ಸಾರಿಗೆ ನೌಕರರ ವೇತನ ಪರಿಷ್ಕರಣೆ-ಕಾರ್ಮಿಕ ಸಂಘಘಳೊಂದಿಗೆ ಚರ್ಚಿಸದ ಸರಕಾರ

Tuesday, 14 June 2016

ಸಾರಿಗೆ ಸಚಿವನ್ನು ಭೇಟಿ ಮಾಡಿದ ಸಿಐಟಿಯು ನೀಯೋಗ:

ತುಮಕೂರು, ಜೂನ್ 14: ರಾಜ್ಯದ  ನಾಲ್ಕು ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ವೇತನ ಪರಿಷ್ಕರಣೆಯು ದಿನಾಂಕ: 01-01-2016 ರಿಂದಲೇ ಜಾರಿಗೆ ಬರಬೇಕಾಗಿದ್ದು, ಈ ಬಗ್ಗೆ ಸರ್ಕಾರ ಏಕಪಕ್ಷಿಯವಾಗಿ ತೀರ್ಮಾನಿಸದೆ ಸಾರಿಗೆ ನೌಕರರ ಸಂಘಗಳೊಂದಿಗೆ ಚರ್ಚಿಸಿ ಶ್ರೀಘ್ರದಲ್ಲಿ ತ್ರಿಪಕ್ಷಿಯ ಒಪ್ಪಂದಕ್ಕೆ ಬರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್  [ಸಿಐಟಿಯು)ನ  ನೀಯೋಗವು ಕರ್ನಾಟಕ ರಾಜ್ಯ  ಸಾರಿಗೆ ಸಚಿವರಾದ ಶ್ರೀಯುತ ರಾಮಲಿಂಗರೆಡ್ಡಿಯವರನ್ನು ಭೇಟಿಮಾಡಿ  ಒತ್ತಾಯಿಸಿತು.

ಕಾರ್ಮಿಕರ ಬೇಡಿಕೆಗಳ  ಪಟ್ಟಿಯನ್ನು  ಈಗಾಗಲೇ ಸಾರಿಗೆ ನಿಗಮದ ಅಧಿಕಾರಿಗಳಿಗೆ ಹಾಗು ಸಾರಿಗೆ ಸಚಿವರಿಗೂ ಸಲ್ಲಿಸಲಾಗಿದೆ, ಈ ಬಗ್ಗೆ ದಿನಾಂಕ: 23.ಏಪ್ರಿಲ್ 2016ರಂದು ಎಲ್ಲಾ ನಿಗಮಗಳ ಅಧಿಕಾರಿಗಳು ಹಾಗು ಸಾರಿಗೆ ನೌಕರರ ಫೆಡರೇಶನ್ ಸಿಐಟಿಯುನ ಪಧಾರಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ಸಹ ನಡೆದಿದೆ. ಈ ಬಗ್ಗೆ  ಸರ್ಕಾರ  ಏಕಪಕ್ಷಿಯವಾಗಿ ವೇತನ ಹೆಚ್ಚಳ ಮಾಡುವ ಅಲೋಚನೆಯನ್ನು ಕೈಬಿಟ್ಟು ಬೆಲೆ ಏರಿಕೆಯಿಂದ ತತ್ತರಿಸಿರುವ ಕಾರ್ಮಿಕರಿಗೆ ನ್ಯಾಯೋಚಿತ ಹಾಗು ಪ್ರಜಾಸತ್ತಾತ್ಮಕವಾಗಿ ನೌಕರರ ಸಂಘಟನೆಗಳ ಜೊತೆ ಚರ್ಚಿಸಿ ವೇತನ ಪರಿಷ್ಕರಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ  ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್ ರಾಜ್ಯಧ್ಯಕ್ಷರಾದ ಹೆಚ್.ಡಿ.ರೇವಪ್ಪ. ಉಪಾಧ್ಯಕ್ಷರಾದ ಪ್ರಕಾಶ್.ಕೆ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಆನಂದ, ತುಮಕೂರು ಜಿಲ್ಲಾ ಅಧ್ಯಕ್ಷರಾದ ಎ.ದೇವರಾಜು ಮತ್ತಿರರರು ಉಪಸ್ಥಿತರಿದ್ದರು.

ಸರ್ಕಾರರ ಮತ್ತು ಸಾರಿಗೆ ನಿಗಮದ ಅಧಿಕಾರಿಗಳು ತಡ ಮಾಡದೆ ವೇತನ ಪರಿಷ್ಕರಣೆ ಒಪ್ಪಂದಕ್ಕೆ ಮುಂದಾಗುವಂತೆ ತುಮಕೂರು ಜಿಲ್ಲಾ ಸಮಿತಿಯು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರುಲ. ಈ ಬಗ್ಗೆ ಮೇ ತಿಂಗಳಲ್ಲಿ ಜಿಲ್ಲಾ ಮಟ್ಟದ ಜಾಥಾ, ಸಹಿ ಸಂಗ್ರಹ ಚಳುವಳಿ ಮತ್ತು ಜಿಲ್ಲಾ ಸಮಾವೇಶವನ್ನು ನಡೆಸಿ ಸರ್ಕಾರದ ಗಮನಕ್ಕೆ ತಂದಿದ್ದರೂ ಸಹ ಈ ಬಗ್ಗೆ ಗಮನ ಹರಿಸದ ಸರ್ಕಾರದ ವಿರುದ್ಧ ನೌಕರರಲ್ಲಿ ಬೇಸರ ಹೆಚ್ಚುತ್ತಿದೆ ಎಂದು ತನ್ನ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಸೈಯದ್ ಮುಜೀಬ್, ಜಿಲ್ಲಾಧ್ಯಕ್ಷರಾದ ಎ.ದೇವರಾಜು, ಉಪಾಧ್ಯಕ್ಷರಾದ ಶಮೀಉಲ್ಲಾ, ಪ್ರಧಾನ ಕಾರ್ಯದರ್ಶಿ ಎ.ರಮೇಶ್ ಉಪಸ್ಥಿತರಿದ್ದರು.