Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಹಾಸನದಲ್ಲಿ ದಲಿತ ಹಕ್ಕುಗಳ ಜಿಲ್ಲಾ ಸಮಾವೇಶ

Monday, 13 June 2016

ಹಾಸನ, ಜೂನ್ 13: ಒಳ ಮೀಸಲಾತಿಯ ಬೇಡಿಕೆಗಿಂತ ಎಲ್ಲರೂ ಒಟ್ಟಿಗೆ ಸೇರಿ ಮೀಸಲಾತಿಯ ಉಳಿವಿಗಾಗಿ ಚಳುವಳಿಯನ್ನು ರೂಪಿಸಬೇಕಾದ ಅನಿವಾರ್ಯತೆ ದಲಿತ ಚಳುವಳಿಗಳ ಮುಂದಿದೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿಯವರು ಹೇಳಿದರು. ಹಾಸನ ನಗರದ ಸ್ವಾಭಿಮಾನ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 125 ನೇ ಜನ್ಮ ವರ್ಷಾಚರಣೆಯ ಅಂಗವಾಗಿ “ದಲಿತ ಹಕ್ಕುಗಳ ಜಿಲ್ಲಾ ಸಮಾವೇಶ”ವನ್ನು ಉಧ್ಘಾಟಿಸಿ ಮಾತನಾಡುತ್ತಾ ಪ್ರಸ್ತುತ ರಾಜ್ಯ ಮತ್ತು ಕೇಂದ್ರದಲ್ಲಿರುವ ಎರಡೂ ಸರ್ಕಾರಗಳು ಅಂಬೇಡ್ಕರ್‍ರವರ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸಕ್ಕೆ ಮುಂದಾಗುತ್ತಿವೆ ಎಂದು ದೂರಿದರು.

ರಾಜ್ಯ ಸರ್ಕಾರ ಎಸ್ಸಿಪಿ ಮತ್ತು ಟಿಎಸ್ಪಿ ಉಪ ಯೋಜನೆಗೆಂದು 19 ಸಾವಿರ ಕೋಟಿ ರೂಗಳನ್ನು ಬಿಡುಗಡೆಮಾಡಿದ್ದು ಇದರಲ್ಲಿ ಬಗುಪಾಲು ಹಣವನ್ನು ದಲಿತ ಗ್ರಾಮಗಳ ಮೂಲಭೂತ ಸೌಲಭ್ಯಗಳಾದ ರಸ್ತೆ ಮತ್ತಿತರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಆದರೆ ದಲಿತರ ನಿಜವಾದ ಅಭಿವೃದ್ಧಿಯಾಗಬೇಕಾದರೆ ಅವರ ಮಾನವಾಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಬೇಕು ಅದರಲ್ಲಿ ಶಿಕ್ಷಣ, ಆರೋಗ್ಯ, ಉಧ್ಯೋಗದಂತಹ ಕೆಲಸಗಳಿಗೆ ಹೆಚ್ಚಿನ ಗಮನ ನೀಡುತ್ತಿಲ್ಲ.

ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಶೇ 76 ರಷ್ಟಿದ್ದರೆ ಅದರಲ್ಲಿ ದಲಿತರ ಸಾಕ್ಷರತೆಯ ಪ್ರಮಾಣ ಕೇವಲ ಶೇ 20 ರಷ್ಟಿದೆ. ಇದೆ ದಲಿತರ ಅಭಿವೃದ್ಧಿಯ ನಿಜವಾದ ಮಾನದಂಡ. ಈ ಪರಿಸ್ಥಿತಿ ಬದಲಾಗದಿದ್ದರೆ ದಲಿತರ ಉದ್ದಾರ ಸಾಧ್ಯವಿಲ್ಲ ಎಂದರು. ಸರ್ಕಾರವೇ ಬಿಡುಗಡೆ ಮಾಡಿರುವ ಅಭಿವೃದ್ಧಿ ವರದಿಯ ಪ್ರಕಾರ ಜಿಲ್ಲೆಯಲ್ಲಿ 1 ಎಕ್ಕರೆ ಕೃಷಿ ಭೂಮಿಯನ್ನು ಹೊಂದಿರುವ ದಲಿತರು ಶೇ 71, 2 ಎಕ್ಕರೆ ಹೊಂದಿರುವ ದಲಿತರು ಶೇ 23, 4 ರಿಂದ 10 ಎಕ್ಕರೆ ಕೃಷಿ ಭೂಮಿಯನ್ನು ಹೊಂದಿರುವ ದಲಿತರು ಕೇವಲ ಶೇ 0.65 ರಷ್ಟಿದ್ದಾರೆ ಇದರಿಂದ ಕೃಷಿ ಯೋಗ್ಯ ಭೂಮಿ ಯಾರ ಕೈಯಲ್ಲಿ ಕೇಂದ್ರೀಕೃತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನಗಳನ್ನು ಹೊಂದಿರುವ ನಾಗರೀಕ ಸಮಾಜದಲ್ಲಿ ಇಂದಿಗೂ ಶೇ 99 ರಷ್ಟು ದೇವಸ್ಥಾನಗಳಿಗೆ ದಲಿತರ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ಪ್ರತಿನಿತ್ಯ ದಲಿತರ ಮೇಲಿನ ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಲು ಎಲ್ಲರೂ ಸಂಘಟಿತರಾಗಿ ಚಳುವಳಿಯನ್ನು ಬಲಪಡಿಸುವ ಅನಿವಾರ್ಯತೆ ಇದೆ ಎಂದರು.

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿವೈಎಫ್‍ಐನ ರಾಜ್ಯ ಕಾರ್ಯದರ್ಶಿಗಳಾದ ಬಿ.ರಾಜಶೇಕರ ಮೂರ್ತಿಯವರು ಹಸನ ಜಿಲ್ಲೆ ಮೂಲತಹ ಪಾಳೇಗಾರಿ ಭೂಮಾಲಿಕರ ಹಿಡಿತದಲ್ಲಿರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದರೂ ಅವುಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮತ್ತು ದಲಿತರ ಪರ ಧ್ವನಿ ಎತ್ತುವವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಇದಕ್ಕೆ ಜಗ್ಗದೆ ಸಿಗರನಹಳ್ಳಿಯ ದಲಿತರಿಗೆ ನ್ಯಾಯ ಕೊಡಿಸಿದ ಎಲ್ಲ ಚಳುವಳಿಗಾರರಿಗೂ ಅಭಿನಂದಿಸಿದರು. ಅಂಬೇಡ್ಕರ್ ಕೇವಲ ದಲಿತರ ನಾಯಕರಾಗಿರಲಿಲ್ಲ ಬದಲಾಗಿ ದೇಶದ ಎಲ್ಲ ಶೋಷಿತರ ನಾಯಕರಾಗಿದ್ದರು ಆದ್ದರಿಂದ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದರು. ಖಾಸಗೀಕರಣದಿಂದ ಶಿಕ್ಷಣ, ಆರೋಗ್ಯ ಅತ್ಯಂತ ದುಬಾರಿಯಾಗಿರುವುದರಿಂದ ದಲಿತರು ಇವುಗಳಿಂದ ವಂಚಿತರಾಗುತ್ತಿದ್ದಾರೆ ಮತ್ತು ದಲಿತರಿಗೆ ಮನೆ ನಿವೇಶನ ಮತ್ತು ಸ್ಮಶಾನ ಒಂದು ದೊಡ್ಡ ಸಮಸ್ಯೆಯಾಗಿದೆ ಎಂದರು.

ಮಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ ಜಿಲ್ಲೆಯ ಎಲ್ಲ ಜನಪರ ಚಳುವಳಿಗಳು ಮತ್ತು ದಲಿತ ಚಳುವಳಿಗಳು ಒಟ್ಟಿಗೆ ಸೇರಿದ್ದರಿಂದ ಮಾತ್ರ ಸಿಗರನಹಳ್ಳಿಯಂತಹ ಸಮಸ್ಯೆಯನ್ನು ಒಂದು ತಾತ್ವಿಕ ಹಂತಕ್ಕೆ ಮುಟ್ಟಿಸಲು ಸಾಧ್ಯವಾಯಿತು. ಇದೇ ಮಾದರಿಯಲ್ಲಿ ರಾಜ್ಯದಾಧ್ಯಂತ ಚಳುವಳಿಗಳು ವಿಷಯಾಧಾರಿತವಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು. ಜಾತಿ ಮತ್ತು ವರ್ಗವನ್ನು ಬೇರೆ ಬೇರೆಯಾಗಿ ನೋಡುವ ಪ್ರಯತ್ನಗಳು ನಡೆಯುತ್ತಿದ್ದು ಇದು ಸರಿಯಾದ ಕ್ರಮವಲ್ಲ ಬದಲಾಗಿ ಭಾರದಲ್ಲಿನ ಜಾತಿಯೊಳಗೆ ವರ್ಗ, ವರ್ಗದೊಳಗೆ ಜಾತಿ ಇದೆ. ಇವೆರಡನ್ನು ಒಟ್ಟೊಟ್ಟಿಗೆ ಎದುರಿಸಿದೆ ಮಾತ್ರ ದಲಿತರು ಮತ್ತು ಶೋಷಿತರ ವಿಮೋಚನೆ ಸಾಧ್ಯ ಎಂದರು.

ಸಮಾವೇಶದಲ್ಲಿ ಹಿರಿಯ ದಲಿತ ಮುಖಂಡರಾದ ನಾರಾಯಣದಾಸ್ ಭಾಗವಹಿಸಿದ್ದರು ಅಧ್ಯಕ್ಷತೆಯನ್ನು ಡಿಎಚ್‍ಎಸ್ ಮುಖಂಡರಾದ ಕೆ.ಎಸ್.ಮಂಜುನಾಥ್ ವಹಿಸಿದ್ದರು, ಸ್ವಾಗತವನ್ನು ಮಧುಸೂಧನ್, ವಂದನಾರ್ಪಣೆ ಪ್ರದೀಪ್‍ಕುಮಾರ್ ಮಾಡಿದರು ಕಾರ್ಯಕ್ರಮವನ್ನು ಪೃಥ್ವಿ ನಿರ್ವಹಿಸಿದರು.

ನೂತನ ಸಮಿತಿ ಆಯ್ಕೆ:

ಸಮಾವೇಶದ ಅಂತ್ಯದಲ್ಲಿ 29 ಜನರನ್ನೊಳಗೊಂಡ ಜಿಲ್ಲಾ ಮಟ್ಟದ ದಲಿತ ಹಕ್ಕುಗಳ ಸಮಿತಿಯನ್ನು ಆಯ್ಕೆ ಮಾಡಲಾಯಿತು ಜಿಲ್ಲಾ ಸಂಚಾಲಕರಾಗಿ ಪೃಥ್ವಿ ಎಂ.ಜಿ, ಸಹಸಂಚಾಲಕರುಗಳಾಗಿ ಮಂಜುನಾಥ್ ಕೆ.ಎಸ್, ವಿನೋದ್, ಮಧುಸೂದನ್, ಮೀನಾಕ್ಷಿ, ರಾಜು ಸಿಗರನಹಳ್ಳಿಯವರನ್ನು ಆಯ್ಕೆ ಮಾಡಲಾಯಿತು.