ಅಕ್ಷರ ದಾಸೋಹ ನೌಕರ ಸಂಘದ ಬೆಳ್ತಂಗಡಿ ತಾಲೂಕು ಸಮಾವೇಶ

ಸಂಪುಟ: 
10
ಸಂಚಿಕೆ: 
28
Saturday, 30 July 2016

ಬೆಳ್ತಂಗಡಿ, ಜೂನ್ 30 :  ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಬೆಳ್ತಂಗಡಿ ತಾಲೂಕಿನ 13 ನೇ ವಾರ್ಷಿಕ ಸಮಾವೇಶ ನಡೆದು ನೂತನ ಸಮಿತಿ ರಚಿಸಲಾಯಿತು. ಮುಖ್ಯ ಅಥಿತಿಗಳಾಗಿ ಸಮಾವೇಶವನ್ನು ಉದ್ಗಾಟಿಸಿ ಮಾತಾಡಿದ ಸಿಐಟಿಯು ರಾಜ್ಯ ಉಪಾದ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಅವರು ನಮ್ಮನ್ನಾಳುತ್ತಿರುವ ಸರಕಾರಗಳಿಗೆ ಬಿಸಿಯೂಟ ನೌಕರರ ಕಷ್ಟಗಳು ಕಾಣುತ್ತಿಲ್ಲ, ನಿರಂತರ ಬೆಲೆ ಏರಿಕೆಗಳ ಸಮಾಜದಲ್ಲಿ ಬದುಕಲು ಕನಿಷ್ಟ ಮಾಸಿಕ ರೂ 18,000 ವೇತನ ವನ್ನಾದರೂ ನೀಡಬೇಕು. ಆದರೆ ಸರಕಾರ ಇವರಿಗೆ ಕೇವಲ 2,000 ರೂ ನೀಡಿ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸೂಚಿಸಿದೆ.

ಇವರ ಮಕ್ಕಳಿಗೆ ಮನೆಯಲ್ಲಿ ಊಟ ಹೇಗೆ ಕೊಡಬೇಕು ಎಂಬ ಚಿಂತನೆ ಸರಕಾರಕ್ಕೆ ಇಲ್ಲದಾಗಿದೆ ಎಂದರು. ನಮ್ಮ ಸಂಘಟಿತ ಹೋರಾಟದಿಂದ ಮಾತ್ರಾ ನಮ್ಮ ಬದುಕನ್ನು ಉಳಿಸಬಹುದು ಎಂದ ಅವರು ಬೆಂಗಳೂರಿನ ಗಾರ್ಮೆಂಟ್ ್ಸಕಾರ್ಮಿಕರು ನಡೆಸಿದ ಸಮರಶೀಲ ಹೋರಾಟದಿಂದ ಪಿ.ಎಫ್ .ಮೇಲೆ ಸವಾರಿ ನಡೆಸಲು ಹೊರಟ ನರೇಂದ್ರ ಮೋದಿ ಸರಕಾರಕ್ಕೆ ಮುಖಭಂಗವಾಗಿದೆ. ಕಾರ್ಮಿಕರ ಹೋರಾಟಕ್ಕೆ ಬೆದರಿದ ಮೋದಿ ಸರಕಾರವು ಪಿ.ಎಫ್.ನ್ನು ಮೊದಲಿನಂತೆಯೇ ಉಳಿಸಲು ನಿರ್ದರಿಸಿತು. ಅದೇರೀತಿ ನಮ್ಮ ವೇತನ ಹೆಚ್ಚಿಸಿಕೊಳ್ಳಲು ಸರಕಾರವನ್ನು ನಡುಗಿಸುವ ರೀತಿಯ ದಿಟ್ಟ ಹೋರಾಟಕ್ಕೆ ಸಿದ್ದರಾಗಿ ಎಂದು ಅವರು ಕರೆ ನೀಡಿದರು.

ಸಮಾವೇಶದಲ್ಲಿ ಗೌರವಾದ್ಯಕ್ಷರಾಗಿ ಸಿಐಟಿಯು ಮುಖಂಡರಾದ ಶ್ರೀಮತಿ ದೇವಕಿ, ಅದ್ಯಕ್ಷರಾಗಿ ಶ್ರೀಮತಿ ಲಲಿತ ಕುವೆಟ್ಟು ಶಾಲೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸುಮಿತ್ರ ಅರಸಿನಮಕ್ಕಿ ಶಾಲೆ, ಕೋಶಾಧಿಕಾರಿಯಾಗಿ ಹೇಮ ಮುಂಡಾಜೆ ಶಾಲೆ ಉಪಾದ್ಯಕ್ಷರುಗಳಾಗಿ  ಮಾರ್ಗರೇಟ್ ಬೆಳ್ತಮಗಡಿ, ಸೀತಮ್ಮ ಪುದುವೆಟ್ಟು, ಜಲಜಾಕ್ಷಿ ಪಡಂಗಡಿ, ವೇದಾವತಿ ನಾವೂರು, ಜೊತೆಕಾರ್ಯರ್ಶಿಗಳಾಗಿ ಸರೋಜ ಗೇರುಕಟ್ಟೆ, ಜ್ಯೋತಿ ಪೆರಿಂಜೆ, ಗೀತಾ ಶಿರ್ಲಾಲ್, ರೇವತಿ ಕರಂಬಾರು, ವಾರಿಜ ಅಳದಂಗಡಿ, ಸರ್ವಾನುಮತದಿಂದ ಆಯ್ಕೆಯಾಗಿದ್ದಲ್ಲೆದೆ ಒಟ್ಟು 30 ಮಂದಿಯ ನೂತನ ಸಮಿತಿಯನು ಆಯ್ಕೆ ಮಾಡಲಾಯಿತು. ದಿನಾಂಕ 03-07-2016 ರಂದು ಮಂಗಳೂರಲ್ಲಿ ನಡೆಯುವ ಅಕ್ಷರ ದಾಸೋಹ ದ.ಕ. ಜಿಲ್ಲಾ ಸಮಾವೇಶಕ್ಕೆ ಪ್ರತಿ ಶಾಲೆಯಿಂದ ಒಬ್ಬರಂತೆ ಒಟ್ಟು 200 ಜನ ಭಾಗವಹಿಸಲು ನಿರ್ಧರಿಸಲಾಯಿತು. ಶ್ರೀಮತಿ ಲಲಿತ ಅವರ ಅದ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಸಿಐಟಿಯು ಮುಖಂಡರುಗಳಾದ ಶ್ರೀಮತಿ ನೆಬಿಸ, ಶ್ರೀ ಜಯರಾಮ ಮಯ್ಯ, ಶ್ರೀ ರಾಮಚಂದ್ರ, ಶ್ರೀಮತಿ ಪುಷ್ಪಾ, ಶ್ರೀಮತಿ ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಮೊದಲಿಗೆ ದೇವಕಿ ಸ್ವಾಗತಿಸಿ ಕೊನೆಗೆ ಸುಮಿತ್ರ ವಂದಿಸಿದರು. ಸಭೆಯಲ್ಲಿ ಜನಶ್ರೀ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

 

 

    ಬಿ.ಎಂ.ಭಟ್