ. 161 ವಿಸ್ತೀರ್ಣ 3.25 ಎಕ್ರೆ, ಸ.ನಂ. 184, 175, 199 ವಿಸ್ತೀರ್ಣ 12 ಎಕ್ರೆ ಸರಕಾರಿ ಸ್ಥಳವನ್ನು ಬಡನಿವೇಶನ ರಹಿತರಿಗೆ ವಿತರಣೆ ಮಾಡಲು ಸರಕಾರವನ್ನು ಒತ್ತಾಯಿಸುವ ಹೋರಾಟ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ. 

ನಿವೇಶನ ರಹಿತರ ಸಮಾವೇಶದ ಬಳಿಕ ನಿವೇಶನ ರಹಿತ ಅರ್ಜಿದಾರರು – ತಲ್ಲೂರು ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಪಂಚಾಯತ್ ಅಧ್ಯಕ್ಷರಿಗೆ ಸಾಮೂಹಿಕವಾಗಿ ಮನವಿ ಅರ್ಪಿಸಲಾಗುವುದು. ಸಿಐಟಿಯು ಮುಖಂಡ ಸುರೇಶ ಕಲ್ಲಾಗರ, ಶೀಲಾವತಿ ಉಪಸ್ಥಿತರಿದ್ದರು.  ನಾಗರತ್ನ ನಾಡ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. 

 

ವರದಿ : ವೆಂಕಟೇಶ ಕೋಣಿ