Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಪರಮದೇವನ ಹಳ್ಳಿಯಲ್ಲಿ ಸರಕಾರಿ ಭೂಮಿ ಸಾಗುವಳಿನಿರತ ರೈತರ ವಲಯ ಮಟ್ಟದ ಸಮಾವೇಶ

Saturday, 10 September 2016

ಕರ್ನಾಟಕ ಪ್ರಾಂತ ರೈತ ಸಂಘವು ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿ ವಲಯದ ಸರಕಾರಿ ಭೂಮಿ ಸಾಗುವಳಿ ನಿರತ ಬಡ ರೈತರ ಸಮಾವೇಶವನ್ನು 10 ಸೆಪ್ಟಂಬರ್ 16 ರಂದು ಪರಮದೇವನಹಳ್ಳಿಯಲ್ಲಿ ಸಂಘಟಿಸಿತ್ತು. ಈ ಸಮಾವೇಶದಲ್ಲಿ  ಪರಮದೇವನಹಳ್ಳಿ, ಗೋಡೆಹಾಳು, ಅಸುಂಡಿ, ಯಾಳ್ಪಿ, ವೈಕಗ್ಗಲ್ಲು, ಸಿಡಿಗಿನ ಮೊಳ, ಲಿಂಗದೇವನಹಳ್ಳಿ, ಮೀನಹಳ್ಳಿ ಮುಂತಾದ ಸುಮಾರು 10 ಗ್ರಾಮಗಳ 150 ಕ್ಕೂ ಹೆಚ್ಚು ಬಡ ರೈತರು ಪಾಲ್ಗೊಂಡಿದ್ದರು. ಈ ಸಮಾವೇಶದ ಅಧ್ಯಕ್ಷತೆಯನ್ನು ಪರಮದೇವನಹಳ್ಳಿಯ ಗಾಳಿಲಿಂಗಪ್ಪ ಇವರು ವಹಿಸಿದ್ದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಶ್ರೀ ಯು. ಬಸವರಾಜ ರವರು ಸಮಾವೇಶವನ್ನು ಉದ್ಘಾಟಿಸಿದರು. ಕರ್ನಾಟಕ ಸರಕಾರ ಹಲವು ದಶಕಗಳಿಂದ ಸರಕಾರದ ಯಾವೊಂದು ನೆರವು ಪಡೆಯದೇ ರಾಜ್ಯದಾದ್ಯಂತ ಬಂಜರಾಗಿದ್ದ 50 ಲಕ್ಷಕ್ಕೂ ಹೆಚ್ಚು ಎಕರೆ ಜಮೀನನ್ನು ಸ್ವಂತ ಕುಟುಂಬದ ಶ್ರಮದಿಂದ ಮತ್ತು ದುಬಾರಿ ಬಡ್ಡಿ ಸಾಲದ ಬಂಡವಾಳ ಹೂಡಿ ಅಭಿವೃಧ್ದಿ ಪಡಿಸಿ ಫಲವತ್ತಾದ ಜಮೀನಾಗಿ ಬದಲಾಯಿಸಿದ ಈ ಅನ್ನದಾತರನ್ನು ಕನಾಟಕ ಸರಕಾರ ಭೂಗಳ್ಳರ ಸಾಲಿಗೆ ಸೇರಿಸಿರುವುದನ್ನು ಬಲವಾಗಿ ಖಂಡಿಸಿದರು. ಇಂತಹ ಎಲ್ಲಾ ಬಡವರನ್ನು ಅನ್ನದಾತರೆಂದು ಪರಿಗಣಿಸಿ ಭೂಕಬಳಿಕೆ ನಿಷೇಧ ಕಾಯ್ದೆ ಮತ್ತಿತರೇ ಬೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಹಕ್ಕು ಪತ್ರಸಿಗುವಂತೆ ಕ್ರಮವಹಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಜಿಲ್ಲಾ ಸಮಿತಿ ಸಹಕಾರ್ಯದರ್ಶಿ ಶ್ರೀ ಗಾಳಿ ಬಸವರಾಜ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವ್ಯವಸಾಯವನ್ನು ಕಂಪೆನಿಗಳಿಗೆ ವಹಿಸಿಕೊಡಲು ಮುಂದಾಗುತ್ತಿರುವುದನ್ನು ಸೋಲಿಸಬೇಕೆಂದು ಕರೆ ನೀಡಿದರು.

ಸಮಾವೇಶವು ಭೂ ಸಾಗುವಳಿದಾರರ ಪರಮದೇವನಹಳ್ಳಿ ವಲಯ ಸಮಿತಿಯನ್ನು ಗಾಳಿ ಲಿಂಗಪ್ಪನವರ ಸಂಚಾಲಕತ್ವದಲ್ಲಿ ರಚಿಸಿತು ಮತ್ತು ಸದಸ್ಯರಾಗಿ ಈ ಭಾಗದ ಪ್ರತಿ 10 ಭೂಸಾಗುವಳಿದಾರರಿಗೊಬ್ಬರಂತೆ ಸೇರ್ಪಡೆ ಮಾಡಲು ನಿರ್ಧರಿಸಿತು.

ಅದೇ ರೀತಿ, ಸರಕಾರಿ ಜಮೀನು ಸಾಗುದಾರರನ್ನು ಭೂಗಳ್ಳರೆಂಬ ವ್ಯಾಖ್ಯಾನ ಕೈಬಿಡಬೇಕು ಮತ್ತು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಇವರನ್ನು ಒಳ ಪಡಿಸಬಾರದು. ಈ ಎಲ್ಲಾ ಸಾಗುದಾರರಿಗೆ ಹಕ್ಕು ಪತ್ರ ನೀಡಲು ಅಗತ್ಯ ಕಾನೂನುಗಳಿಗೆ ತಿದ್ದುಪಡಿ ಮಾಡಿ ಸೂಕ್ತ ಕ್ರಮವಹಿಸಬೇಕು ಮತ್ತು ಜಿಲ್ಲಾ ಹಾಗೂ ತಾಲೂಕ ಅಧಿಕಾರಿಗಳು ಈ ಸಾಗುದಾರರ ಜಮೀನುಗಳನ್ನು ವಾಸ್ತವಿಕ ಗಣತಿ(ಸರ್ವೇ) ಮಾಡಿ ಸಾಗುದಾರರ ಹೆಸರುಗಳನ್ನು ಪಹಣಿಯ ಸಾಗುವಳಿ ಕಾಲಂನಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ, ಇದೇ 26 ರಿಂದ ಅಕ್ಟೋಬರ್ 03, 2016ರವರೆಗೆ ಪ್ರತಿದಿನ ಧರಣಿ ಸತ್ಯಾಗ್ರಹವನ್ನು ಜಿಲ್ಲಾದಿಕಾರಿಗಳ ಕಛೇರಿ ಎದಿರು ನಡೆಸಲು ನಿರ್ಧರಿಸಿತು.

ಅದೆ ರೀತಿ, ನವೆಂಬರ್ 07ರಂದು ನಡೆಯುವ ಜೈಲ್ ಭರೋ ಚಳುವಳಿ ಯಶಸ್ವಿಗೆ ಕ್ರಮವಹಿಸಲು ನಿರ್ಧರಿಸಿತು.

ಗಾಳಿ ಬಸವರಾಜ