ಊನಾ ದಲಿತರ ಹೋರಾಟ ಬೆಂಬಲಿಸಿ ಧರಣಿ

ಸಂಪುಟ: 
10
ಸಂಚಿಕೆ: 
34
Saturday, 13 August 2016

ಆಗಸ್ಟ್ 14ರ ಸಂಜೆ 6ಗಂಟೆಯಿಂದ ರಾತ್ರಿ 12ಗಂಟೆವರೆಗೆ

ದಲಿತರ ಮತ್ತು ಅಲ್ಪಸಂಖ್ಯಾತರ ಆಹಾರ ಹಕ್ಕಿನ ಮೇಲೆ ಕೋಮುವಾದಿಗಳ ಧಾಳಿ ದೇಶದಾಧ್ಯಂತ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ. ಸ್ವಾತಂತ್ರ್ಯ ಬಂದು 6 ದಶಕಗಳು ಕಳೆದರು ದಲಿತರು ಅಲ್ಪಸಂಖ್ಯಾತರು ತಮ್ಮ ಆಹಾರದ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಹೀನ ಪರಿಸ್ಥಿತಿ.

ದಲಿತರಿಗೆಲ್ಲಿದೆ ಸ್ವಾತಂತ್ರ್ಯ? ಗುಜರಾತನ ಉನಾ ಗ್ರಾಮದಲ್ಲಿ ದಲಿತರು ದನದ ಚರ್ಮ ಸುಲಿದರು ಎಂದು ಗೋರಕ್ಷಕ ಪಡೆ ದೌರ್ಜನ್ಯ ನಡೆಸಿದೆ. ರಾಜ್ಯದ ಚಿಕ್ಕಮಗಳೂರು ಜಿಲ್ಲೆ ದನದ ಮಾಂಸ ತಿನ್ನುತ್ತಿದರೆಂದು ಬಜರಂಗ ದಳ ಕೋಮುವಾದಿಗಳು ದೌರ್ಜನ್ಯ ನಡೆಸಿದ್ದಾರೆ. ದಲಿತರಿಗೆ ರಕ್ಷಣೆ ಇಲ್ಲದ ಬದುಕಾಗಿದೆ.

ಆಹಾರದ ಹಕ್ಕಿಗಾಗಿ, ದಲಿತರ ರಕ್ಷಣೆಗಾಗಿ ಅಹಮದಾಬಾದ್‍ನಿಂದ ಊನಾ ಗ್ರಾಮದವರೆಗೆ ನಡೆಯುತ್ತಿರುವ ಬೃಹತ್ ದಲಿತರ ಜಾಥಾ ಆಗಸ್ಟ್ 15ರಂದು ನಡೆಯಲಿದೆ. ಈ ಹೋರಾಟವನ್ನು ದಲಿತ ಹಕ್ಕುಗಳ ಸಮಿತಿ, ಕರ್ನಾಟಕ(ಡಿ.ಹೆಚ್.ಎಸ್.) ಬೆಂಬಲಿಸಿ ಆಗಸ್ಟ್ 14, 2016ರಂದು ಸಂಜೆ 6.00ಗಂಟೆಯಿಂದ ಮದ್ಯ ರಾತ್ರಿ 12ಗಂಟೆವರೆಗೆ ಧರಣಿ ನಡೆಸಲಾಗುವುದು. ಎಂದು ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿರವರು ತಿಳಿಸಿದ್ದಾರೆ.

ಈ ‘ಪ್ರತಿಭಟನಾ ಧರಣಿಯಲ್ಲಿ ದಲಿತ ನಾಯಕರು, ಪ್ರಗತಿಪರ ಸಾಹಿತಿಗಳು, ದಲಿತ ಸಂಘಟನೆಗಳು ಭಾಗವಹಿಸಲಿದ್ದಾರೆ.