Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ದಲಿತ ಹಕ್ಕುಗಳ ಹಾಸನ ಜಿಲ್ಲಾ ಸಮಾವೇಶ “ಉಪ ಯೋಜನೆಗಳ ಹಣ ದಲಿತರ ಮಾನವಾಭಿವೃದ್ಧಿಗೆ ಬಳಕೆಯಾಗಲಿ”

ಸಂಪುಟ: 
10
ಸಂಚಿಕೆ: 
27
Sunday, 26 June 2016

ಒಳ ಮೀಸಲಾತಿಯ ಬೇಡಿಕೆಗಿಂತ ಎಲ್ಲರೂ ಒಟ್ಟಿಗೆ ಸೇರಿ ಮೀಸಲಾತಿಯ ಉಳಿವಿಗಾಗಿ ಚಳುವಳಿಯನ್ನು ರೂಪಿಸಬೇಕಾದ ಅನಿವಾರ್ಯತೆ ದಲಿತ ಚಳುವಳಿಗಳ ಮುಂದಿದೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿಯವರು ಹೇಳಿದರು.

ಹಾಸನ ನಗರದ ಸ್ವಾಭಿಮಾನ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 125 ನೇ ಜನ್ಮ ವರ್ಷಾಚರಣೆಯ ಅಂಗವಾಗಿ “ದಲಿತ ಹಕ್ಕುಗಳ ಜಿಲ್ಲಾ ಸಮಾವೇಶ”ವನ್ನು ಉದ್ಘಾಟಿಸಿ ಮಾತನಾಡುತ್ತಾ “ರಾಜ್ಯ ಸರ್ಕಾರ ಎಸ್ಸಿಪಿ ಮತ್ತು ಟಿಎಸ್ಪಿ ಉಪ ಯೋಜನೆಗೆಂದು 19 ಸಾವಿರ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಬಹುಪಾಲು ಹಣವನ್ನು ದಲಿತ ಗ್ರಾಮಗಳ ಮೂಲಭೂತ ಸೌಲಭ್ಯಗಳಾದ ರಸ್ತೆ, ಮತ್ತಿತರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಆದರೆ ದಲಿತರ ಮಾನವಾಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಬೇಕು, ಅದರಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ಕೆಲಸಗಳಿಗೆ ಹೆಚ್ಚಿನ ಗಮನ ನೀಡುತ್ತಿಲ್ಲ. ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಶೇ 76 ರಷ್ಟಿದ್ದರೆ ಅದರಲ್ಲಿ ದಲಿತರ ಸಾಕ್ಷರತೆಯ ಪ್ರಮಾಣ ಕೇವಲ ಶೇ 20 ರಷ್ಟಿದೆ ಎಂದರು.

ಸರ್ಕಾರವೇ ಬಿಡುಗಡೆ ಮಾಡಿರುವ ಅಭಿವೃದ್ಧಿ ವರದಿಯ ಪ್ರಕಾರ ಜಿಲ್ಲೆಯಲ್ಲಿ 1 ಎಕ್ರೆ ಕೃಷಿ ಭೂಮಿಯನ್ನು ಹೊಂದಿರುವ ದಲಿತರು ಶೇ 71, 2 ಎಕ್ರೆ ಹೊಂದಿರುವ ದಲಿತರು ಶೇ.23, 4 ರಿಂದ 10 ಎಕರೆ ಕೃಷಿ ಭೂಮಿಯನ್ನು ಹೊಂದಿರುವ ದಲಿತರು ಕೇವಲ ಶೇ 0.65 ರಷ್ಟಿದ್ದಾರೆ ಇದರಿಂದ ಕೃಷಿ ಯೋಗ್ಯ ಭೂಮಿ ಯಾರ ಕೈಯಲ್ಲಿ ಕೇಂದ್ರೀಕೃತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನಗಳನ್ನು ಹೊಂದಿರುವ ನಾಗರಿಕ ಸಮಾಜದಲ್ಲಿ ಇಂದಿಗೂ ಶೇ 99 ರಷ್ಟು ದೇವಸ್ಥಾನಗಳಿಗೆ ದಲಿತರ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ ಎಂದರು.

ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿವೈಎಫ್‍ಐನ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ ಮೂರ್ತಿಯವರು ಹಾಸನ ಜಿಲ್ಲೆ ಮೂಲತಃ ಪಾಳೇಗಾರಿ ಭೂಮಾಲಿಕರ ಹಿಡಿತದಲ್ಲಿರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದರೂ ಅವುಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮತ್ತು ದಲಿತರ ಪರ ಧ್ವನಿ ಎತ್ತುವವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ, ಇದಕ್ಕೆ ಜಗ್ಗದೆ ಸಿಗರನಹಳ್ಳಿಯ ದಲಿತರಿಗೆ ನ್ಯಾಯ ಕೊಡಿಸಿದ ಎಲ್ಲ ಚಳುವಳಿಗಾರರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್‍ರವರು “ಜಿಲ್ಲೆಯ ಎಲ್ಲ ಜನಪರ ಚಳುವಳಿಗಳು ಮತ್ತು ದಲಿತ ಚಳುವಳಿಗಳು ಒಟ್ಟಿಗೆ ಸೇರಿದ್ದರಿಂದ ಸಿಗರನಹಳ್ಳಿ ಸಮಸ್ಯೆಯನ್ನು ಒಂದು ತಾತ್ವಿಕ ಹಂತಕ್ಕೆ ಮುಟ್ಟಿಸಲು ಸಾಧ್ಯವಾಯಿತು. ಇದೇ ಮಾದರಿಯಲ್ಲಿ ರಾಜ್ಯದಾ ಧ್ಯಂತ ಚಳುವಳಿಗಳು ವಿಷಯಾಧಾರಿತವಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ" ಎಂದರು.

ಸಮಾವೇಶದಲ್ಲಿ ಹಿರಿಯ ದಲಿತ ಮುಖಂಡರಾದ ನಾರಾಯಣದಾಸ್ ಭಾಗವಹಿಸಿದ್ದರು ಅಧ್ಯಕ್ಷತೆಯನ್ನು ಡಿ.ಎಚ್.ಎಸ್ ಮುಖಂಡರಾದ ಕೆ.ಎಸ್.ಮಂಜುನಾಥ್ ವಹಿಸಿದ್ದರು, ಸ್ವಾಗತವನ್ನು ಮಧುಸೂಧನ್, ವಂದನಾರ್ಪಣೆಯನ್ನು ಪ್ರದೀಪ್‍ಕುಮಾರ್  ಮಾಡಿದರು. ಕಾರ್ಯಕ್ರಮವನ್ನು ಪೃಥ್ವಿ ನಿರ್ವಹಿಸಿದರು.

ನೂತನ ಸಮಿತಿ ಆಯ್ಕೆ :

ಸಮಾವೇಶದ ಅಂತ್ಯದಲ್ಲಿ 29 ಜನರನ್ನೊಳಗೊಂಡ ಜಿಲ್ಲಾ ಮಟ್ಟದ ದಲಿತ ಹಕ್ಕುಗಳ ಸಮಿತಿಯನ್ನು ಆಯ್ಕೆ ಮಾಡಲಾಯಿತು ಜಿಲ್ಲಾ ಸಂಚಾಲಕರಾಗಿ ಪೃಥ್ವಿ ಎಂ.ಜಿ, ಸಹಸಂಚಾಲಕರುಗಳಾಗಿ ಮಂಜುನಾಥ್ ಕೆ.ಎಸ್, ವಿನೋದ್, ಮಧುಸೂದನ್, ಮೀನಾಕ್ಷಿ, ರಾಜು ಸಿಗರನಹಳ್ಳಿಯವರನ್ನು ಆಯ್ಕೆ ಮಾಡಲಾಯಿತು.