ಜುಲೈ 1: ಬೆಂಗಳೂರಿನಲ್ಲಿ ಅಖಿಲ ಭಾರತ ಕಿಸಾನ್ ಮಂಡಳಿ ಸಭೆ

ಸಂಪುಟ: 
10
ಸಂಚಿಕೆ: 
25
Sunday, 12 June 2016

ಜುಲೈ 1. ರಂದು ಅಖಿಲ ಭಾರತ ಕಿಸಾನ್ ಸಭಾದ ಅಖಿಲ ಭಾರತ ಕಿಸಾನ್ ಮಂಡಳಿ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು ಈಗಾಗಲೇ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಶ್ರೀ ಶಾಂತರಾಜು ಅಧ್ಯಕ್ಷರಾಗಿರುತ್ತಾರೆ ಮತ್ತು ಶ್ರೀ ವೆಂಕಟಾಚಲಯ್ಯ ಪ್ರಧಾನ ಕಾರ್ಯದರ್ಶಿಗಳಾಗಿರುತ್ತಾರೆ. ಬೆಂಗಳೂರು ಜಿಲ್ಲೆಯ ವಿವಿಧ ವಿದ್ಯಾರ್ಥಿ- ಯುವಜನ-ಮಹಿಳೆ ಹಾಗೂ ಕಾರ್ಮಿಕ ಸಂಘಗಳ ಪಧಾದಿಕಾರಿಗಳು ಸ್ವಾಗತ ಸಮಿತಿಯ ಇತರ ಪದಾಧಿಕಾರಿಗಳಾಗಿರುತ್ತಾರೆ. ಈ ಸ್ವಾಗತ ಸಮಿತಿಯಲ್ಲಿ ಬೆಂಗಳೂರು ನಗರ ಮತ್ತು ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಸಮಿತಿಗಳು ಪ್ರಮುಖವಾಗಿ ತಮ್ಮನ್ನು ತೊಡಗಿಸಿಕೊಂಡಿವೆ. ಈ ಸಭೆÉಯ ಯಶಸ್ವಿಗೆ ಅಗತ್ಯವಾದ ನೆರವನ್ನು ಸಂಗ್ರಹಿಸಲು ನಿರ್ಧರಿಸಿವೆ ಜೂಲೈ 01 ರಂದು ರೈತರ ರಾಲಿ ನಡೆಯಲಿದೆ.

ಗ್ರಾಮಗಳಲ್ಲಿ ಪ್ರತಿಕೃತಿ ದಹನ, ಬಹಿರಂಗ ಸಭೆಗಳು

ಸರಕಾರಿ ಜಮೀನುಗಳಿಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಮತ್ತು ಇತರೆ ರೈತರನ್ನು ಗ್ರಾಮ ಗ್ರಾಮಗಳಲ್ಲಿ ಅಣಿ ನೆರೆಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಂಪೆನಿ ಪರವಾದ ವ್ಯವಸಾಯ ಹಾಗೂ ಭೂ ನೀತಿಯ ವಿರುಧ್ಧ ಪ್ರತಿಭಟನೆಯನ್ನು, ಅವುಗಳ ಪ್ರತಿಕೃತಿ ದಹನದ ಮೂಲಕ ಆಯೋಜಿಸಿ, ಜಾಗೃತಿ ಮೂಡಿಸ ಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ತನ್ನ ಗ್ರಾಮ ಘಟಕಗಳಿಗೆ ಕರೆ ನೀಡಿದೆ.

ಭೂಸ್ವಾಧೀನದಲ್ಲಿ ಮಧ್ಯ ಪ್ರವೇಶ :

ಬೆಳಗಾವಿ-ಗದಗ ಮತ್ತು ಹೊಸಪೇಟೆ-ಬಳ್ಳಾರಿ, ಬೆಂಗಳೂರು-ಚನ್ನೈ ಹಾಗೂ ಬೆಂಗಳೂರು-ಮೈಸೂರು ರಾಷ್ಠ್ರೀಯ ವೇಗಭರಿತ ಹೆದ್ದಾರಿ ನಿರ್ಮಿಸಲು ರಾಜ್ಯದಾದ್ಯಂತ ಹತ್ತಾರು ಸಾವಿರ ಎಕರೆ ಜಮೀನನ್ನು ಭೂಸ್ವಾಧೀನ ಮಾಡಲು ಹೆದ್ದಾರಿ ಪ್ರಾಧಿಕಾರ ಮತ್ತು ಸರಕಾರಗಳು ಮುಂದಾಗುತ್ತಿವೆ. ತನ್ನದೇ ಕಾಯ್ದೆಯಂತೆ ಬಲವಂತದ ಭೂಸ್ವಾಧೀನಕ್ಕೆ ಕ್ರಮವಹಿಸುವುದರಿಂದ ರೈತರಿಗೂ ಮತ್ತು ಸರಕಾರಕ್ಕೂ ಸಹಜವಾಗಿಯೇ ಸಂಘರ್ಷ ಬರುವುದರಿಂದ, ರೈತ ಸಂಘದ ಜಿಲ್ಲಾ ಸಮಿತಿಗಳು ಈ ಕುರಿತು ಮಧ್ಯ ಪ್ರವೇಶಿಸಿ ರೈತರ ರಕ್ಷಣೆಗೆ ಮುಂದಾಗುವಂತೆ ರಾಜ್ಯ ಸಮಿತಿ ಕರೆ ನೀಡಿದೆ. 

ಸಣ್ಣ ನೀರಾವರಿ ಇಲಾಖೆ ಭ್ರಷ್ಠಾಚಾರ ವಿರೋಧಿಸಿ ಜೂನ್ 7 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ :

ಕೊಪ್ಪಳ ಜಿಲ್ಲಾ ಸಮಿತಿಯು ಕೊಪ್ಪಳ ಹಾಗೂ ರಾಯಚೂರು ವಿಭಾಗದ ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದಿರುವ ಕಾಮಗಾರಿ ಮಾಡದೇ ಸುಮಾರು 34 ಕೋಟಿ ರೂಗಳ ಬಿಲ್ ಎತ್ತಿದ ಭ್ರಷ್ಠಾಚಾರದ ಪ್ರಕರಣದ ವಿರುಧ್ಧ ಜೂನ್-07 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿರುವುದನ್ನು ರಾಜ್ಯ ಸಮಿತಿ ಬೆಂಬಲಿಸಿದೆ.