ಪಶ್ಚಿಮ ಬಂಗಾಲದೊಂದಿಗೆ ಸೌಹಾರ್ದ ಪ್ರಜಾಪ್ರಭುತ್ವದ ಮೇಲೆ ಹಿಂಸಾಚಾರಗಳು ನಿಲ್ಲಬೇಕು

ಸಂಪುಟ: 
10
ಸಂಚಿಕೆ: 
33
date: 
Sunday, 7 August 2016
Image: 

ಭಾರತದ ಬೇರಾವ ಭಾಗದಲ್ಲೂ ಒಂದು ರಾಜಕೀಯ ಸಂಘಟನೆಯನ್ನು ಮತ್ತು ಅದರ ಆಂದೋಲನವನ್ನು ನಿರ್ಮೂಲ ಮಾಡುವ ಇಂತಹ ಯೋಜಿತ ಮತ್ತು ವ್ಯವಸ್ಥಿತ ದಾಳಿ ನಡೆದಿಲ್ಲ. ಪಶ್ಚಿಮ ಬಂಗಾಲದಲ್ಲಿ ಈಗ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಮೇಲೆ, ನಾಗರಿಕರ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಮತ್ತು ಘನತೆಯಿಂದ ಬದುಕು ನಡೆಸುವ ಅವರ ಹಕ್ಕಿನ ಮೇಲೆ ಒಂದು ಅಮಾನುಷ ಮತ್ತು ಪೂರ್ವಯೋಜಿತ ದಾಳಿ.
ಸಿಪಿಐ(ಎಂ) ಮತ್ತು ಎಡರಂಗ ಮತ್ತು ಪಶ್ಚಿಮ ಬಂಗಾಲದ ಇತರ ಪ್ರಜಾಪ್ರಭುತ್ವವಾದಿ ಶಕ್ತಿಗಳು ಈ ದಾಳಿಯನ್ನು ಧೈರ್ಯದಿಂದ ಎದುರಿಸುತ್ತಿವೆ.
ಅವರಿಗೆ ದೇಶದ ಎಡ, ಪ್ರಜಾಪ್ರಭುತ್ವವಾದಿ ಮತ್ತು ಪ್ರಗತಿಪರ ಶಕ್ತಿಗಳ ಪೂರ್ಣ ಬೆಂಬಲ ಮತ್ತು ಸೌಹಾರ್ದ ಬೇಕಾಗಿದೆ.

ಪಶ್ಚಿಮ ಬಂಗಾಲದಲ್ಲಿ ಸಿಪಿಐ(ಎಂ) ಮತ್ತು ಎಡರಂಗ ಹಾಗೂ ಅವರನ್ನು ಬೆಂಬಲಿಸುವ ಜನತೆ ಮೇಲೆ ವಿಧಾನ ಸಭಾ ಚುನಾವಣೆಗಳು ಮುಗಿದ ನಂತರ ತೃಣಮೂಲ ಕಾಂಗ್ರೆಸಿನಿಂದ ಅಭೂತಪೂರ್ವ ಹಿಂಸಾಚಾರವನ್ನು ಮತ್ತು ದಾಳಿಗಳನ್ನು ಎದುರಿಸುತ್ತಿದ್ದಾರೆ. ಈ ವ್ಯಾಪಕ ಹಿಂಸಾಚಾರ ಮತ್ತು ಭಯೋತ್ಪಾದನೆಯ ಸ್ವರೂಪವನ್ನು ರಾಜ್ಯದ ಹೊರಗೆ ಪೂರ್ಣವಾಗಿ ಅರ್ಥೈಸಿಕೊಳ್ಳಲಾಗಿಲ್ಲ, ಏಕೆಂದರೆ ಟಿಎಂಸಿಯ ವಿಜಯದ ನಂತರ ಮುಖ್ಯಧಾರೆಯ ಮಾಧ್ಯಮಗಳು ಈ ಘಟನೆಗಳನ್ನು ವರದಿ ಮಾಡುವುದನ್ನು ನಿಲ್ಲಿಸಿವೆ. 

ಈ ಮುಂದುವರೆಯುತ್ತಿರುವ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯತ್ತ ಗಮನ ಸೆಳೆಯಲಿಕ್ಕಾಗಿ ಸಿಪಿಐ(ಎಂ) ಆಗಸ್ಟ್ 1ರಿಂದ 7 ರವರೆಗೆ ಪಶ್ಚಿಮ ಬಂಗಾಲದ ಪಕ್ಷ ಮತ್ತು ಎಡರಂಗದೊಡನೆ ಸೌಹಾರ್ದ ವ್ಯಕ್ತಪಡಿಸುವ ವಾರಾಚರಣೆಯನ್ನು ನಡೆಸುತ್ತಿದೆ.

ಐದು ವರ್ಷಗಳ ಹಿಂದೆ ಮೇ 2011ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಎಡರಂಗ ಸರಕಾರ ಸೋತು ಮಮತಾ ಬ್ಯಾನರ್ಜಿ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ಪಶ್ಚಿಮ ಬಂಗಾಲ ಸತತ ಹಿಂಸಾಚಾರವನ್ನು ಮತ್ತು ಎಡ ಆಂದೋಲನವನ್ನು ದಮನ ಮಾಡುವ ಪ್ರಯತ್ನಗಳನ್ನು ಕಾಣುತ್ತಿದೆ. ಆ ಹಿಂಸಾಚಾರದ ಸರಣಿಯನ್ನು ಈ ಮೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆಗಳ ಫಲಿತಾಂಶಗಳ ನಂತರ ತೀವ್ರಗೊಳಿಸಲಾಗಿದೆ ಮತ್ತು ವಿಸ್ತರಿಸಲಾಗಿದೆ.

ಚುನಾವಣಾ ವಿಜಯದ ಪ್ರಯೋಜನ ಪಡೆದು ರಾಜ್ಯದಲ್ಲಿ ಸಿಪಿಐ(ಎಂ) ಮತ್ತು ಎಡ ಸಂಘಟನೆಗಳನ್ನು ನಿರ್ಮೂಲ ಮಾಡಲು ತೃಣಮೂಲ ಕಾಂಗ್ರೆಸ್ ಈ ಪ್ರಸಕ್ತ ದಾಳಿಯನ್ನು ಯೋಜಿಸಿದೆ. ಇತ್ತೀಚಿನ ದಾಳಿಗಳನ್ನು ಎರಡು ಸ್ಪಷ್ಟ ಉದ್ದೇಶಗಳ್ಪೊಂದಿಗೆ ರೂಪಿಸಲಾಗಿದೆ-ಎಡರಂಗ ಒಳ್ಳೆಯ ಫಲಿತಾಂಶಗಳನ್ನು ತೋರಿಸಿದ ಕಡೆಗಳಲ್ಲಿ ಭಯೋತ್ಪಾದನೆಯ ಮೂಲಕ ಜನಗಳು ತಮಗೆ ಅಧೀನವಾಗುವಂತೆ ಮಾಡುವುದು, ಮತ್ತು ಎರಡನೆಯದಾಗಿ, ಪಕ್ಷವನ್ನು ಧ್ವಂಸ ಮಾಡಿ ಕಾರ್ಮಿಕ ಸಂಘಗಳನ್ನು ಮತ್ತು ಸಾಮೂಹಿಕ ಸಂಘಟನೆಗಳನ್ನು ವಶಪಡಿಸಿಕೊಳ್ಳುವುದು. ಈ ಉದ್ದೇಶದಿಂದಲೇ ಎಡಪಕ್ಷಗಳ ಮತ್ತು ಸಾಮೂಹಿಕ ಸಂಘಟನೆಗಳ 1000ಕ್ಕೂ ಹೆಚ್ಚು ಕಚೇರಿಗಳನ್ನು ಧ್ವಂಸ ಮಾಡಲಾಗಿದೆ, ಹಾಳುಗೆಡವಲಾಗಿದೆ ಅಥವ ವಶಪಡಿಸಿಕೊಳ್ಳಲಾಗಿದೆ.

12 ಸಿಪಿಐ(ಎಂ) ಮತ್ತು ಎಡರಂಗದ ಸದಸ್ಯರು ಹಾಗೂ ಬೆಂಬಲಿಗರನ್ನು ಚುನಾವಣೆಯ ವೇಳೆಯಲ್ಲಿ ಮತ್ತು ನಂತರ ಹತ್ಯೆ ಮಾಡಲಗಿದೆ. ಇದರೊಂದಿಗೆ 2011ರ ವಿಧಾನಸಭಾ ಚುನಾವಣೆಗಳ ಕಾಲದಿಂದ ಹತ್ಯೆಯಾದ ಕಾರ್ಯಕರ್ತರು ಮತ್ತು ಬೆಂಬಲಿಗರ ಸಂಖ್ಯೆ 186ಕ್ಕೆ ಏರಿದೆ. 3000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಗಳಲ್ಲಿ ಮಹಿಳೆಯರ ಮೇಲೆ ವಿಶೇಷ ಗುರಿಯಿಡಲಾಗಿದೆ, 31 ಅತ್ಯಾಚಾರಗಳು, 746 ದೈಹಿಕ ದಾಳಿ ಮತ್ತು ಲೈಂಗಿಕ ಕಿರುಕುಳದ ಘಟನೆಗಳು ವರದಿಯಾಗಿವೆ. ದೈಹಿಕ ದಾಳಿಗಳಲ್ಲಿ ಮಕ್ಕಳನ್ನೂ ಬಿಟ್ಟಿಲ್ಲ.

ಎಡಶಕ್ತಿಗಳ ಬೆಂಬಲಕ್ಕೆ ನಿಂತಿರುವ ಸಾಮಾನ್ಯ ಬೆಂಬಲಿಗರು ಮತ್ತು ದುಡಿಯುವ ಜನಗಳ ಮೇಲೆ ದಾಳಿಗಳನ್ನು ಗುರಿ ಮಾಡಲಾಗಿದೆ. ಸಾಮೂಹಿಕ ಸಂಘಟನೆಗಳ ಕಚೇರಿಗಳು ಹಲವು ಜನಗಳ ಬೆಂಬಲದಿಂದ ನಿರ್ಮಾಣವಾದವುಗಳು. ಅವುಗಳನ್ನು ಧ್ವಂಸ ಮಾಡಿ ಅವರು ದುಡಿಯುವ ಜನಗಳ ಹಕ್ಕುಗಳನ್ನು ದಮನ ಮಾಡುವ ಪ್ರಯತ್ನ ನಡೆಸಿದ್ದಾರೆ.

ಭಯೋತ್ಪಾದನೆ ಉಂಟು ಮಾಡುವ ಇನ್ನೊಂದು ವಿಧಾನವೆಂದರೆ ಕುಟುಂಬಗಳನ್ನು ಅವರ ಮನೆಗಳಿಂದ ಹೊಡೆದೋಡಿಸುವುದು. ಚುನಾವಣಾ ಫಲಿತಾಂಶಗಳ ನಂತರ ಕಳೆದ ಎರಡು ತಿಂಗಳಲ್ಲಿ 11000 ಜನ ತಮ್ಮ ವಾಸಸ್ಥಳಗಳನ್ನು ಬಿಟ್ಟು ಹೋಗುವಂತೆ ಮಾಡಲಾಗಿದೆ.

ಮತ್ತೊಂದು ಸಾಧನವೆಂದರೆ ಎಡ ಬೆಂಬಲಿಗರು ಮತ್ತು ಜನಸಾಮಾನ್ಯರ ಮೇಲೆ ದಂಡ ವಿಧಿಸುವುದು. ಹೀಗೆ ಕಿತ್ತುಕೊಂಡ ಹಣ ಮತ್ತು ಬಲವಂತದಿಂದ ದಂಡ ವಸೂಲಿಯ ಮೊತ್ತ ಜುಲೈ ಅಂತ್ಯದ ವೇಳೆಗೆ 3.5 ಕೋಟಿ ರೂ.ಗಳನ್ನು ದಾಟಿದೆ.

ಕಮ್ಯುನಿಸ್ಟರು ಮತ್ತು ಎಡಪಂಥೀಯರನ್ನು ಮೂಲೋತ್ಪಾಟನೆ ಮಾಡುವ ಫ್ಯಾಸಿಸ್ಟ್ ಮಾದರಿಯ ವಿಧಾನಗಳಲ್ಲಿ ಪಕ್ಷದ ಮತ್ತು ಎಡರಂಗದ ಬೆಂಬಲಿಗರಿಗೆ ಜೀವನಾಧಾರಗಳು ಇಲ್ಲದಂತೆ ಮಾಡುವುದೂ ಸೇರಿದೆ. ಎಡ ಬೆಂಬಲಿಗರಿಗೆ ಸೇರಿದ ಸಾವಿರಾರು ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಅಥವ ಹಾಳುಗೆಡವಲಾಗಿದೆ. ಕೆಲವೆಡೆಗಳಲ್ಲಿ ರೈತರು ತಮ್ಮ ಸ್ವಂತ ಹೊಲಗಳಲ್ಲಿ ಬೇಸಾಯ ಮಾಡಲು ಅವಕಾಶವಾಗದಂತೆ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಪಟ್ಟಾ ಹೊಂದಿದವರು ಮತ್ತು ಭಾಗ ಬೆಳೆಗಾರರನ್ನು ಒಕ್ಕಲೆಬ್ಬಿಸಲಾಗಿದೆ. ಇಡೀ-ಇಡೀ ಹಳ್ಳಿಗಳ ಮೇಲೆಯೇ ದಾಳಿ ಮಾಡಿ ಸುಟ್ಟು ಹಾಕಲಾಗಿದೆ. 70 ಹಳ್ಳಿಗಳು ಇಂತಹ ದಾಳಿಗಳಿಗೆ ತುತ್ತಾಗಿವೆ.

ಭಾರತದ ಬೇರಾವ ಭಾಗದಲ್ಲೂ ಒಂದು ರಾಜಕೀಯ ಸಂಘಟನೆಯನ್ನು ಮತ್ತು ಅದರ ಆಂದೋಲನವನ್ನು ನಿರ್ಮೂಲ ಮಾಡುವ ಇಂತಹ ಯೋಜಿತ ಮತ್ತು ವ್ಯವಸ್ಥಿತ ದಾಳಿ ನಡೆದಿಲ್ಲ. ಪಶ್ಚಿಮ ಬಂಗಾಲದಲ್ಲಿ ಈಗ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಮೇಲೆ, ನಾಗರಿಕರ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಮತ್ತು ಘನತೆಯಿಂದ ಬದುಕು ನಡೆಸುವ ಅವರ ಹಕ್ಕಿನ ಮೇಲೆ ಒಂದು ಅಮಾನುಷ ಮತ್ತು ಪೂರ್ವಯೋಜಿತ ದಾಳಿ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಆಳ್ವಿಕೆಯಲ್ಲಿ ದೇಶದ ನಾಗರಿಕರಿಗೆ ಕೊಟ್ಟಿರುವ ಯಾವ ಮೂಲಭೂತ ಹಕ್ಕು ಕೂಡ ಸುರಕ್ಷಿತವಾಗಿಲ್ಲ.

ಸಿಪಿಐ(ಎಂ) ಮತ್ತು ಎಡರಂಗ ಮತ್ತು ಪಶ್ಚಿಮ ಬಂಗಾಲದ ಇತರ ಪ್ರಜಾಪ್ರಭುತ್ವವಾದಿ ಶಕ್ತಿಗಳು ಈ ದಾಳಿಯನ್ನು ಧೈರ್ಯದಿಂದ ಎದುರಿಸುತ್ತಿವೆ. ಮತ್ತು ಈ ದಾಳಿಯನ್ನು ಪ್ರತಿರೋಧಿಸಲು ಜನಗಳನ್ನು ಅಣಿನೆರೆಸುತ್ತಿವೆ. ಬಡ ರೈತರು, ಕೃಷಿಕೂಲಿಕಾರರು, ಆದಿವಾಸಿಗಳು ಮತ್ತು ಕಾರ್ಮಿಕ ವರ್ಗದ ಸಾವಿರಾರು ಮಂದಿ, ಮಹಿಳಾ, ವಿದ್ಯಾರ್ಥಿ ಮತ್ತು ಯುವಜನ ಕಾರ್ಯಕರ್ತರು ಈ ಕಷ್ಟಕೋಟಲೆಗಳಿಗೆ ಎದೆಗೊಟ್ಟು ಪ್ರಜಾಪ್ರಭುತ್ವ ಹಕ್ಕುಗಳ ರಕ್ಷÀಣೆಗೆ, ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ಧ್ಯೇಯ ಸಾಧನೆಗಳಿಗೆ ಎದ್ದು ನಿಂತಿರುವ ಅಸಂಖ್ಯ ಉದಾಹರಣೆಗಳಿವೆ. ಅವರಿಗೆ ದೇಶದ ಎಡ, ಪ್ರಜಾಪ್ರಭುತ್ವವಾದಿ ಮತ್ತು ಪ್ರಗತಿಪರ ಶಕ್ತಿಗಳ ಪೂರ್ಣ ಬೆಂಬಲ ಮತ್ತು ಸೌಹಾರ್ದ ಬೇಕಾಗಿದೆ. ಈ ಸೌಹಾರ್ದ ಪ್ರಚಾರಾಂದೋಲನ ಈ ಸಂದೇಶವನ್ನು ದೇಶಾದ್ಯಂತ ಜನತೆಯ ಬಳಿ ಒಯ್ಯುತ್ತದೆ.

ಪ್ರಕಾಶ ಕಾರಟ್