ಕಾಂ.ವೆಂಕಟರೆಡ್ಡಿ ನಿಧನ

ಸಂಪುಟ: 
10
ಸಂಚಿಕೆ: 
34
Sunday, 14 August 2016

ಮಾಜಿ ಗ್ರಾಮ ಪಂಚಾಯತಿ ಅ ಧ್ಯಕ್ಷರು, ಜೂಲಪಾಳ್ಯ, ಸಿಪಿಐ(ಎಂ) ಪಕ್ಷದ ಮುಖಂಡರು ಹಾಗೂ ಬಾಗೇಪಲ್ಲಿಯ ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ಕಾಂ.ಸನ್ನವಾರಪಲ್ಲಿ ವೆಂಕಟರೆಡ್ಡಿರವರು ಆಗಸ್ಟ್ 08 ರಂದು ಬಾಗೇಪಲ್ಲಿಯಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ದೇವನಹಳ್ಳಿ ಬಳಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರಿಗೆ 50 ವರ್ಷವಾಗಿತ್ತು. ಕಾಂ.ವೆಂಕಟರೆಡ್ಡಿರವರು ಮಿಟ್ಟೆಮರಿ ಬಳಿಯ ಕಮ್ಮಸಂದ್ರದವರು. ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿದ ಸಂಗಾತಿಯ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮತ್ತು ಅಪಾರ ಜನತೆ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.