ಕಾವೇರಿ ಸಮಸ್ಯೆ: ರಾಜ್ಯದ ಹಿತ ಮತ್ತು ಸಾಮಾಜಿಕ ಶಾಂತಿ ಕಾಪಾಡಬೇಕೆಂದು ಪ್ರತಿಭಟನೆ

Friday, 9 September 2016

ಕರ್ನಾಟಕದ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸುವುದು ಹಾಗೂ ಕೃಷಿ ನೀರಾವರಿಗೆ ತೊಂದರೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯನ್ನು ಅರಿತು ಕೂಡಲೆ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿ ಸೆಂಟರ್ ಆಫಿ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ನೆಲಮಂಗಲ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮೆರವಣಿಗೆಯಲ್ಲಿ ಸಾಗಿದ ನೂರಾರು ಕಾರ್ಮಿಕರು ನೆಲಮಂಗಲ ತಾಲ್ಲೂಕು ಕಛೇರಿ ಮುಂಭಾಗ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ, ತಮಿಳುನಾಡು ರಾಜ್ಯಗಳ ನಡುವೆ ಸುಮಾರು 765 ಕಿಮೀ ದೂರ ಹರಿಯುವ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದವು ಶತಮಾನದಿಂದ ಇತ್ಯರ್ಥವಾಗದ ವಿವಾದವಾಗಿದೆ. ಮಳೆ ಕಡಿಮೆಯಾಗುವ ವರ್ಷಗಳಲ್ಲಿ ನೀರಿನ ಕೊರತೆಯನ್ನು ಹಂಚಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವ ಸಂದರ್ಭಗಳಲ್ಲಿ ಈ ವಿವಾದವು ಕಾವೇರುತ್ತದೆ.

1998ರಲ್ಲಿ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ “ಕಾವೇರಿ ನದಿ ಪ್ರಾಧಿಕಾರ” ಸ್ಥಾಪನೆಯಾದರು ಈ ವೇದಿಕೆಯನ್ನು ಬಳಸಿ ಅಂತರ ರಾಜ್ಯಗಳ ನಡುವೆ ಉದ್ಭವವಾಗುವ ವಿವಾದಗಳನ್ನು ಇತ್ಯರ್ಥಮಾಡಲು ಪ್ರದಾನಮಂತ್ರಿಗಳು ಪ್ರಯತ್ನಿಸಬೇಕಾಗಿತು. ಆಂತಹ ಪ್ರಯತ್ನದ ಕೊರತೆಗಳು ಈಗಿನ ಪರಿಸ್ಥಿತಿ ಗಂಭೀರವಾಗಲು ಕಾರಣವಾಗಿದೆ.

16 ವರ್ಷಗಳ ದೀಘರ್À ವಿಚಾರಣೆಯ ನಂತರ 2007ರಲ್ಲಿ ಕಾವೇರಿ ನದಿ ವಿವಾದ ಟ್ರಿಬ್ಯೂನಲ್ ಅಂತಿಮ ತೀರ್ಪು ನೀಡಿತು. ಇದರ ಅನ್ವಯ ಕಾವೇರಿಯಲ್ಲಿ ಹರಿಯುವ ಒಟ್ಟು ನೀರಿನಲ್ಲಿ 419 ಟಿಎಂಸಿ ತಮಿಳುನಾಡಿಗೆ, 270 ಟಿಎಂಸಿ ಕರ್ನಾಟಕಕ್ಕೆ, 30 ಟಿಎಂಸಿ ಕೇರಳಕ್ಕೆ ಹಾಗು 7 ಟಿಎಂಸಿ ನೀರು ಪಾಂಡಿಚೇರಿ ರಾಜ್ಯಕ್ಕೆ ಹಂಚಬೇಕು ಎಂದು ತೀರ್ಪು ನೀಡಿತು. ಇದನ್ನು ಕೇಂದ್ರ ಸರ್ಕಾರ 2013 ರಲ್ಲಿ ಗೆಜೆಟ್ ನಲ್ಲಿ ಪ್ರಕಟಿಸಿತು. ಈ ತೀರ್ಪಿನ ಅನ್ವಯ ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ಸ್ಥಾಪನೆಯಾಗಬೇಕಿತು. ಈ ತೀರ್ಪಿನ ಪುನರ್ ವಿಮರ್ಶೆಗಾಗಿ ಕರ್ನಾಟಕ ಹಾಗು ತಮಿಳುನಾಡು ರಾಜ್ಯ ಸರ್ಕಾರಗಳು ಟ್ರಿಬ್ಯೂನಲ್ ಎದುರು ಅರ್ಜಿ ಸಲ್ಲಿಸಿವೆ. ಬರಗಾಲ ಹಾಗು ಅನಾವೃಷ್ಟಿಯ ಸಂದರ್ಭದಲ್ಲಿ ಎದುರಾಗುವ ನೀರಿನ ಕೊರತೆಯನ್ನು  ಹಂಚಿಕೊಳ್ಳಬೇಕಾದ ಪ್ರಾಯೋಗಿಕ ಸಂಕಷ್ಟ ಹಂಚಿಕೆ ಸೂತ್ರಗಳನ್ನು ರೂಪಿಸಲು ಸಂಬಂದಿಸಿದ ರಾಜ್ಯಗಳ ನಡುವೆ ಪ್ರಯತ್ನ ಅಗತ್ಯವಿದೆ. ಇದರ ಮೂಲಕ ಮಾತ್ರವೇ ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಇತ್ಯರ್ಥ ಮಾಡುವುದು ಸಾಧ್ಯವಾಗುತ್ತದೆ.

ಆಗಸ್ಟ್ 2016ರಲ್ಲಿ ತಮಿಳುನಾಡು ಸರ್ಕಾರ ಕಾವೇರಿ ಟ್ರಿಬ್ಯೂನಲ್ ತೀರ್ಪಿನ ಜಾರಿಗೆ ಒತ್ತಾಯಿಸಿ ಮಧ್ಯಂತರ ಅರ್ಜಿ (ಇಂಟರ್‍ಲೊಕೇಟರಿ ಅಪ್ಲೀಕೇಷನ್) ಸಲ್ಲಿಸಿತು. ಈ ಅರ್ಜಿಯ ಮೇಲಿನ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಲಯವು ಪ್ರತಿದಿನವು 15,000 ಕ್ಯೂಸೆಕ್ಸ್ ನೀರನ್ನು 10 ದಿನಗಳ ಕಾಲ ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.

ಪ್ರಧಾನಮಂತ್ರಿಗಳು ತಮ್ಮ ಅಧ್ಯಕ್ಷತೆಯಲ್ಲಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯನ್ನು ಕೂಡಲೇ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಮಾಡಬೇಕಿದೆ. ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನದಂತೆ ಕಾವೇರಿ ಮೇಲ್ವಿಚಾರಣ ಸಮಿತಿಯಲ್ಲಿ ಕರ್ನಾಟಕ ರಾಜ್ಯವು ತನ್ನ ವಾದವನ್ನು ಸಮರ್ಪಕವಾಗಿ ಮಂಡಿಸಲು ಅಗತ್ಯವಾದ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಮಾಡಬೇಕು. ಈ ವಿವಾದವನ್ನು ಓಟಿನ ರಾಜಕೀಯಕ್ಕೆ ರಾಜಕೀಯ ಪಕ್ಷಗಳು ಬಳಸಲು ಮಾಡುವ ಪ್ರಯತ್ನ ರಾಜ್ಯದ ಹಿತಕ್ಕೆ ಮಾರಕವಾಗುತ್ತದೆ ಎಂಬುದನ್ನು ಕರ್ನಾಟPದÀ ಜನತೆಯು ಅರ್ಥಮಾಡಿಕೊಳ್ಳಬೇಕು. ರಾಜ್ಯಗಳ ನಡುವೆ ಗಂಭೀರ ವಿವಾದಗಳು ಬರುವ ಸಂದರ್ಭದಲ್ಲಿ ಪ್ರಧಾನಿಗಳ ಮೌನವು ದೇಶದ ಹಿತ ಕಾಪಾಡುವಂತಹ ಜವಾಬ್ದಾರಿಯುತ ನಡೆತೆಯಲ್ಲ. ಈ ಸನ್ನಿವೇಶವನ್ನು ಬಳಸಿಕೊಂಡು ಭಾಷೆ ಹಾಗು ಪ್ರಾದೇಶಿಕ ಭಾವನೆಗಳನ್ನು ಕೆರಳಿಸಿ ಸಮಾಜದ ಶಾಂತಿ ಕೆಡಿಸುವ ಪ್ರಯತ್ನಗಳನ್ನು ರಾಜ್ಯ ಸರ್ಕಾರವು ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಜಿ.ಎನ್.ನಾಗರಾಜ್, ಸಿಐಟಿಯು ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಪ್ರತಾಪ್ ಸಿಂಹ, ಮುಖಂಡರಾದ ತಿರುಮಲಾಚಾರ್ ಮುಂತಾದವರು ಭಾಗವಹಿಸಿದ್ದರು.