ಹಮಾಲಿ ಕಾರ್ಮಿಕರ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ - ಅರ್ಜಿ ಆಹ್ವಾನ

ಸಂಪುಟ: 
10
ಸಂಚಿಕೆ: 
27
Sunday, 26 June 2016

ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್(ರಿ) ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ(ಎಂಜಿನರಿಂಗ್/ಡಿಪ್ಲಮೋ/ಇತರೆ ವೃತ್ತಿಪರ ಕೋರ್ಸ) ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಬ್ಯಾಸ ಮಾಡುತ್ತಿರುವ ಹಮಾಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸಿಂಗ್ವೀ ಟ್ರಸ್ಟ್ ಬೆಂಗಳೂರು ಇವರ ಸಹಯೋಗದೊಂದಿಗೆ ಕಳೆದ ಐದು ವರ್ಷಗಳಿಂದ ನೀಡುತ್ತಾ ಬಂದಿದೆ.

2016-17 ನೇ ವರ್ಷದಲ್ಲೂ ರಾಜ್ಯದ ಎಪಿಎಂಸಿ/ಗೋಡಾನ್/ಏರ್‍ಹೌಸ್/ ನಗರ ಮತ್ತು ಗ್ರಾಮೀಣ ಪ್ರದೇಶದ ಮಾರುಕಟ್ಟೆಗಳಲ್ಲಿ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕೆಲಸ ಮಾಡುತ್ತಿರುವ ಹಮಾಲಿ ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸುವ ಭಾಗವಾಗಿ ವಿದ್ಯಾರ್ಥಿ ವೇತನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ನಿಯಮಗಳು :

 1. ಎಸ್‍ಎಸ್‍ಎಲ್‍ಸಿ ಅಥವಾ ನಂತರದ ಯಾವುದೇ ತರಗತಿಯಲ್ಲಿ ಕನಿಷ್ಟ ಪ್ರಥಮ ದರ್ಜೆ(ಶೇ 60) ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
   
 2. ವಿದ್ಯಾರ್ಥಿಯ ತಂದೆ ಅಥವಾ ತಾಯಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್(ರಿ)ಸದಸ್ಯ/ಳಾಗಿರುವ ದಾಖಲೆ ಹಾಜರುಪಡಿಸಬೇಕು.
   
 3. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಅರ್ಜಿಯೊಂದಿಗೆ ಪ್ರಸ್ತುತ ವರ್ಷದಲ್ಲಿ ಉತ್ತೀರ್ಣನಾಗಿರುವ ಅಂಕಪಟ್ಟಿ ಮತ್ತು 2016-17 ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಕಾಲೇಜಿಗೆ ತುಂಬಿರುವ ಫೀ ರಸೀದಿ, ಪ್ರವೇಶ ಪಡೆದಿರುವ ಕಾಲೇಜಿನ ಹೆಸರು ವಿಳಾಸದ ಝೇರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ನೀಡಬೇಕು.
   
 4.  ವಿದ್ಯಾರ್ಥಿ ವೇತನವನ್ನು ಚೆಕ್ ಮೂಲಕ ನೀಡಲಾಗುವುದು ಹಾಗಾಗಿ ವಿದ್ಯಾರ್ಥಿಯೂ ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
   
 5. ವಿದ್ಯಾರ್ಥಿ ವಾಸ ಕುರಿತು ವಿಳಾಸ ಮತ್ತು ಅದನ್ನು ಧೃಡೀಕರಿಸುವ ಯಾವುದಾದರೂ ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು.
   
 6. ಇದೊಂದು ನಿರಂತರ ವಿದ್ಯಾಬ್ಯಾಸಕ್ಕೆ ಪ್ರೊತ್ಸಾಹ ನೀಡುವ ಯೋಜನೆಯಾಗಿದ್ದು ಒಂದು ಬಾರಿ ವಿದ್ಯಾರ್ಥಿ ವೇತನ ಪಡೆದವರು ಪುನಃ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಡೆಯಬೇಕಾದರೆ ಕನಿಷ್ಟ 60 ಶೇ ಹೆಚ್ಚಿನ ಅಂಕಗಳನ್ನು ಪಡೆಯಬೇಕು.
   
 7. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  15-07-2016

ಅರ್ಜಿಯನ್ನು ಕಳಿಸಬೇಕಾದ ವಿಳಾಸ :

ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್(ರಿ) ನಂ 40/5 ಸೂರಿಭವನ, 2ನೇ ಮೇನ್, 16 ನೇ ಕ್ರಾಸ್ ಸಂಪಂಗಿರಾಮನಗರ, ಬೆಂಗಳೂರು-27 ಮೋಬೈಲ್: 9845342467/ 9448415167