Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಗಿಡಮರಗಳ ನಾಶದಿಂದ ಮಾನವನ ಆರೋಗ್ಯದಲ್ಲಿ ಏರುಪೇರಾಗುತ್ತಿದೆ

Friday, 10 June 2016

ಧಾರವಾಡ, ಜೂನ್ 10: ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ನಿರಂತರವಾಗಿ ಗಿಡಮರಗಳನ್ನು ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ವಾತಾವರಣದಲ್ಲಿ ಏರುಪೇರಾಗಿ ಆರೋಗ್ಯದಲ್ಲಿಯೂ ಕೂಡಾ ವ್ಯತಿರಿಕ್ತ ಪರಿಣಾಮವಾಗಿ ಮಾನಸಿಕ ಹಾಗೂ ದೈಹಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ಗಿಡ-ಮರ ನೆಟ್ಟು, ಪರಿಸರ ಉಳಿಸಿದರೆ ಮಾತ್ರ ಮಾನವನ ಬದುಕು ಸಂತಸಮವಾಗಲಿ ಎಂದು ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯ ರಾಜು ಅಂಬೋರೆ ತಿಳಿಸಿದರು.

ಅವರು ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕೇಂದ್ರ ಸರಕಾರಿ ಪ್ರೌಢಶಾಲೆ, ಧಾರವಾಡ ಮತ್ತು ಅಪ್ನಾದೇಶ ಬಳಗ ಧಾರವಾಡ, ಇಕೋ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ಜಾಗೃತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿದಿನ 200 ರಷ್ಟು ವಾಹನಗಳು ಪರಿಸರ ಹಾನಿಗೆ ಸೇರಿಕೊಳ್ಳುತ್ತಿವೆ. ಪರಿಸರ ನಾಶದಿಂದ ಜಾಗತಿಕ ತಾಪಮಾನ, ಉಷ್ಣಾಂಶ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಗಿಡ, ಮರಗಳನ್ನು ನೆಟ್ಟು ಪೋಷಿಸಿ ಪರಿಸರ ಜಾಗೃತಿಗೆ ಮುಂದಾಗಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಕ.ವಿ.ವಿ. ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಎಸ್.ಬಿ.ಗಾಮನಗಟ್ಟಿ ಮಾತನಾಡಿ ಮಕ್ಕಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿ ಇರಬೇಕು. ಗಿಡ ನೆಟ್ಟರೆ ಸಾಲದು. ಅದರ ಬೆಳವಣಿಗೆಗೆ ಪ್ರಗತಿಗಾಗಿ ನಾವು ನೀವೆಲ್ಲ ಎಚ್ಚರ ವಹಿಸಬೇಕಿದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಕರ್ತವ್ಯ ಕೂಡಾ ಆಗಿದ್ದು ಉತ್ತಮ.  ಪರಿಸರ ಉತ್ತಮ ಆರೋಗ್ಯಕ್ಕೆ ಮೂಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.

ಅಪ್ನಾದೇಶ ಜಿಲ್ಲಾ ಸಂಚಾಲಕ ಎಲ್.ಐ.ಲಕ್ಕಮ್ಮನವರ ಈ ವರ್ಷ ಹಚ್ಚಿದ ಸಸಿಗಳನ್ನು ಉಳಿಸಿ, ಬೆಳೆಸಿ ಮುಂದಿನ ವರ್ಷ ಉಳಿಸಿದ ಗಿಡಗಳನ್ನು ನಾವುಗಳು ಆಚರಿಸಿಕೊಳ್ಳುವ ಹುಟ್ಟು ಹಬ್ಬವನ್ನು ಗಿಡಮರಗಳ ಹುಟ್ಟು ಹಬ್ಬವನ್ನಾಗಿ ಆಚರಿಸೋಣ ಎಂದು, ವಿಶ್ವವೇ ಚಿಂತಾಕ್ರಾಂತವಾಗಿರುವ ಈ ಸಂದರ್ಭದಲ್ಲಿ ನಾವು ನೀವೆಲ್ಲ ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವಲ್ಲಿ ಪಣ ತೊಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶ್ರೀದೇವಿ ಲದ್ದಿಮಠ ನಮ್ಮ ದೇಶದ ಅನೇಕ ರಾಜ್ಯಗಳು ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್‍ನ್ನು ನಿಷೇಧ ಮಾಡಿವೆ. ನಮ್ಮ ರಾಜ್ಯವೂ ಕೂಡ ಪ್ಲಾಸ್ಟಿಕ್ ನಿಷೇಧ ಮಾಡಿದೆ. ಪ್ಲಾಸ್ಟಿಕ್ ಇರುವ ಕಡೆಗಳಲ್ಲಿ ಬೆಳೆ ಬೆಳೆಯುವುದಿಲ್ಲ.  ಪ್ಲಾಸ್ಟಿಕ್‍ನ ಬಳಕೆಯಿಂದ ಆರೋಗ್ಯದಲ್ಲಿ ಕೆಟ್ಟ ಪರಿಣಾಮವಾಗಿ ಕ್ಯಾನ್ಸರ್‍ನಂತರ ರೋಗಗಳಿಗೆ ಆಹ್ವಾನ ನೀಡಿದಂತಾಗಲಿದ್ದು ನಮ್ಮ ಬದುಕು ಸುಂದರವಾಗಿ ಸಾಗಬೇಕಾದರೆ ಗಿಡ ಮರಗಳ ರಕ್ಷಣೆ, ಪರಿಸರ ರಕ್ಷಣೆ ನಮ್ಮ ಮೂಲಮಂತ್ರವಾಗಿರಲಿ ಎಂದು ತಿಳಿಸಿದರು.

ವಾಯ್.ಆರ್.ರಾಯನಗೌಡರ, ರಮೇಶ ತಳವಾರ, ಹೇಮಲತಾ ಅಮ್ಮಿನಭಾವಿ ಮುಂತಾದವರು ಹಾಜರಿದ್ದ ಈ ಕಾರ್ಯಕ್ರಮದಲ್ಲಿ ರೇಖಾ ದೇಸಾಯಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಿ.ಜಿ.ಬಶೆಟ್ಟಿ ನಿರೂಪಿಸಿದರು. ಸುರೇಶ ಜಟ್ಟೆನ್ನವರ ವಂದಿಸಿದರು.