ಕಿರಿಮಂಜೇಶ್ವರ : ನಿವೇಶನ ರಹಿತರಿಗೆ ಹಕ್ಕು ಪತ್ರಕ್ಕೆ ಒತ್ತಾಯಿಸಿ ಬೃಹತ್ ಸಮಾವೇಶ

Tuesday, 27 September 2016

ಕುಂದಾಪುರ, ಸೆ.27: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡನಿವೇಶನ ರಹಿತರಿಂದ ನಿವೇಶನ ಹಕ್ಕು ಪತ್ರಕ್ಕಾಗಿ ಕೋರಿಕೆ ಅರ್ಜಿ ಸಲ್ಲಿಕೆಯಾಗಿ ವರ್ಷ ಕಳೆದರೂ ಈ ತನಕ ನಿವೇಶನ ರಹಿತರ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಸಿದ್ಧಪಡಿಸದ ಗ್ರಾಮ ಪಂಚಾಯತ್ ಕಾರ್ಯ ವೈಖರಿಯನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ನಾಯಕ ನಾಗರತ್ನ ನಾಡ ಟೀಕಿಸಿದರು. 

ಅವರು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ನಿವೇಶನ ರಹಿತರ ಅರ್ಜಿದಾರರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಕಿರಿಮಂಜೇಶ್ವರ ಗ್ರಾಮದಲ್ಲಿ  ಗುರುತಿಸಲಾದ ಸರಕಾರಿ ಜಾಗ ಸ.ನಂಬ್ರ 267 ರಲ್ಲಿ ವಿಸ್ತೀರ್ಣ 31 ಎಕ್ರೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಅಕೇಶಿಯಾ ಗಿಡ ನೆಟ್ಟಿರುವುದರ ಸ್ಥಳದಲ್ಲಿ ನಿವೇಶನ ರಹಿತರಿಗೆ ಹಕ್ಕು ಪತ್ರ ಮಂಜೂರು ಮಾಡಲು ಸೂಕ್ತ ತೀರ್ಮಾನಕೈಗೊಳ್ಳಬೇಕು ಎಂದು ಸಮಾವೇಶದಲ್ಲಿ ಸರಕಾರವನ್ನು ಆಗ್ರಹಿಸಲಾಯಿತು. 

ನಿವೇಶನ ರಹಿತರ ಬೃಹತ್ ಸಮಾವೇಶದಲ್ಲಿ - ಸ್ಥಳೀಯ ಮುಖಂಡರಾದ ನಾರಾಯಣ ಮಡಿವಾಳ ಸುಮತಿ ಆಚಾರ್ ರಾಜೇಶ ನಾಗೂರು, ಸಂಜೀವ ಪೂಜಾರಿ ನಾಗೂರು, ಚಂದ್ರ ಖಾರ್ವಿ ಗೋಳು ಮನೆ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ವೆಂಕಟೇಶ ಕೋಣಿ, ನಾಗರತ್ನ ನಾಡ, ಶೀಲಾವತಿ ಪಡುಕೋಣೆ, ಉಪಸ್ಥಿತರಿದ್ದರು. 

 

 

ವರದಿ : ವೆಂಕಟೇಶ ಕೋಣಿ