ವೈದ್ಯಕೀಯ ಶುಲ್ಕ ಹೆಚ್ಚಳ ವಿರೋಧಿಸಿ ಎಸ್‍ಎಫ್‍ಐ ಪ್ರತಿಭಟನೆ

Sunday, 26 June 2016

ಹಾವೇರಿ, ಜೂನ್ 26: ಭಾರತ ವಿದ್ಯಾರ್ಥಿ ಪೆಡರೆಷನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ,  ವೈದ್ಯಕೀಯ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡಸಿದರು. ನಗರದ ಸರ್ಕಾರಿ ನೌಕರರ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಗುರುಭವನದ ಮೂಲಕ ಸಾಗಿ ಜೆಪಿ ವೃತ್ತದ ಬಳಿ ಸಮಾವೇಶಗೊಂಡರು.

ಪ್ರತಿಭಟನಾಕಾರರನ್ನು ಉದ್ಧೇಶಿಸಿ ಎಸ್‍ಎಪ್‍ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಮಾತನಾಡಿ, ರಾಜ್ಯದ ಆಹಿಂದ ಸರ್ಕಾರವು ವಿಧ್ಯಾರ್ಥಿಗಳಿಗೆ “ಶುಲ್ಕ ಹೆಚ್ಚಳ  ಭಾಗ್ಯವು” ನೀಡಿದೆ. ವೈಧ್ಯಕೀಯ ಮತ್ತು ದಂತ ವೈಧ್ಯಕೀಯ ಕೊರ್ಸನ ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಹಂಚಲಾಗುವ ಸರ್ಕಾರಿ ಕೋಟಾದ ಸೀಟುಗಳಿಗೆ ರಾಜ್ಯ ಸರ್ಕಾರವು, ಶೇ.30 ರಷ್ಟು ಶುಲ್ಕ ಹೆಚ್ಚಳ ಮಾಡುವ ಮೂಲಕ ಬಡ, ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳ ವೈದÀ್ಯರಾಗುವ ಕನಸಿಗೆ ಕೊಡಲಿ ಪೆಟ್ಟು ನೀಡಿದೆ. ಸರ್ಕಾರವು ವಿಧ್ಯಾರ್ಥಿಗಳ ಹಿತ ಕಾಪಾಡುವ ಬದಲಾಗಿ ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಶೇ. 10 ರಷ್ಟು ಶುಲ್ಕ ಹೆಚ್ಚಳದ ಪ್ರಸ್ತಾಪ ನೀಡಿ ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ರತ್ನಗಂಬಳಿ ಹಾಸಿದೆ. ಅಲ್ಲದೆ ಶೇ. 10ರಷ್ಟು ಸಾಲದೆಂದು ಖಾಸಗೀ ಶಿಕ್ಷಣ ಸಂಸ್ಥೆಗಳ ಜೊತೆ ಶಾಮೀಲಾಗಿ ಶೇ. 30ರಷ್ಟು ಶುಲ್ಕ ಹೆಚ್ಚಳ ಮಾಡುವ ತಂತ್ರಕ್ಕೆ ಕೈ ಜೋಡಿಸಿದೆ.

ಸರ್ಕಾರ ಈ ನಿಧಾರದಿಂದದ ಹಿಂದೆ ಸರಿಯದೆ ಹೋದಲ್ಲಿ ಎಸ್‍ಎಫ್‍ಯ ರಾಜ್ಯವ್ಯಾಪಿ ಉಗ್ರ ಪ್ರತಿಬಟನೆಗೆ ಮುಂದಾಗಬೇಕಾಗುತ್ತದೆ ಹಾಗೂ ಬೆಂಗಳೂರಿನ ಸಿಇಟಿ ಸೆಲ್ ಮುಂದೆ ತೀವ್ರ ತೆರನಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೆವೆ ಎಂದರು.

ಎಸ್‍ಎಪ್‍ಐ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಪೂಜಾರ ಮಾತನಾಡಿ,  ಸರ್ಕಾರಿ ಸೀಟುಗಳ ಸಂಖ್ಯೆ ವೈಧ್ಯಕೀಯ ಶೇ. 60ರಷ್ಟು, ದಂತ ವೈಧ್ಯಕೀಯ ಶೇ. 60ರಷ್ಟು ಇರಬೇಕಾದ ಸೀಟುಗಳ ಪ್ರಮಾಣ ಇಂದು ವೈಧ್ಯಕೀಯ ಶೇ. 40ರಷ್ಟು, ದಂತ ವೈಧ್ಯಕೀಯ ಶೇ. 35ರಷ್ಟಕ್ಕೆ ಬಂದಿದೆ. ಇದು ಸರ್ಕಾರದ ವಿದ್ಯಾರ್ಥಿ ವಿರೋಧಿ ದೊರಣೆಯಾಗಿದೆ. ರಾಜ್ಯ ಸರ್ಕಾರವು ವೈಧ್ಯಕೀಯ 15,000, ದಂತ ವೈಧ್ಯಕೀಯ 10,000, ಹೆಚ್ಚಳ ಮತ್ತು ಕಾಮೆಡ್-ಕೆ ಯ ಪ್ರವೇಶ ಶುಲ್ಕ  ವೈಧ್ಯಕೀಯ ರೂ.1.5 ಲಕ್ಷ, ದಂತ ವೈಧ್ಯಕೀಯ ರೂ.1.15 ಲಕ್ಷ  ಹೆಚ್ಚಳ ಮಾಡಿದೆ. ಈ ರೀತಿ ಶುಲ್ಕ ಹೆಚ್ಚಳ ಮಾಡಿ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ ಎಂದು ಅರಿಯದೆ ಹೋಗಿದೆ. ಬರಗಾಲದ ಸಮಯದಲ್ಲಿ ಶುಲ್ಕ ಹೆಚ್ಚಳ  ಮಾಡಿ ಮತ್ತೆ  ರೈತ, ಕೂಲಿಕಾರರನ್ನು ಸಾಲದ ಕೂಪಕ್ಕೆ  ತಳ್ಳಲು ಹೊರಟಿದೆ. ರಾಜ್ಯ ಸರ್ಕಾರ ಕಾಸಗಿ ಶಿಕ್ಷನ ಸಂಸ್ಥೆಗಳ ಎಜೆಂಟರಂತೆ ವರ್ತಿಸುತ್ತಿದೆ. ಸರ್ಕಾರದ ಈ ಖಾಸಗೀಕರಣದ ನಿಲುವು ಬದಲಾಗದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಬೆಕಾಗುತ್ತದೆ ಎಂದರು. ಕೂಡಲೆ ಏರಿಸಿರುವ ಶುಲ್ಕವನ್ನು ಕಡಿತ ಮಾಡಬೇಕು.  ಹಾಗೂ ಈ ರೀತಿಯ ಅವೈಜ್ಞಾನಿಕ  ಶುಲ್ಕ ಏರಿಕೆ ಪ್ರಕ್ರಿಯೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‍ಎಫ್‍ಐ ಜಿಲ್ಲಾ ಅಧ್ಯಕ್ಷರಾದ ರೇನುಕಾ ಕಹಾರ, ಜಿಲ್ಲಾ ಕಾರ್ಯದರ್ಶಿ ಸುಭಾಸ ಎಂ, ಶಶಿಧರ ನಾಯಕ್, ಜ್ಯೋತಿ ದೊಡ್ಮನಿ, ಪ್ರತಿಮಾ, ವಿನಾಯಕ ವೈ, ಪ್ರಭು ಮಳ್ಳಿಮಠ, ಬಸವರಾಜ ಬೋವಿ, ನೀಲಮ್ಮ ಬಿ.ಎಸ್., ಮಧು ಯು, ಬೀರಪ್ಪ ಲಮಾಣಿ, ಆಶಾ ಛಲವಾದಿ, ಕೃಷ್ನ, ಮೆಹಬೂಬಅಲಿ, ಮಲ್ಲಪ್ಪ ನಾಗರೊಳ್ಳಿ, ಹಾಗೂ ಮುಂತಾದವರಿದ್ದರು.

 

 

 ಸುಭಾಸ ಎಂ