ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂದು ಡಿವೈಎಫ್‍ಐನಿಂದ ಪ್ರತಿಭಟನೆ

Saturday, 25 June 2016

ಬಳ್ಳಾರಿ, ಜೂನ್ 25: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ) ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಸಮಿತಿ ಮತ್ತು ರಾಣಿಪೇಟೆ ಸಂಚಾಲನ ಸಮಿತಿ ವತಿಯಿಂದ ನಗರಸಭೆಯ ವ್ಯಾಪ್ತಿಯ 5ನೇ ವಾರ್ಡ್‍ನ ರಾಣಿಪೇಟೆ ಪ್ರದೇಶದ ಮನೆಗಳಿಗೆ ಸರಿಯಾಗಿ ಕುಡಿಯುವ ನೀರನ್ನು ಬಿಡುತ್ತಿಲ್ಲ ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈಗ ಬಿಡುತ್ತಿರುವ ನೀರಿನಲ್ಲಿ ಒಳಚರಂಡಿಯ ಮತ್ತು ಚರಂಡಿಯ ನೀರು ಸೇರಿರುತ್ತದೆ, ಪ್ರತಿ ಬಾರಿಯೂ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ, ಅಷ್ಟೇಯಲ್ಲ ನೀರನ್ನು ಸಹ ಸರಿಯಾದ ಸಮಯಕ್ಕೆ ಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಲವೋಮ್ಮೆ ಮೂರು ದಿನಗಳಾದರು ಸರಿಯಾಗಿ ನೀರನ್ನು ಬಿಡದೆ, ಸಿಹಿನೀರಿನ ಜೊತೆಗೆ ಉಪ್ಪು ನೀರನ್ನು ಸೇರಿಸಿ ಬಿಡುತ್ತಾರೆ. ಈ ರೀತಿಯಾದ ನೀರಿನ ಸಮಸ್ಯೆಯಿಂದ ಇಲ್ಲಿಯ ಏರಿಯಾದ ಜನರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಹಲವು ದಿನಗಳಿಂದ ಈ ಸಮಸ್ಯೆ ಇದ್ದು, ಇದರ ಬಗ್ಗೆ ತಕ್ಷಣವೇ ನಗರಸಭೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ನಗರಸಭೆ ಆಯುಕ್ತರಿಗೆ ಹಾಗೂ 5ನೇ ವಾರ್ಡ್ ನಗರಸಭೆ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ರೂಪೇಶ್ ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ಬಿಸಾಟಿ ಮಹೇಶ, ಕಾರ್ಯದರ್ಶಿ ಯಲ್ಲಾಲಿಂಗ, ಮುಖಂಡರಾದ ಕಲ್ಯಾಣಯ್ಯ, ಕೆ.ರಮೇಶ್, ವಿ.ಸ್ವಾಮಿ, ಯಲಾಪ್ಪ, ಸೂರ್ಯಕಿರಣ.ಬಿ.ಟಿ.ಮ ದರ್ಶನ್.ಎಂ, ಭರತ್ ಡಿ.ಎಲ್, ರಾಣಿಪೇಟೆ ಸಂಚಾಲನ ಸಮಿತಿ ಸದಸ್ಯರುಗಳು: ಶ್ರೀನಿವಾಸ ಜೋಶಿ, ಅರುಣ್,ಕೆ. ಶ್ರೀಕಾಂತ್, ದೇವರಾಜ್.ಎಸ್.ನರಸಿಂಹ. ಆರ್, ಎಂ.ಸಂತೋಷ್, ರಾಕೇಶ್, ಎಲ್, ಕಾರ್ತಿಕ್, ವಿಶ್ವಪ್ರಸಾದ್ ಜಿ.ಹಿ., ಸಿದ್ದಾರ್ಥ, ಜಿ.ಎಫ್., ಎನ್. ದಯಾನಂದ, ಶ್ರೀಶಾದ್ರಿ, ಮಣಿಕಂಠ, ಪವಾನ್ ಮತ್ತು ಸ್ಥಳೀಯರಾದ ಬಿ.ತಾಯಪ್ಪ ನಾಯಕ, ಮಲ್ಲಿಕಾರ್ಜುನ್, ಪ್ರಕಾಶ್-ವಕೀಲರು ಮುಂತಾದವರು ಭಾಗವಹಿಸಿದರು.