ಹಂಚು ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ವಿ.ನರಸಿಂಹ ಆಯ್ಕೆ

Tuesday, 27 September 2016

ಉಡುಪಿ, ಸೆ.27: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ಗೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಹಂಚು ಕಾಮಿಕರ ಸಂಘದ 16ನೇ ವಾರ್ಷಿಕ ಮಹಾಸಭೆಯು ಕುಂದಾಪುರ ಕಾರ್ಮಿಕ ಭವನದಲ್ಲಿ ಸೆಪ್ಟಂಬರ್ 25ರಂದು ಜರಗಿತು. ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ, ಕಾರ್ಮಿಕ ಮುಖಂಡ ವಿ.ನರಸಿಂಹ ಪುನರಾಯ್ಕೆಗೊಂಡರು. ಎಚ್.ನರಸಿಂಹ (ಪ್ರಧಾನ ಕಾರ್ಯದರ್ಶಿ) ಪ್ರಕಾಶ ಕೋಣಿ (ಕೋಶಾಧಿಕಾರಿ)  ಜಿ.ಡಿ.ಪಂಜು- ಲಕ್ಷ್ಮಣ ಡಿ. (ಉಪಾಧ್ಯಕ್ಷರು) ಗೋಪಾಲ ಮಾರ್ಕೊಡು (ಜೊತೆ ಕಾರ್ಯದರ್ಶಿ)  ಇವರನ್ನೊಳಗೊಂಡ 54 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.