ಖಾಸಗಿ ಶಾಲಾ ವಾಹನಗಳ ಸೇಪ್ಟಿ ಲಾಕರ್ ತಪಾಸಣೆಗೆ ಎಸ್‍ಎಫ್‍ಐ-ಡಿವೈಎಫ್‍ಐ ಆಗ್ರಹ

ಸಂಪುಟ: 
10
ಸಂಚಿಕೆ: 
27
Sunday, 26 June 2016

ಜೂನ್ 21ರಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೋವಾಡಿ ಕ್ರಾಸ್ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಶಾಲಾಮಕ್ಕಳನ್ನು ಹೊತ್ತೊಯುತ್ತಿದ್ದ ಖಾಸಗಿ ಓಮ್ನಿಯು ಬಸ್‍ಗೆ ಡಿಕ್ಕಿ ಹೊಡೆದ ಹೃದಯವಿದ್ರಾವಕ ಘಟನೆಯು ಕುಂದಾಪುರ ಪರಿಸರದಲ್ಲಿ ನಡೆಯಿತು. ಈ ಕಾರಿನಲ್ಲಿ ಸುಮಾರು 17 ಮಕ್ಕಳು ಮತ್ತು ಚಾಲಕ ಹಾಗೂ ಶಿಕ್ಷಕಿಯನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಾಹನವು ಬಸ್ ಒಂದಕ್ಕೆ ಡಿಕ್ಕಿ ಹೊಡೆದು ಕನಿಷ್ಟ 8 ಮಕ್ಕಳು ಅಪಘಾತದಲ್ಲಿ ಮಡಿದಿರುತ್ತಾರೆ ಹಾಗೂ ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ. ಇಂತಹ ಹಲವಾರು ಖಾಸಗಿ ವಾಹನಗಳ ಮೂಲಕ ಕುಂದಾಪುರ ತಾಲೂಕಿನಾದ್ಯಂತ ಖಾಸಗಿ ಶಾಲೆಗಳ ವಾಹನಗಳಲ್ಲಿ ಮೀಸಲಿರುವ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗಿರುವುದೇ ಇಂತಹ ದುರಂತಗಳಿಗೆ ಕಾರಣ.

ಆರ್‍ಟಿಓ ಇಲಾಖೆ ಹಾಗೂ ಸಂಚಾರಿ ಪೋಲೀಸ್ ಇಲಾಖೆಯು ಇಂತಹ ವಾಹನಗಳನ್ನು ತಪಾಸಣೆ ನಡೆಸಿ ಮುಂದೆ ನಡೆಯುವ ದುರಂತಗಳನ್ನು ತಪ್ಪಿಸಬೇಕು. ಸಾರಿಗೆ ಸಹಕಾರಿ ಸಂಸ್ಥೆ ಮತ್ತು ಸಂಚಾರಿ ಠಾಣಾ ಪೋಲೀಸರ ದಿವ್ಯ ನಿರ್ಲಕ್ಷವೇ ಈ ದುರ್ಘಟನೆಗೆ ಕಾರಣ ಮತ್ತು ಖಾಸಗಿ ಶಾಲೆಗಳು ಸಹಾ ವಿದ್ಯಾರ್ಥಿಗಳು ಬರುವ ವಾಹನಗಳ ಬಗ್ಗೆ ಗಮನ ಹರಿಸದಿರುವುದು ಮತ್ತು ಶಿಕ್ಷಣ ಸಂಸ್ಥೆಗಳ ವ್ಯಾಪಾರೀಕರಣ ದೃಷ್ಟಿಯಿಂದ ನೋಡದೇ ಈ ಮುದ್ದು ಮಕ್ಕಳ ಕಡೆಗೆ ಗಮನ ಹರಿಸಬೇಕಾಗಿದೆ. ಹಾಗಿದ್ದೂ ಇಂತಹ ದುರ್ಘಟನೆಗಳು ಪುನಃ ಪುನಃ ಮರುಕಳಿಸುತ್ತಿದೆಯಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಡಿವೈಎಫ್‍ಐ ಹಾಗೂ ಎಸ್‍ಎಫ್‍ಐ ಸಂಘಟನೆಯ ಕುಂದಾಪುರ ಘಟಕಗಳು ಜಂಟಿಯಾಗಿ ತೀವ್ರತರವಾದ ಹೋರಾಟಕ್ಕೆ ಅಣಿಯಾಗುವುದಾಗಿ ಎಚ್ಚರಿಕೆ ನೀಡಿದೆ.