ಶಾಂತಿ ಕದಡುವ ಕಿಡಿಗೇಡಿಗಳನ್ನು ಬಂಧಿಸಿ: ಸಿಪಿಐ(ಎಂ) ಆಗ್ರಹ

ಸಂಪುಟ: 
10
ಸಂಚಿಕೆ: 
30
Sunday, 17 July 2016

ತುಮಕೂರಿನ ಶಿರಾಗೇಟ್ ಹತ್ತಿರ ಇರುವ ಯೂನಿಯನ್ ಕ್ರಿಶ್ಚಿಯನ್ ಕಾಲೇಜು ಆವರಣದಲ್ಲಿನ ಟಾಮ್ಲಿನ್ಸನ್ ಚರ್ಚ್ ಮುಖ್ಯದ್ವಾರಕ್ಕೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದ ಘಟನೆ ಜುಲೈ 14ರ ಬೆಳಗಿನ ಜಾವ ನಡೆದಿದೆ. ಚರ್ಚ್ ಮೇಲಿನ ದಾಳಿಯನ್ನು ಸಿಪಿಐ(ಎಂ) ತುಮಕೂರು ಜಿಲ್ಲಾ ಸಮಿತಿ ಖಂಡಿಸಿದೆ.

ಸಮಾಜದಲ್ಲಿ ಶಾಂತಿಯನ್ನು ಕದಡುವ ಕಿಡಿಗೇಡಿಗಳ ಈ ಕೃತ್ಯವು ಜನರಲ್ಲಿ ಅಶಾಂತಿ ಮೂಡಿಸುವ ಹಾಗೂ ನೈಜಾ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೇಳೆಯುವ ಕುತಂತ್ರವಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ಸಿಪಿಐ(ಎಂ) ಈ ಘಟನೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿದೆ. ಈ ಕೂಡಲೇ ಈ ಕೃತ್ಯದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಒತ್ತಾಯಿಸಿದೆ.

ತುಮಕೂರಿನ ಜನತೆ ವಿಭಜನಕಾರಿ ಈ ರೀತಿಯ ಕೆಲಸಗಳಿಗೆ ವಿಚಲಿತರಾಗದೆ ಶಾಂತಿ ಸೌರ್ಹಾದ ಹಾಗೂ ಸಹಬಾಳ್ವೆಗೆ ಗಮನ ನೀಡಲು ವಿನಂತಿಸುತ್ತದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಿ.ಉಮೇಶ್, ನಗರ ಕಾರ್ಯದರ್ಶಿ ಎಸ್.ರಾಘವೇಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.