ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲು ತೆಂಕಮಿಜಾರು ಗ್ರಾಮ ಪಂಚಾಯತು ಎದುರು ಪ್ರಚಾರಾಂದೋಲನ

ಸಂಪುಟ: 
10
ಸಂಚಿಕೆ: 
30
Sunday, 17 July 2016

ಬೀಡಿ ಕಾರ್ಮಿಕರನ್ನು ಗುರುತಿಸಿ ಅವರಿಗೆ ಅಧಿಕೃತ ಗುರುತು ಚೀಟಿ ನೀಡಬೇಕೆಂದು ಜುಲಾಯಿ 12ರಂದು ತೆಂಕಮಿಜಾರು ಗ್ರಾಮ ಪಂಚಾಯತ್ ಎದುರು ಪ್ರಚಾರಾಂದೋಲನ ಸಭೆ ನಡೆಸಲಾಯಿತು.

ತೆಂಕಮಿಜಾರು ಮತ್ತು ಬಡಗ ಮಿಜಾರು ಗ್ರಾಮಗಳ ವ್ಯಾಪ್ತಿಯ ನೂರಾರು ಬೀಡಿ ಕಾರ್ಮಿಕರು ಮೂಡಬಿದ್ರೆ ಬೀಡಿ ಕಾರ್ಮಿಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧಿಕೃತ ಗುರುತು ಚೀಟಿ ನೀಡದಿರುವ ಬಗ್ಗೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮೂಡಬಿದರೆ ಬೀಡಿ ಸಂಘದ ಅಧ್ಯಕ್ಷೆ ರಮಣಿ ಮೂಡಬಿದರೆ, ಮುಖಂಡರಾದ ಗಿರಿಜ, ಗುರುಪುರ ವಲಯ ಬೀಡಿ ಕಾರ್ಮಿಕ ಯೂನಿಯನ್ ಮುಖಂಡ ಸದಾಶಿವದಾಸ್, ಮೂಡಬಿದರೆ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ಶಂಕರ ವಾಲ್ಪಾಡಿ, ಸೀತಾರಾಮ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.