ದಲಿತ ಹುಡುಗನ ಮೇಲೆ ಹಲ್ಲೆ: ಮಾಜಿ ಸಚಿವ ಕಳಕಪ್ಪ ಬಂಡಿ ಸಹೋದರರನ್ನು ಬಂಧಿಸಿ

ಸಂಪುಟ: 
10
ಸಂಚಿಕೆ: 
24
Monday, 6 June 2016

ಗದಗ ಜಿಲ್ಲೆಯ ಗಜೇಂದ್ರಗಡದ ಲಂಬಾಣಿ ಸಮುದಾಯದ ಶಿವು ಮಾಳೋತ್ತರ ಎಂಬುವರು ಮೇ ತಿಂಗಳ 24ರಂದು ಕಳಕಪ್ಪ ಬಂಡಿ ಮತ್ತು ಸಹೋದರ ಒಡೆತನದಲ್ಲಿರುವ ಪೆಟ್ರೋಲ್ ಬಂಕ್‍ಗೆ ಹೋಗಿ ರೂ.30ಕ್ಕೆ ಪೆಟ್ರೋಲ್ ಹಾಕಿ ಅಂದಿದ್ದಾರೆ. ಪೆಟ್ರೋಲ್ ಹಾಕುವವನು ಮೂವತ್ತು ರೂಪಾಯಿಗೆ ಬರಲ್ಲ ಅಂದಾಗ ಬೇರೆ ಎಲ್ಲಾ ಪೆಟ್ರೋಲ್ ಬಂಕ್‍ನಲ್ಲಿ ಹಾಕ್ತಾರೆ ನೀವ್ಯಾಕೆ ಹಾಕಲ್ಲ ಅಂದಿದ್ದಾರೆ.

ಅದನ್ನು ಬಂಕ್ ಕಛೇರಿ ಒಳಗಿದ್ದ ಸಿದ್ದಪ್ಪ ಬಂಡಿ ಕೇಳಿಸಿಕೊಂಡು ವ್ಯಗ್ರಗೊಂಡು, ಪೆಟ್ರೋಲ್ ಕೇಳಿದ ಶಿವುನನ್ನು ಎಳೆದು ತರಿಸಿ, ಈ ಲಮಾಣಿಗಳದು ಬಾಳ ಅಗೈತಿ ಅನ್ನುತ್ತಾ ಅವಾಚ್ಯವಾಗಿ ಬೈದು ಬಾಯಿಗೆ ಪೆಟ್ರೋಲ್ ಒರೆಸುವ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ, ಕೈಗೆ ಸಿಕ್ಕ ಕೋಲು, ಕಬ್ಬಿಣದ ರಾಡಿನಿಂದ ಅಮಾನುಷವಾಗಿ ಹೊಡೆದು ಅಟ್ಟಹಾಸ ಮೆರೆದಿದ್ದಾರೆ.

ಈ ದುಷ್ಟರ ಮೇಲೆ ಮೊಕದ್ದಮೆ ದಾಖಲಾದ್ರೂ ಪೊಲೀಸರು ಇನ್ನೂ ಬಂಧಿಸದಿರುವುದು ಖಂಡನೀಯ. ದಲಿತ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಈ ಗೂಂಡಾಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಹಲ್ಲೆಗೊಳಗಾದ ಶಿವು ಮಾಳೋತ್ತರನಿಗೆ ನ್ಯಾಯ ಕೊಡಬೇಕು.

ವರದಿ: ಪೀರು ರಾಥೋಡ್