ಉ.ಕ.: ದುಡಿಯುವ ಮಹಿಳೆಯರ ಸಮಾವೇಶ

ಸಂಪುಟ: 
10
ಸಂಚಿಕೆ: 
29
Sunday, 10 July 2016

ದುಡಿಯುವ ಮಹಿಳೆಯರ ಸಮನ್ವಯ ಸಮಿತಿ (ಸಿಐಟಿಯು) ಉತ್ತರ ಕನ್ನಡ ಜಿಲ್ಲಾ 6ನೇ ಸಮಾವೇಶವು ಕುಮಟಾದಲ್ಲಿ ಜರುಗಿತು. ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತ ಉದ್ಘಾಟಿಸಿದರು. ಅತಿಥಿಗಳಾಗಿ ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ಕಟ್ಟಡ ಕಾರ್ಮಿಕರ ಜಿಲ್ಲಾ ಅಧ್ಯಕ್ಷ ತಿಲಕ ಗೌಡ, ಮೀನಾ ಮಾಸ್ತಿ, ಹಮಾಲಿ ಕಾರ್ಮಿಕರ ಸಂಘದ ಗೀತಾ ಚಕ್ರಸಾಲಿ, ಗುತ್ತಿಗೆ ಪೌರ ಕಾರ್ಮಿಕರ ಕಾರ್ಯದರ್ಶಿ ನಾಗಪ್ಪ ನಾಯ್ಕ್ಕ ಮಾತನಾಡಿದರು.

ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕರಾದ ಯಮುನಾ ಗಾಂವ್ಕರ್ ಮಂಡಿಸಿದ ಕರಡು ವರದಿ ಆಧಾರದಲ್ಲಿ ವಿಭಿನ್ನ ವಿಭಾಗದ ಮಹಿಳಾ ಕಾರ್ಮಿಕರು ತಮ್ಮ ಅನುಭವ ಹಂಚಿಕೊಂಡರು. ಸಿಐಟಿಯು ಜಿಲ್ಲಾ ಖಜಾಂಚಿ ಸಿ.ಆರ್. ಶಾನಭಾಗ್ ಸಮಾರೋಪ ಭಾಷಣ ಮಾತನಾಡಿದರು. ಮಂಗಲಾ ಸ್ವಾಗತಿಸಿದರೆ ಗಂಗಾರವರು ವಂದನಾರ್ಪಣೆ ಮಾಡಿದರು. ಭಟ್ಕಳದ ಗೀತಾ ಅಧ್ಯಕ್ಷತೆ ವಹಿಸಿದ್ದರು. ನೂತನ ಸಂಚಾಲನ ಸಮಿತಿಗೆ ಗಂಗಾ ನಾಯ್ಕ್ಕ ಸಂಚಾಲಕರಾಗಿ ಆಯ್ಕೆಯಾದರು.

ಎಸ್.ಎಫ್.ಐ. ಸಂಘಟನೆ ಗಣೇಶ, ವಕೀಲರಾದ ಮಮತಾ, ಬ್ಯಾಂಕ್ ನೌಕರ ಸಂಘದ ಮುಖಂಡರಾದ ಜ್ಯೋತಿ ಶುಭಕೋರಿದರು.