Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಬಿದರನಹಳ್ಳಿ ದಲಿತರ ನಿವೇಶನ ಜಾಗ ದೋಚುವ ಸಂಚು ವಿಫಲಗಳಿಸಿದ ಡಿ.ಎಚ್.ಎಸ್.

ಸಂಪುಟ: 
10
ಸಂಚಿಕೆ: 
26
Sunday, 19 June 2016

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ದಲಿತರ ಕೇರಿಗೆ ಹೊಂದಿಕೊಂಡಂತಿರುವ ಸರ್ವೇ ನಂ. 1ರಲ್ಲಿ ಗ್ರಾಮ ಠಾಣಾ ಜಾಗದಲ್ಲಿ ದಲಿತರಿಗೆ ನಿವೇಶನ ಹಂಚಿಕೆಯಾಗಿದ್ದು, ಉಳಿದ ಜಾಗವನ್ನು ಸಿದ್ದಪ್ಪಾಜೀ ದೇವಸ್ಥಾನಕ್ಕೆಂದು ಮೀಸಲಾಗಿತ್ತು. ಈ ಜಾಗವನ್ನು ಮಂಜೂರು ಮಾಡಿಕೊಡುವಂತೆ 1991ರಿಂದಲೂ ಒತ್ತಾಯಿಸುತ್ತಾ ಬರಲಾಗಿದೆ. ಆದರೆ  ಆದರೆ 2008ರಲ್ಲಿ ಜಾಗವನ್ನು ಹಾಲು ಉತ್ಪಾದಕರ ಸಂಘಕ್ಕೆ ಅಕ್ರಮವಾಗಿ ಖಾತಾ ಮಾಡಿಕೊಡಲಾಗಿದೆ.

ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಂಧಾನ ಸಭೆ ನಡೆದು ಜಾಗವನ್ನು ಹಂಚಲು ತೀರ್ಮಾನಿಸಲಾಯಿತು. ಆದರೆ ಇದಕ್ಕೆ ಎರಡು ಸಮುದಾಯದವರು ಒಪ್ಪಿಗೆ ನೀಡಲಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕೆಂದು ದಲಿತ ಹಕ್ಕುಗಳ ಸಮಿತಿ ಮತ್ತು ಡಾ.ಬಾಬು ಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆ ವತಿಯಿಂದ ಮೇ 25ರಿಂದ ಜಿಲ್ಲಾಧಿಕಾರಿ ಕಛೇರಿ ಬಳಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ತಮಟೆ ಬಾರಿಸುತ್ತಾ, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಬಳಿಗೆ ಆಗಮಿಸಿ ದಿನವಿಡೀ ಧರಣಿ ನಡೆಸಿದರು.

ಅಕ್ರಮವಾಗಿ ನಿರ್ಮಿಸಿರುವ ವಿ.ಎಸ್.ಎಸ್.ಎನ್. ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಖಾತೆ ಮಾಡಿರುವುದನ್ನು ರದ್ದುಗೊಳಿಸಬೇಕು ಮತ್ತು ಹಾಲಿ ನಿರ್ಮಾಣಗೊಂಡಿರುವ ಮನೆಗಳಿಗೆ ನಮೂನೆ 9. 11ನ್ನು ನೀಡಬೇಕು. ಗ್ರಾಮದಲ್ಲಿರುವ ಸರ್ವೇ ನಂ. 2 ರಿಂದ 24 ರವರೆಗೆ ಸರ್ವೇ ಮಾಡಿಸಿ ಗ್ರಾಮಾ ಠಾಣಾ ಜಾಗವನ್ನು ಗುರುತಿಸಬೇಕು. ನಿವೇಶನ ರಹಿತ ದಲಿತರಿಗೆ ನಿವೇಶನವನ್ನು ಮಂಜೂರು ಮಾಡಬೇಕು. ಊರಿನಲ್ಲಿರುವ ಹೋಟೆಲ್, ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಅವಕಾಶ ನೀಡಬೇಕು. ಗ್ರಾಮ ಪಂಚಾಯತಿಗೆ ಬರುವ ಅನುದಾನದಲ್ಲಿ ಶೇ.24ರಷ್ಟನ್ನು ಊರಿನ ದಲಿತರ ಅಭ್ಯುದಯಕ್ಕೆ ಸಮರ್ಪಕವಾಗಿ ಬಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದಲಿತರಿಗೆ ಕೊಡಬೇಕೆಂದು ಆದೇಶಿಸಿದ್ದರಿಂದ ಇದೊಂದು ಯಶಸ್ವಿ ಹೋರಾಟವಾಗಿ ಕೊನೆಗಂಡಿದೆ. 

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕರಾದ ಆರ್.ಕೃಷ್ಣ, ಸಹಸಂಚಾಲಕ ಎನ್.ರಾಜೇಂದ್ರಸಿಂಗ್ ಬಾಬು, ಮುಖಂಡರಾದ ಅಂಬುಜಿ, ಡಿ.ರಮೇಶ್, ಭರತ್ ರಾಜ್, ಕುಮಾರ್, ನಿಂಗರಾಜು, ಶಿವಶಂಕರ ಸ್ವಾಮಿ, ಮಹದೇವ, ಶಂಕರ್, ಮುಂತಾದವರು ಭಾಗವಹಿಸಿದ್ದರು.