ಕಾರ್ಮಿಕರ ಶ್ರಮದಿಂದ ಕೆಂಪಾಯಿತು ಕಾರ್ಮಿಕ ನಗರ

ಸಂಪುಟ: 
10
ಸಂಚಿಕೆ: 
26
Sunday, 19 June 2016

ಬೆಂಗಳೂರು ಉತ್ತರ ಜಿಲ್ಲೆಯ ಸಿಐಟಿಯು ಜಿಲ್ಲಾ 11ನೇ ಸಮ್ಮೇಳನವು ಬೆಂ.ಉತ್ತರ ವಲಯ ಸಮಿತಿ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ನಡೆಯಿತು. ಜೂನ್ 10 ರಿಂದ 12ರವರೆಗೆ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಜೂನ್ 10ರಂದು ಸಂಜೆ 5 ಗಂಟೆಗೆ ತುಮಕೂರು ರಸ್ತೆಯ 8ನೇ ಮೈಲಿಯಿಂದ ಕೆಂಪು ಸಮವಸ್ತ್ರಧಾರಿಗಳು ಮತ್ತು ಸಿಐಟಿಯು ಬಾವುಟಗಳನ್ನು ಹಿಡಿದ ನೂರಾರು ಕಾರ್ಮಿಕರಿಂದಾಗಿ ತುಮಕೂರು ರಸ್ತೆ ಹಾಗೂ ದಾಸರಹಳ್ಳಿ ಪ್ರದೇಶದ ಗಲ್ಲಿ-ಗಲ್ಲಿಗಳಲ್ಲಿ ಮೆರವಣಿಗೆಯಿಂದಾಗಿ ರಸ್ತೆಗಳೆಲ್ಲೆಲ್ಲಾ ಕೆಂಪಾಗಿದ್ದವು. ಕೇಂದ್ರ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳು ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಘೋಷಣೆಗಳಿಂದಾಗಿ ತಮಟೆಯ ಸದ್ದು ಸಣ್ಣದಾಗಿತ್ತು.

ಟಿ. ದಾಸರಹಳ್ಳಿಯ ಪೈಪ್ ಲೈನ್ ರಸ್ತೆ ಬಳಿ ಆಕರ್ಷಕವಾದ ಬಹಿರಂಗ ಸಭೆಯ ವೇದಿಕೆ ನಿರ್ಮಿಸಲಾಗಿತ್ತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಮಾಲೀಕರ ನೀತಿಗಳಿಂದಾಗಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಿಳಿಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂರವರು ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಸರ್ಕಾರವು ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲು ಹೊರಟಿರುವ ಹಿನ್ನೆಲೆ ಮತ್ತು ಕಾರ್ಮಿಕರಿಗೆ ಅದರಿಂದಾಗುವ ಸಮಸ್ಯೆಗಳ ಕುರಿತು ಮತ್ತು ಬೆಲೆ ಏರಿಕೆ, ಕನಿಷ್ಟ ಕೂಲಿ ಮತ್ತು ಶ್ರೀಮಂತರಪರ ಇರುವ ಮಾಧ್ಯಮಗಳ ಬಗ್ಗೆಯೂ ಮಾತನಾಡದರು.

ಬೆಂ.ಉತ್ತರ ಜಿಲ್ಲಾ ಸಮಿತಿ ಅಧ್ಯಕ್ಷರಾದ ಹೆಚ್.ಎನ್.ಗೋಪಾಲಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ಮಾತನಾಡಿದರು. ಉಪಾಧ್ಯಕ್ಷರಾದ ಟಿ.ಲೀಲಾವತಿರವರು ಅಧ್ಯಕ್ಷತೆ ವಹಿಸಿದರು. ಎಂ.ಎಸ್.ನಿತಿನ್ ರವರು ಸ್ವಾಗತ ಮತ್ತು ಪ್ರಸ್ಥಾವನೆ ಮಾಡಿದರು. ಬಹಿರಂಗ ಸಭೆಯ ಕೊನೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತಾರದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಜೂನ್ 11 ಹಾಗೂ 12ರಂದು ಪ್ರತಿನಿಧಿಗಳ ಅಧಿವೇಶವನವನ್ನು ಜಾಲಹಳ್ಳಿ ವೃತ್ತ ಹತ್ತಿರ ಕಾಂ.ಎಸ್.ಪ್ರಸನ್ನಕುಮಾರ್ ನಗರದ ಕಾಂ.ಕೋದಂಡರಾಮ್ ವೇದಿಕೆಯಲ್ಲಿ ಸಮ್ಮೇಳನ ನಡೆಸಲಾಯಿತು. 167 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಪ್ರತಿನಿಧಿ ಅಧಿವೇಶನ ಉದ್ಘಾಟನೆ ನಂತರ ಪ್ರಧಾನ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹರವರು ಕರಡು ವರದಿ ಮಂಡನೆ ಮತ್ತು ಪ್ರತಿನಿಧಿಗಳ ಚರ್ಚೆಯ ನಂತರ ಪ್ರಧಾನ ಕಾರ್ಯದರ್ಶಿಗಳ ಉತ್ತರ ನೀಡಿದರು ಅಂತಿಮವಾಗಿ ವರದಿಯನ್ನು ಅಂಗೀಕರಿಸಲಾಯಿತು.

ಸಮ್ಮೇಳನದಲ್ಲಿ ಸೆಪ್ಟಂಬರ್ 02ರ ಮುಷ್ಕರ ಯಶಸ್ವಿಗೊಳಿಸಬೇಕೆಂದು ಎಂಬ ನಿರ್ಣಯದ ಜೊತೆಗೆ ಇನ್ನು ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ನೂತನ ಜಿಲ್ಲಾ ಸಮಿತಿ

ಸಿಐಟಿಯು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯು 40 ಜನರ ಸಮಿತಿಯಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರು: ಎನ್.ಪ್ರತಾಪ್ ಸಿಂಹ,
ಪ್ರಧಾನ ಕಾರ್ಯದರ್ಶಿ:  ಪಿ.ಮುನಿರಾಜು,
ಖಜಾಂಚಿ:  ಸಿ.ನರಸಿಂಹಮೂರ್ತಿ,
ಉಪಾಧ್ಯಕ್ಷರು : ಹೆಚ್.ಎನ್.ಗೋಪಾಲಗೌಡ, ಮೀನಾಕ್ಷಿ ಸುಂದರಂ, ಆರ್.ಶ್ರೀನಿವಾಸ್, ಟಿ.ಲೀಲಾವತಿ, ಹನುಮಂತರಾವ್ ಹವಾಲ್ದಾರ್, ಕೆ.ಸಿ.ತಿರುಮಲಾಚಾರಿ, ನಳಿನಾಕ್ಷಿ
ಕಾರ್ಯದರ್ಶಿಗಳು : ನಿತಿನ್ ಎಂ.ಎಸ್, ಸಂತೋಷ್, ಬಿ.ಎಸ್. ರುದ್ರಮೂರ್ತಿ, ಟಿ.ಎಂ.ರಾಮಕೃಷ್ಣ,
ಸಹ ಕಾರ್ಯದರ್ಶಿಗಳು : ಮೋಹನ್ ಬಾಬು, ಹೆಚ್.ಬಿ.ಗಂಗರಾಜು, ಎ.ಹೆಚ್.ವಿಜಯಲಕ್ಷ್ಮೀ, ಎಂ.ವೆಂಕಟರಾಜು ಆಯ್ಕೆಯಾಗಿದ್ದಾರೆ.

ಸಮಾರೋಪ ಸಮಾರಂಭ :

ಜೂನ್ 12ರ ಸಮ್ಮೇಳನದ ಕೊನೆ ದಿನ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ರವರು ಮಾತನಾಡಿ ಕನಿಷ್ಠ ಕೂಲಿ 18 ಸಾವಿರವನ್ನು ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಜಾರಿ ಮಾಡಬೇಕು, ಬೇಡಿಕೆಗಳನ್ನು ಈಡೇರಿಸಬೇಕೆಂದು ಇತ್ತೀಚಿಗೆ ರಾಜ್ಯ ಸರ್ಕಾರಿ ನೌಕರರ ಹೋರಾಟ ಮತ್ತು ಪೊಲೀಸ್ ಸಿಬ್ಬಂದಿಗಳ ಹೋರಾಟ ಹಿನ್ನೆಲೆ ಪಿಎಫ್ ಹಣದ ವಿಚಾರವಾಗಿ ಗಾರ್ಮೇಂಟ್ಸ್ ಕಾರ್ಮಿಕರ ಎರಡು ದಿನಗಳ ಸಮರಧೀರ ಹೋರಾಟ, ಇದರ ಪರಿಣಾಮ ಪಿಎಫ್ ನೀತಿಯಲ್ಲಿನ ಕೇಂದ್ರ ಸರ್ಕಾರಗಳದ ಬದಲಾವಣೆಯನ್ನು ವಾಪಸ್ಸು ಮಾಡಿದ ಮಹಿಳಾ ಕಾರ್ಮಿಕರ ಯಶಸ್ವಿ ಹೋರಾಟವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕಾರ್ಮಿಕ ಕಾನೂನುಗಳ ತಿದ್ದುಪಡಿ ಮೂಲಕ ಕಾರ್ಮಿಕರಿಗೆ ಈಗ ಸಿಗುತ್ತಿರುವ ಸವಲತ್ತುಗಳ ಕಡಿತವಾಗಲಿದೆ ಮಾತ್ರವಲ್ಲ ಮಾಲೀಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸೆಪ್ಟಂಬರ್ 2ರ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಮುಷ್ಕರದ ಯಶಸ್ಸಿಗಾಗಿ ಈಗಿನಿಂದಲೇ ಕಾರ್ಮಿಕರ ಮಧ್ಯೆ, ಜನತೆ ಮಧ್ಯೆ, ಮಧ್ಯಮ ವರ್ಗದ ಮಧ್ಯೆ, ಎಲ್ಲಾ ಜನತೆಯ ಮಧ್ಯೆ ಪ್ರಚಾರ-ಪ್ರಕ್ಷೋಭೆ ನಡೆಸಬೇಕೆಂದು ಕರೆ ನೀಡಿದರು.

“ಚೆಗೆವಾರ ಸ್ಪೋಟ್ರ್ಸ್ ಕ್ಲಬ್”

ಸಮ್ಮೇಳನದ ಮುಂಚಿತವಾಗಿ ಪ್ರಚಾರದ ಭಾಗವಾಗಿ “ಚೆಗೆವಾರ ಸ್ಪೋಟ್ರ್ಸ್ ಕ್ಲಬ್” ನಿಂದ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಮಹಿಳೆಯರಿಗೆ ರಂಗೋಲಿ, ಲೆಮನ್ ಸ್ಪೂನ್, ಮಸಿಕಲ್ ಚೇರ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ಇದರಲ್ಲಿ ಭಾಗವಹಿಸಿದ್ದರು.