“ನಮ್ಮ ನಡಿಗೆ ಯಮನೂರಿನಡೆಗೆ” ಕಾಲ್ನಡಿಗೆ ಜಾಥಾ

ಸಂಪುಟ: 
10
ಸಂಚಿಕೆ: 
34
Saturday, 13 August 2016

ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ: ಆಗಸ್ಟ್ 14-15

ಹುಬ್ಬಳ್ಳಿ, ಆಗಸ್ಟ್ 12: ಮಹದಾಯಿ, ಕಳಸಾ-ಬಂಡೂರಿ ನೀರಿನ ಪ್ರಶ್ನೆ ಇತ್ಯರ್ಥಪಡಿಸಲು ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಲು, ಬಂಧಿತ ಮಹದಾಯಿ ಕಳಸಾ-ಬಂಡೂರಿ ಹೋರಾಟಗಾರರ ಬೇಷರತ್ತ ಬಿಡುಗಡೆ ಮಾಡಲು, ಬಂಧಿತರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ಸ್ ಪಡೆಯಬೇಕೆಂದು, ನವಲಗುಂದ, ಯಮನೂರ, ಅಳಗವಾಡಿ ಹಾಗೂ ಆರೇ ಕುರಹಟ್ಟಿ ಗ್ರಾಮಗಳಲ್ಲಿ ನಡೆದ ಪೋಲೀಸ್ ದೌರ್ಜನ್ಯ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ. ಪೋಲೀಸ್ ದೌರ್ಜನ್ಯಕ್ಕೆ ಕಾರಣರಾದ ಉನ್ನತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಇತರೆ ಸಂಘಟನೆಗಳ ಬೆಂಬಲದೊಂದಿಗೆ “ನಮ್ಮ ನಡೆಗೆ, ಯಮನೂರಿನೆಡೆಗೆ” ಹುಬ್ಬಳ್ಳಿಯಿಂದ ನವಲಗುಂದದವರೆಗೆ ಕಾಲ್ನಡಿಗೆ ಜಾಥಾವನ್ನು ಆಗಸ್ಟ್ 14-15, ರವಿವಾರ ಮತ್ತು ಸೋಮವಾರ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷರಾದ ಬಿ.ಎಸ್.ಸೊಪ್ಪಿನರವರು ತಿಳಿಸಿದರು.

ಉದ್ಘಾಟನಾ ಬಹಿರಂಗ ಸಭೆ: 14 ಆಗಸ್ಟ್ 2016 ರವಿವಾರ ಬೆಳಿಗ್ಗೆ: 10-30 ಗಂಟೆಗೆ ಹುಬ್ಬಳ್ಳಿ ನಗರದ ಡಾ|| ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಕಾಲ್ನಡಿಗೆ ಜಾಥಾ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಮಾರುತಿ ಮಾನ್ಪಡೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಎಸ್.ಸೊಪ್ಪಿನ, ಪ್ರಧಾನ ಕಾರ್ಯದರ್ಶಿ ಕೆ.ಎಚ್.ಪಾಟೀಲ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಎಸ್‍ಎಫ್‍ಐ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ ಪೂಜಾರ, ಡಿವೈಎಫ್‍ಐ ಜಿಲ್ಲಾ ಸಂಚಾಲಕ ಬಸವರಾಜ ಕೋರಿಮಠ ಹಾಗೂ ವಿವಿಧ ಜಿಲ್ಲೆಗಳ ರೈತರು, ವಿದ್ಯಾರ್ಥಿ, ಯುವಜನರು ಭಾಗವಹಿಸಲಿದ್ದಾರೆ ಎಂದು ಕೆಪಿಆರ್‍ಎಸ್ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಪಾಟೀಲ ರವರು ತಿಳಿಸಿದ್ದಾರೆ.

ನಂತರ ರಾಣಿ ಚೆನ್ನಮ್ಮ ವೃತ್ತ ಕೋರ್ಟ ಸರ್ಕಲ್, ಸರ್ವೋದಯ ಸರ್ಕಲ್ ಮುಖಾಂತರ ನವಲಗುಂದ ರಸ್ತೆ ಮುಖಾಂತರ ಕಾಲ್ನಡಿಗೆ ಜಾಥಾ ಹೊರಡÀಲಿದೆ. ಸಾಯಾಂಕಾಲ 6-00 ಗಂಟೆಗೆ ಹೆಬಸೂರ ಗ್ರಾಮಕ್ಕೆ ತೆರಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಭೆ ನಡೆಸಲಾಗುವುದು. ನಂತರ ವಸತಿ ಮಾಡಲಾಗುವುದು.

15 ಆಗಷ್ಟ 2016 ಸೋಮವಾರ ಬೆಳಿಗ್ಗೆ: 8-30ಕ್ಕೆ ಹೆಬಸೂರ ಗ್ರಾಮದಿಂದ ಪ್ರಾರಂಭವಾಗುವ ಕಾಲ್ನಡಿಗೆ ಜಾಥಾ ಅರೇಕುರಹಟ್ಟಿ, ಯಮನೂರಿಗೆ ಗ್ರಾಮಗಳಿಗೆ ತೆರಳಿ ಅಲ್ಲಿ ಸಭೆ ನಡೆಸಿ ಅಲ್ಲಿಂದ ನವಲಗುಂದಕ್ಕೆ ತೆರಳಿ ಸಂಜೆ: 5-00 ಗಂಟೆಗೆ ನವಲಗುಂದ ಲಿಂಗರಾಜ ಸರ್ಕಲ್‍ನಲ್ಲಿರುವ ರೈತ ಹುತಾತ್ಮ ಸ್ಮಾರಕದ ಬಳಿ ಮುಕ್ತಾಯ ಸಭೆ ನಡೆಸಲಾಗುವುದು. ಮೇಲ್ಕಂಡ ಬೇಡಿಕೆಗಳಿಗಾಗಿ ಒತ್ತಾಯಿಸಿ ಕೇಂದ್ರ ರಾಜ್ಯ ಸರಕಾರಗಳಿಗೆ ಎಚ್ಚರಿಗೆ ನೀಡಲು ಈ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದ್ದು. ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.