ಸಿದ್ದಣ್ಣ ಬಂಡಿಯನ್ನು ಬಂಧಿಸದಿದ್ದರೆ ಉಗ್ರ ಹೋರಾಟ

Saturday, 11 June 2016

ಗದಗ: ಜೂನ್ 11: ಮಾಜಿ ಸಚಿವ ಕಳಕಪ್ಪ ಬಂಡಿ ಸಹೋದರ ಸಿದ್ದಪ್ಪ ಬಂಡಿ ದಲಿತ ಲಂಬಾಣಿ ಯುವಕ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ವಿವಿಧ ಸಂಘÀಟನೆ ನೇತೃತ್ವದಲ್ಲಿ ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಆಹೋರಾತ್ರಿ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ.

ನವ ಕರ್ನಾಟಕ ಜನಾಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷರಾದ ಪಿ.ಸುಬ್ರಮಣ್ಯ ಶೆಟ್ಟಿ ಮಾತನಾಡಿ "ಬಂಜಾರ ಸಮುದಾಯದ ಬಡವರ ಮೇಲೆ ಹಲ್ಲೆ ನಡೆಯುತ್ತಿರುವದು ವಿಷಾದನೀಯ ಹಾಗೂ ಹಲ್ಲೆ ನಡೆಸಿರುವ ಸಿದ್ದಣ್ಣ ಬಂಡಿಯನ್ನು ಬಂಧಿಸಬೇಕು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಬಂಧನ ಮಾಡದಿದ್ದರೆ ಎಲ್ಲಾ ಕನ್ನಡ ಪರ ಸಂಘಟಣೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡಲಾಗುವುದು. ಹಲ್ಲೆಗೊಳಗಾದ ಯುವಕ ಮೇಲೆ ಹಾಕಿರುವ ಕೊಲೆ ಬೆದರಿಕೆ ಕಲಂ 307 ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ. ಕೂಡಲೇ ಆ ಪ್ರಕರಣವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ನವ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷರಾದ ಶಿವಕುಮಾರ ರಾಮನಕೊಪ್ಪ ಮಾತನಾಡಿ "ದಲಿತ ಯುವಕ ಮೇಲೆ ಹಲ್ಲೆಯಾದರು ಜಿಲ್ಲಾಡಳಿತ ಹಾಗೂ ರೊಣ ತಾಲೂಕ ಆಡಳಿತ ಕಣ್ಮುಚ್ಚಿ ಕುಳಿತಿರುವುದು ನೋವಿನ ಸಂಗತಿ. ರೋಣ ತಾಲೂಕಿನ ಶಾಸಕರಾದ ಜಿ.ಎಸ್.ಪಾಟೀಲ 15 ದಿನ ಕಳೆದರು ಬಾಯಿಬಿಡದೇ ಮೌನವಹಿಸಿರುವುದೇಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಚ್.ಕೆ.ಪಾಟೀಲ ರವರು ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಕೂಡಲೇ ಮಧ್ಯಸ್ಥಿಕೆ ವಹಿಸಿ ಆರೋಪಿ ಸಿದ್ದಣ್ಣ ಬಂಡಿಯನ್ನು ಬಂಧಿಸಲು ಪೋಲಿಸ ಇಲಾಖಾ ಅಧಿಕಾರಿಗಳಿಗೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.

ಶಿವಾನಂದ ಹಿರೇಮಠ ಮಾತನಾಡಿ "ಹಲ್ಲೆಗೊಳಗಾಗಿರುವ ಯುವಕನ ಭಾವಚಿತ್ರಗಳನ್ನು ನೋಡಿ ಯಾರಿಗಾದರೂ ಮೈ, ಕರಳು ಚುರುಕು ಎನ್ನುತ್ತದೆ. ಇಂತಹ ನೋವನ್ನು ಉಂಡ ಯುವಕ ಎಂಥಹ ನರಕಯಾತನೆ ಅನುಭವಿಸಿರಬೇಕು ಎಂದು ಆತಂಕಪಟ್ಟರು.

ಕಾರ್ಮಿಕ ಘಟಕ ರಾಜ್ಯಾಧ್ಯಕ್ಷರಾದ ಎಸ್.ಎಸ್.ರೆಡ್ಡಿ, ರೈಲ್ವೇ ಹೋರಾಟಗಾರರಾದ ಕುತ್ತಬುದ್ದಿನ ಖಾಜಿ. ಹಮಾಲರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಅಯ್ಯಪ್ಪ ನಾಯ್ಕರ ಮಾತನಾಡಿದರು. ಈ ಧರಣಿಯಲ್ಲಿ ಚಂದ್ರಕಾಂತ ಚವ್ಹಾಣ, ರವಿಕಾಂತ ಅಂಗಡಿ, ದೇವಪ್ಪ ಮಾಳೋತ್ತರ, ಬಾಲು ರಾಠೋಡ, ಪೀರು ರಾಠೋಡ, ಮುಂತಾದವರು ಭಾಗವಹಿಸಿದ್ದರು.