ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಲು ಒತ್ತಾಯಿಸಿ ಬೀದಿಬದಿ ಮಾರಾಟಗಾರರ ರಾಜ್ಯ ಸಮ್ಮೇಳನ

Monday, 20 June 2016

ತುಮಕೂರು, ಜೂನ್ 20: ಕೇಂದ್ರ ಸರ್ಕಾರ ಬೀದಿ ಬದಿಮಾರಾಟಗಾರರ ಸಂರಕ್ಷಣೆಗಾಗಿ ಕಾಯಿದೆಯನ್ನು ರೂಪಿಸಿ 2 ವರ್ಷಗಳು  ಕಳೆದರೂ  ರಾಜ್ಯ ಸರ್ಕಾರ ಅದರ  ಜಾರಿಗೆ ನಿಯಮಾವಳಿಗಳನ್ನು ರೂಪಿಸದೆ ಇರುವ ಕ್ರಮವನ್ನು ವಿರೋಧಿಸಿ ಈ ತಕ್ಷಣ ನಿಯಮಾವಳಿಗಳ ರೂಪಿಸಿ ಬೀದಿಬದಿ ಮಾರಾಟಗಾರರ ಹಿತಕಾಯಲು ಮುಂದಾಗಬೇಕು ಹಾಗು ನಗರ ಬಡವರಾಗಿರುವ ಈ ಜನರಿಗೆ ಸಾಮಾಜಿಕ ಭದ್ರತೆಯ ಭಾಗವಾಗಿ ಅವರ ಹಾಗೂ ಕುಟುಂಬ ವರ್ಗದವರ ಅನಾರೋಗ್ಯದ ಸಂಧರ್ಭದಲ್ಲಿ ಉಚಿತ ಚಿಕಿತ್ಸೆ ನೀಡುವ, ಮಕ್ಕಳ ಶಿಕ್ಷಣ, ವಯಸ್ಸಾದಾಗ ಪಿಂಚಣಿ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬೀದಿ ಬದಿ ಮಾರಾಟಗಾರರ ಫೆಡರೇಷನ್, ಪ್ರಧಮ ರಾಜ್ಯ ಸಮಾವೇಶವು ಜೂನ್ 21ರಂದು  ಬೆಳಿಗ್ಗೆ  11-30ಕ್ಕೆ  ಸೂರಿಭವನ, ನಂ.40/5, 2ನೇ ಬಿ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಸಂಪಂಗಿರಾಮನಗರ, ಬೆಂಗಳೂರು-560027 ಈ ವಿಳಾಸದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಹಾಗೂ ಸಿಐಟಿಯು ಮುಖಂಡರಾದ ಎನ್.ಕೆ.ಸುಬ್ರಮಣ್ಯರವರು ತಿಳಿಸಿದರು. 

ಸಮಾವೇಶವನ್ನು  ಕರ್ನಾಟಕ ರಾಜ್ಯ ಬೀದಿ ಬದಿ ಮಾರಾಟಗಾರರ ಫೆಡರೇಷನ್ ರಾಜ್ಯ  ಅಧ್ಯಕ್ಷರಾದ  ಕೆ.ಎನ್.ಉಮೇಶ್ ಅವರು  ನೇರವೇರಿಸಲಿದ್ದು,  ಅಧ್ಯಕ್ಷತೆಯನ್ನು ತುಮಕೂರು ಪುಟ್ ಪಾತ್ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರು ಕಳೆದ 30 ವóರ್ಷಗಳಿಂದ ಬೀದಿಬದಿ ಮಾರಾಟಗಾರರೂ ಅಗಿರುವ ಮಹಮದ್ ಇಬ್ರಾಹಿಂ ಅವರು ವಹಿಸುವರು, ಮುಖ್ಯ ಅತಿಥಿಗಳಾಗಿ ಬೆಂಗಳೂರು ಬೀದಿ ಬದಿ ಮಾರಾಟಗಾರರ ಸಂಘದ ಮುಖಂಡರಾದ ಬಸಮ್ಮ, ಮಂಡ್ಯ ಜಿಲ್ಲಾ ಬೀದಿಬದಿ ಮಾರಾಟಗಾರರ ಸಂಘದ ಅಧ್ಯಕ್ಷರಾದ ಎಸ್.ಬಿ.ರಾಮು, ಮಂಗಳೂರು ಬೀದಿ ಬದಿ ಮಾರಾಟಗಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಸುನಿಲ್‍ಕುಮಾರ್ ಬಜಾಲ್, ಕರ್ನಾಟಕ ರಾಜ್ಯ ಬೀದಿ ಬದಿ ಮಾರಾಟಗಾರರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಅವರು ಭಾಗವಹಿಸಲಿದ್ದಾರೆ.  ತುಮಕೂರು ಜಿಲ್ಲೆಯ ಪುಟ್ ಪಾತ್ ವ್ಯಾಪಾರಿಗಳ ಸಂಘದ ಖಚಾಂಚಿ ಲಕ್ಷ್ಮಮ್ಮ, ಅಕ್ರಂ, ನಾಗರಾಜು ಸೇರಿದಂತೆ ಸಂಘದ  ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.