ಬಂಜಾರ ಸಮಾಜ ಕಡೆಗಣಿಸಿ ಹಲ್ಲೆಕೊರರ ಬೆಂಬಲಕ್ಕೆ ನಿಂತಿರುವ ಭೀಮಸಿಂಗ ರಾಠೋಡ

Tuesday, 14 June 2016

ಗಜೇಂದ್ರಗಡ, ಜೂನ್ 14: ಮೇ 24, 2016ರಂದು ಮಾಜಿ ಸಚಿವ ಕಳಕಪ್ಪ ಬಂಡಿ ಅವರ ವನಶ್ರೀ ಪೆಟ್ರೋಲ್ ಬಂಕನಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರ ಶ್ರೀ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ಬಂಜಾರ ಸಮಾಜದ ನಾಯಕರು, ಹಿರಿಯರು ಯುವಕರು ಸೇರಿ ಪತ್ರಿಕಾ ಗೋಷ್ಠಿ ನಡೆಸಿದರು.

ನಿನ್ನೆ ದಿನ ಸೋಮವಾರ ದಂದು ಗದಗ ಐಬಿಯಲ್ಲಿ ಭೀಮಸಿಂಗ್ ರಾಠೋಡ್ ನೀಡಿರುವ ಪತ್ರಿಕಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಂಜಾರ ಸಮಾಜದ ನಾಯಕರಾದ ಯಮನಪ್ಪ ರಾಠೋಡರವರು ಮಾತನಾಡಿ "ಬಂಜಾರ ಸಮಾಜವನ್ನು ಕಡೆಗಣಿಸಿ ಹಲ್ಲೆಕೊರರ ಬೆಂಬಲಕ್ಕೆ ನಿಂತಿರುವ ಭೀಮಸಿಂಗ ರಾಠೋಡ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ. ಅನ್ಯಾಯಕ್ಕೊಳಗಾದ ಒಂದು ಕುಟುಂಬದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಅವರನ್ನು ಭಯಗೊಳಿಸುತ್ತಿರುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಅನ್ಯಾಯಕ್ಕೆ ಒಳಗಾದ ಶಿವಪ್ಪ ಮಾಳೋತ್ತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಸಮಾಜದ ಒತ್ತಾಯವಾಗಿದೆ. ಆದರೆ ಶಿವಪ್ಪ ಕುಟುಂಬವನ್ನು ಕಡೆಗಣಸಿ ಬಂಡಿ ಪರ ಇರುವ ಮುಖಂಡರು ಮಾತ್ರ ಜೊತೆ ಸೇರಿ ಕತ್ತಲಿನಲ್ಲಿ ರಾಜಿ ಸಂಧಾನವಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ಸರಿಯಾದದುದಲ್ಲ ಎಂದರು.

ಬುಧವಾರ ಗದಗದಲ್ಲಿ ಶಿವಪ್ಪ ಕುಟುಂಬದ ಧರಣಿ ಸತ್ಯಾಗ್ರಹÀಕ್ಕೆ ಗಜೇಂದ್ರಗಡದಿಂದ ಎಲ್ಲಾ ನಾಗರಿಕ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟಿಸಲು ಮುಂದಾಗಬೇಕೆಂದರು.

ಸಮಾಜದ ಹಿರಿಯರಾದ ಸೋಮಪ್ಪ ರಾಠೋಡ ಮಾತನಾಡಿ "ಭೀಮಸಿಂಗ ರಾಠೋಡ ನೀವು ಬಂಜಾರ ಸಮಾಜದವರೇ? ಆಗಿದ್ದರೆ ಶಿವಪ್ಪ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ಮೊದಲು ಸಂಪೂರ್ಣ ಗ್ರಹಿಕೆ ಮಾಡಿಕೊಂಡು ಮಾತನಾಡುವುದು ಒಳಿತು. ಅದನ್ನು ಬಿಟ್ಟು ನಿಮ್ಮ ಜೊತೆ ನಾಲ್ಕು ಜನ ಬೆಂಬಲಿಗರನ್ನು ಇಟ್ಟು ಸಂಘ ಮಾಡಿಕೊಂಡು ಬಂಜಾರ ಸಮಾಜದ ಅನ್ಯಾಯಕ್ಕೊಳಗಾದ ಕುಟುಂಬವನ್ನು ಕಡೆಗಣಿಸಿ ಸಮಾಜ ಒಡೆದಾಳುವ ಕೆಲಸ ಮಾಡಿ ಹಲ್ಲೆಕೊರರ ಪರವಾಗಿ ನಿಂತು ಎಲ್ಲ ರೀತಿಯ ಸೆಡ್ಡೆಂತರ ಮಾಡಿ ಶಿವಪ್ಪನಿಗೆ ನ್ಯಾಯ ಕೊಡಿಸುವ ಬದಲಾಗಿ ಅವನ ಕುಟುಂಬದ ವಿರುದ್ಧವೇ ವ್ಯಕ್ತಿಗತ ಎಂದು ಪರಿಗಣಿಸಿ ಮಾತನಾಡುತ್ತಿರುವುದು ನೋಡಿದರೆ ಇವರು ಬಂಡಿಯವರ ಏಜೆಂಟರಾಗಿ ಕೆಲಸ ಮಾಡುವ ಮೂಲಕ ಬಂಜಾರ ಸಮಾಜಕ್ಕೆ ಅನ್ಯಾವಾಗಿದೆ. ನಿಮ್ಮ ವಿರುದ್ಧವೇ ಜಿಲ್ಲೆಯಾಧ್ಯಂತ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದರು.

ಇನ್ನೋರ್ವ ಸಮಾಜದ ಮುಖಂಡರರಾದ ಉಮೇಶ ರಾಠೋಡ ಮಾತನಾಡಿ "ರಾಜಿ ಸಂಧಾನ ಯಾವ ರೀತಿಯಾಗಿದೆ. ಶಿವಪ್ಪ ಕುಟುಂಬದ ಕಡೆಗಣಿಸಿ ಒಬ್ಬ ಮಗನನ್ನು ಜೈಲಿಗೆ ತಳ್ಳಿ ಇನ್ನೊಬ್ಬನು ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ನೋವನ್ನು ಕಂಡ ಅವರ ತಾಯಿ ಕಣ್ಣಿರನ್ನು ಒರೆಸುವ ಪ್ರಯತ್ನ ಮಾಡದೆ ಶಿವಪ್ಪನ ಮೇಲೆಯೇ ಮಾರಣಾಂತಿಕ ಹಲ್ಲೆ 307 ಪ್ರಕರಣ ದಾಖಲಿಸಿರುವುದು ರಾಜಿ ಸಂಧಾನವೇ?  ಮೊದಲು ಭಿಮಸಿಂಗ್ ನೀವು ಆ ಕುಟುಂಬ ನೋವನ್ನು ಅವರಿಗಾದ ಅನ್ಯಾಯವನ್ನು ತಿಳಿದುಕೊಂಡು ಮಾತನಾಡಬೇಕೆಂದು ಹೇಳಿದರು.

ಗದಗ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ 08 ದಿನಗಳಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿಕೊಟ್ಟು ನ್ಯಾಯ ಒದಗಿಸಲು ನೀವೆ ಮುಂದಾಗಿ ಯಾರು ಬೇಡ ಎನ್ನುವರು ನೀಮಗೆ? ಅದನ್ನು ಬಿಟ್ಟು ತೆರೆಮರೆಯಲ್ಲಿ ನಿಂತು ಇಂತಹ ಹೀನ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಅರ್ಜುನ ರಾಠೋಡ, ಬಾಲು ರಾಠೋಡ, ಪೀರು ರಾಠೋಡ, ಸಕ್ರಪ್ಪ ಮಾಳೋತ್ತರ ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಶಂಕ್ರಪ್ಪ ಚವ್ಹಾಣ, ಗಣೇಶ ಗುಗಲೋತ್ತರ, ಕುಬೇರ ಮಾಳೋತ್ತರ, ಪ್ರಕಾಶ ಗುಗಲೋತ್ತರ, ಚಂದ್ರು ರಾಠೋಡ, ಮೈಸೂರ ಮಾಳೋತ್ತರ, ಕುಮಾರವ್ಯಾಸ ಗುಗಳೋತ್ತರ, ಶರಣಪ್ಪ ಚವ್ಹಾಣ, ಮಹೇಶ ರಾಠೋಡ, ಕೃಷ್ಣಾ ಮಾಳೋತ್ತರ, ಶರಣಪ್ಪ ರಾಠೋಡ, ಪ್ರಕಾಶ ರಾಠೋಡ, ಮೀಟಿಯಪ್ಪ ರಾಠೋಡ, ಠಾಕೂರ ಚವ್ಹಾಣ, ಬಸು ಅಜ್ಮೀರ, ಶಶಿ ಗುಗಲೊತ್ತರ, ಬಸು ಮಾಳೋತ್ತರ ಮುಂತಾದವರು ಹಾಜರಿದ್ದರು.