ಕೇರಳದಲ್ಲಿ ಹತಾಶ ಆರೆಸ್ಸೆಸ್ ಹಲ್ಲೆಗಳು

ಸಂಪುಟ: 
10
ಸಂಚಿಕೆ: 
22
Sunday, 22 May 2016

ಕೇರಳದ ಚುನಾವಣೆಗಳಲ್ಲಿ ಆರೆಸ್ಸೆಸ್ ಮಂದಿ ಹಲವೆಡೆ ಮಾರಣಾಂತಿಕ ಹಲ್ಲೆಗಳನ್ನು ನಡೆಸಿದ್ದಾರೆ. ಇದನ್ನು ಬಲವಾಗಿ ಖಂಡಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೊ ಇಲ್ಲಿ ತಮ್ಮ ಶೋಚನೀಯ ಸೋಲಿನಿಂದ ಹತಾಶರಾಗಿ ಅವರು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಹೇಳಿದೆ.

ಸಿಪಿಐ(ಎಂ) ಪೊಲಿಟ್ ಬ್ಯೂರೊ ಸದಸ್ಯ ಪಿನರಾಯಿ ವಿಜಯನ್ ರವರನ್ನು ಆರಿಸಿದ ಧರ್ಮದಂ ಕ್ಷೇತ್ರದಲ್ಲಿ ಎಲ್.ಡಿ.ಎಫ್ ವಿಜಯ ರಾಲಿಯ ಮೇಲೆ ಬಾಂಬ್ ಎಸೆದುದರಿಂದ ಒಬ್ಬ ಸಿಪಿಐ(ಎಂ) ಕಾರ್ಯಕರ್ತರ ಸಾವು ಸಂಭವಿಸಿದೆ, ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಂಙಂಗಾಡ್ ನಲ್ಲಿ ವಿಜಯೋತ್ಸವ ರಾಲಿಯ ಮೇಲೆ ಆರೆಸ್ಸೆಸ್ ದಾಳಿಯಲ್ಲಿ ಹೊಸದಾಗಿ ಚುನಾಯಿತರಾದ ಶಾಸಕ ಮತ್ತು ಇನ್ನೊಬ್ಬ ಹಿರಿಯ ಸಿಪಿಐ(ಎಂ) ಮುಖಂಡರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗಿ ಬಂದಿದೆ.

ತ್ರಿಶೂರ್ ಮತ್ತು ತಿರುವನಂತಪುರ ಜಿಲ್ಲೆಗಳಿಂದಲೂ ಇಂತಹ ದಾಳಿಗಳ ವರದಿಗಳು ಬಂದಿವೆ. ನೆಮಂ ಕ್ಷೇತ್ರದಲ್ಲಿ ಮಾಜಿ ಶಾಸಕ ಮತ್ತು ಸಿಪಿಐ(ಎಂ) ಅಭ್ಯರ್ಥಿ ಶಿವನ್ ಕುಟ್ಟಿ ಕಚೇರಿಯ ಮೇಲೆ ದಾಳಿ ನಡೆದಿದೆ.

ಆರೆಸ್ಸೆಸ್ ಅಪರಾಧಿಗಳನ್ನು ತಕ್ಷಣವೇ ಹಿಡಿಯಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸಿದೆ.