ಅಕ್ಲಾಖ್ ಕುಟುಂಬದ ಮೇಲೆ ಎಫ್‍ಐಆರ್ ಆದೇಶ: ನ್ಯಾಯದ ಅಪಹಾಸ್ಯ

Wednesday, 20 July 2016

ಗೋಮಾಂಸ ತಿಂದನೆಂಬ ನೆಪಮಾಡಿ ಸಾರ್ವಜನಿಕವಾಗಿ ಕೊಚ್ಚಿ ಹಾಕಲ್ಪಟ್ಟ ಮಹಮ್ಮದ್ ಅಕ್ಲಾಖ್ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು ಉತ್ತರ ಪ್ರದೇಶದ ಒಂದು ಸ್ಥಳೀಯ ನ್ಯಾಯಾಲಯ ಆತನ ಕುಟುಂಬದ ಮೇಲೆಯೇ ಎಫ್‍ಐಆರ್ ದಾಖಲಿಸಬೇಕೆಂದು ಆದೇಶ ನೀಡಿದೆ. ಇದು ನ್ಯಾಯಕ್ಕೆ ಮಾಡಿರುವ ದೊಡ್ಡ  ಅಪಹಾಸ್ಯ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಅಕ್ಲಾಖ್‍ನನ್ನು ಅಮಾನುಷವಾಗಿ ಸಾಯಿಸುವಲ್ಲಿ ಪಾತ್ರ ªಹಿಸಿದವರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ. ಈ ಮಂದಿ ಅಕ್ಲಾಖ್ ಕುಟುಂಬದವರು ನೀಡಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಇದುವರೆಗೆ ಅವರ ಮೇಲೆ ಒತ್ತಡ ಹಾಕುತ್ತಿದ್ದರು. ಆಘಾತಕಾರಿ ಸಂಗತಿಯೆಂದರೆ ನ್ಯಾಯಾಲಯ ಅಕ್ಲಾಖ್ ಕುಟುಂಬದ ವಕೀಲರ ವಾದವನ್ನು ಕೇಳದೆಯೇ ಈ ಆದೇಶ ನೀಡಿದೆ ಎಂದು ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶ ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಕೋರ್ಟ್ ಆದೇಶದ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.