ಕೊಬ್ಬರಿಗೆ 15 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿ ತುಮಕೂರು ತೆಂಗು ಬೆಳೆಗಾರರ ಆಗ್ರಹ

ಸಂಪುಟ: 
10
ಸಂಚಿಕೆ: 
28
Sunday, 3 July 2016

ತುಮಕೂರು ಜಿಲ್ಲೆ ಮತ್ತು ರಾಜ್ಯದಾದ್ಯಂತ ಕೊಬ್ಬರಿ ಬೆಲೆ ದಿಡೀರ್ ಕುಸಿತದಿಂದಾಗಿ ಕೊಬ್ಬರಿ ಮತ್ತು ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು ಸರ್ಕಾರಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ರೈತರಿಂದ ನೇರ ಖರೀದಿಯ ಜೊತೆಗೆ ಕನಿಷ್ಠ 15 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ತುಮಕೂರು ಜಿಲ್ಲಾ  ಸಂಚಾಲಕರಾದ ಸಿ.ಅಜ್ಜಪ್ಪನವರು ಆಗ್ರಹಿಸಿದ್ದಾರೆ.

ಕೈಸಾಲ ಮಾಡಿ ಕೊಬ್ಬರಿ ಬೆಳದ ರೈತರಿಗೆ ಸರಿಯಾದ ಬೆಲೆ ಸಿಗದೆ ಸಾಲದ ಸುಳಿಯಿಂದ ರೈತರ ಕುಟುಂಬಗಳನ್ನು ಶಾಶ್ವತವಾದ ನಿದ್ದೆಗೆ ಕೇಂದ್ರ-ರಾಜ್ಯ ಸರ್ಕಾರಗಳು ದೂಡುತ್ತಿವೆ ಎಂದೂ, ಸರ್ಕಾರದ ಆನ್ಲೈನ್ ವ್ಯಾಪಾರವೂ ಸಹ ಬಂಡವಾಳಗಾರರಿಗೆ ರವಾನೆದಾರಿಗೆ ಮಾತ್ರ ಅನುಕೂಲವಾಗಿದ್ದು ರೈತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲದಂತಾಗಿದೆ, ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕೂಡಲೇ ತೆಂಗು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಮತ್ತು  ಉತ್ಪಾದನೆಗಾಗಿ ಪಡೆದಿರುವ ಸಾಲಗಳನ್ನು ಮನ್ನಾ ಮಾಡುವುದರ ಜೊತೆಗೆ ಕೊಬ್ಬರಿಗೆ 15 ಸಾವಿರ ಬೆಂಬಲ ಬೆಲೆ ನಿಗದಿಮಾಡಬೇಕು ಎಂದು ಮತ್ತೊಬ್ಬ ಜಿಲ್ಲಾ ಸಹ ಸಂಚಾಲಕರಾದ ಎಂ. ನೌಷಾದ್ ಸೆಹಗನ್ ಈ ಆಗ್ರಹಕ್ಕೆ ದನಿಗೂಡಿಸಿದ್ದಾರೆ.