ಸಿ.ಐ.ಟಿ.ಯು ಉಡುಪಿ ಜಿಲ್ಲಾ 5ನೇ ಸಮ್ಮೇಳನ ಬಂಡವಾಳಶಾಹಿ ವ್ಯವಸ್ಥೆ ಎಲ್ಲಿ ಗಟ್ಟಿಯಾಗಿದೆಯೋ, ಅಲ್ಲೆಲ್ಲಾ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ : ಮೀನಾಕ್ಷಿಸುಂದರಂ

ಸಂಪುಟ: 
10
ಸಂಚಿಕೆ: 
22
Sunday, 22 May 2016

ಹಲವು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಾರ್ಮಿಕರನ್ನು ಕಡೆಗಣಿಸಿದೆ. ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ಒಂದು ಸಮೀಕ್ಷೆ ನಡೆಸಿದ ಪ್ರಕಾರ ಕಳೆದ 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಉದ್ಯೋಗಗಳೆ ಸೃಷ್ಟಿಯಾಗಿಲ್ಲ. ಬದಲಾಗಿ ಕೈಗಾರಿಕೆಗಳಲ್ಲಿ ಉದ್ಯೋಗದ ಕುಸಿತವಾಗಿದೆ. ದೇಶದ ಶೇಕಡಾ 50ರಷ್ಟು ಆಸ್ತಿ ಕೇವಲ ಶೇಕಡಾ 1ರಷ್ಟು ಜನರ ಕೈಯಲ್ಲಿದೆ. ಎಂದು ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿಸುಂದರಂ ಹೇಳಿದರು.

ಉಡುಪಿಯಲ್ಲಿ ಕಾಂ|| ಅಬ್ರಾಹಂ ಕರ್ಕಡ ನಗರದ ಕಾ|| ಸಿ.ನಾರಾಯಣ ವೇದಿಕೆಯ ಸಭಾಂಗಣದಲ್ಲಿ ಸಿ.ಐ.ಟಿ.ಯು 5ನೇ ಸಮ್ಮೇಳನ ಉದ್ಟಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಹೊರತಾಗಿ ನಮ್ಮ ದೇಶವಿಲ್ಲ. ಇನ್ನೊಂದು ಸಮಾಜ ಜಗತ್ತಿನಲ್ಲಿ ಹುಟ್ಟಲು ಸಾಧ್ಯವಿಲ್ಲ ಎಂಬುದನ್ನು ಸಾಧಿಸಲೇ ದೇಶದಲ್ಲಿ ಕೆಲವರು ಹುಟ್ಟಿದ್ದಾರೆ. ಬಂಡವಾಳ ಶಾಹಿ ವ್ಯವಸ್ಥೆ ಎಲ್ಲಿ ಗಟ್ಟಿಯಾಗಿದೆಯೋ ಅಲ್ಲೆಲ್ಲಾ ಭ್ರಷ್ಟಚಾರ ತುಂಬಿತುಳುಕುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಬೀಡಿ ಉದ್ಯಮವನ್ನೇ ನಂಬಿಕೊಂಡು ಬದುಕುತ್ತಿರುವ ಅನೇಕ ಕಾರ್ಮಿಕ ಕುಟುಂಬಗಳಿವೆ. ಒಂದು ವೇಳೆ ತಂಬಾಕು ನಿಷೇದಿಸಿದ್ದೇ ಆದಲ್ಲಿ ಈ ಉದ್ಯಮವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತವೆ.

ಕಾರ್ಮಿಕರಿಗೆ ತುಟ್ಟಿ ಭತ್ತೆಯನ್ನು ನೀಡಲಾಗಿಲ್ಲ ಇತ್ತೀಚಿಗೆ ರಾಜ್ಯ ಕಾರ್ಮಿಕ ಸಚಿವರೊಂದಿಗೆ ;ನಡೆದ ಸಭೆಯಲ್ಲಿ ಇದನ್ನು ಸೃಷ್ಟಿಸಲಾಗಿದೆ. ಕಂಪನಿ, ಕಾರ್ಖಾನೆ ಮಾಲಿಕರು ರಾಜಕೀಯ ಸಂಘ ಸಂಸ್ಥೆಗಳಿಗೆ ಕೈ ತುಂಬ ದೇಣಿಗೆ ನೀಡುತ್ತಿವೆ. ಆದರೆ ಭತ್ಯೆ ಸೌಲಭ್ಯಗಳ ವಿಚಾರದಲ್ಲಿ ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಮೀನಾಕ್ಷಿಸುಂದರಂ ಆರೋಪಿಸಿದರು.

ಸಮ್ಮೇಳನದ ಉದ್ಟಾಟನಾ ಅಮಾರಂಭದ ಅಧ್ಯ ಕ್ಷತೆ ವಹಿಸಿದ್ದ ಸಿ.ಐ.ಟಿ.ಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಂಕರ ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಪಿ. ವಿಶ್ವಾನಾಥ ರೈ, ಸಿ.ಐ.ಟಿ.ಯು ಮುಖಂಡರಾದ ಎಚ್.ನರಸಿಂಹ, ಶಶಿದರ ಗೊಲ್ಲ, ಕೆ.ಲಕ್ಷ್ಮಣ, ಮಹಾಬಲ ವಡೇರ್ ಹೊಬಳಿ, ಜೀವ ವಿಮ ನೌಕರರ ಸಂಘದ ಕಾರ್ಯದರ್ಶಿ ಗುರುದತ್ತ್, ಎ,ಐ.ಟಿ.ಯು.ಸಿನ ಕೆ.ವಿ ಭಟ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಕಲ್ಲಾಗರ ಕಾರ್ಯಕ್ರಮ ನಿರುಪಿಸಿದರು.

ಕಾರ್ಮಿಕರ ವರ್ಣರಂಜಿತ ಬೃಹತ್ ಮೆರವಣಿಗೆ-ಕೆಂಪಾಗಿ ರಂಗೇರಿದ ಉಡುಪಿ ನಗರ

ಸಮ್ಮೇಳನದ 2ನೇ ದಿನದಂದು ಜಿಲ್ಲೆಯಾದ್ಯಂತ ಸಿ.ಐ.ಟಿ.ಯುಗೆ ಸಂಯೋಜಿಸಲ್ಪಟ್ಟ ವಿವಿಧ ಕಾರ್ಮಿಕ ಸಂಘಗಳ ಸದಸ್ಯ ಕಾರ್ಮಿಕರ ವರ್ಣರಂಜಿತ ತಾಳ ;ಮೇಳ ಬ್ಯಾಂಡ್ ಗಳನ್ನೊಳಗೊಂಡ ಆಕರ್ಷಕ ಬೃಹತ್ ಮೆರವಣಿಗೆಯು ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬಳಿಕ  ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿತ್ತು.  ಉಡುಪಿ ನಗರವನ್ನು ಅಲಂಕರಿಸಲಾಗಿದ್ದು ಕೆಂಪು ಸಮವಸ್ತ್ರದಾರಿ ಸ್ವಯಂ ಸೇವಕರ ಪಥ ಸಂಚಲದಿಂದ ಉಡುಪಿ ನಗರವೇ ಕೆಂಪಾಗಿ ರಂಗೇರಿತ್ತು. ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ಕಾಂ|| ದೋಗು ಸುವರ್ಣ ವೇದಿಕೆಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿಸುಂದರಂ ಮತ್ತು ದ.ಕ ಜಿಲ್ಲಾ ಸಿ.ಐ.ಟಿ.ಯು ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಭಾಷಣ ಮಾಡಿದರು.

ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಭಾರತದಲ್ಲಿ ಒಬ್ಬ ಯೋಗ್ಯ ಜೀವನ ನೆಡೆಸಲು ಆತನಿಗೆ ಮಾಸಿಕ 18 ಸಾವಿರ ರೂ ಸಂಬಳವಿರಬೇಕು. ಬಡವರು ಕೂಡ ಇಂದು ನೀರಿಗೆ ಹಣ ಕೊಟ್ಟು ಕುಡಿಯುವ ಪರಿಸ್ಥಿತಿ ಇದೆ. ಇದೇ ರೀತಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಈ ಶಿಫಾರಸ್ಸು ಜ್ಯಾರಿಗೊಳಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ಉತ್ತರಖಾಂಡದಲ್ಲಿಂದ ಪ್ರಜಾಪ್ರಭುತ್ವ ಸರಕಾರವನ್ನು ಉರುಳಿಸುದ್ದಾಕ್ಕಾಗಿ ಕೇಂದ್ರದ ಮೋದಿ ಸರಕಾರವು ರಾಷ್ಟ್ರಪತಿ ಆಡಳಿತ ಕುರಿತ ಹೈಕೊರ್ಟ ತಡೆಯಾಜ್ಞೆ ವಿರುದ್ಧ ಕೇವಲ 18 ಗಂಟೆಯೊಳಗೆ ಸುಪ್ರೀಮ್ ಕೋರ್ಟಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದೆ. ಆದರೆ ಕೇಂದ್ರ ಸರಕಾರ ಬೋನಸ್ ಜಾಸ್ತಿ ಮಾಡಿರುವುದಕ್ಕಾಗಿ ಕೇರಳ, ;ತಮಿಳುನಾಡು, ಕರ್ನಾಟಕ ಸರಕಾರ ತಡೆಯಾಜ್ಞೆ ನೀಡಿ ಹಲವು ಸಮಯ ಕಳೆದರೂ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಪುರುಸೊತ್ತೇ ಇಲ್ಲಾ. ಕೇಂದ್ರ ಸರಕಾರ ಇಡೀ ದೇಶವನ್ನು ಸೋಮಾಲಿಯ ಮಾಡಲು ಹೊರಟಿದೆ. ಕಾರ್ಮಿಕರು ದುಡಿದು ಕಟ್ಟಿದ ಭವಿಷ್ಯ ನಿಧಿ ಹಣ ತೆಗೆಯುವುದಾದರೆ ತೆರಿಗೆ ಕಟ್ಟಬೇಕು ಎಂದು ಬಜೆಟ್‍ನಲ್ಲಿ ಪ್ರಸ್ತಾಪ ಇಡಲಾಯಿತು. ಇದಕ್ಕೆ ವಿರೋಧ ಬಂದ ಬಳಿಕ ಈ ಪ್ರಸ್ತಾಪ ಹಿಂತೆಗೆದುಕೊಂಡರು. ಜೊತೆಗೆ ನಿವೃತ್ತರಾಗದೆ ಶೇಕಡಾ 50ರಷ್ಟು ಹಿಂದಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ಮಾಡಿದರು. ಇ.ಎಸ್.ಐ ಸೌಲಭ್ಯದಿಂದ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯದ ಭದ್ರತೆ ಇತ್ತು. ಅದನ್ನು ಬದಲಾಯಿಸಿ ಕೆಲಸಕ್ಕೆ ಸೇರಿದ ಬಳಿಕ ಬಂದ ರೋಗಗಳಿಗಷ್ಟೇ ಇ.ಎಸ್.ಐ ಸೌಲಭ್ಯ ಎಂದು ಮಾಡಿದ್ದಾರೆ. ಅಂದರೆ ಕೆಲಸಕ್ಕೆ ಸೇರುವ ಮೊದಲೇ ಮದುವೆಯಾಗಿ ಮಗುವಾಗಿದ್ದರೆ ಅದಕ್ಕೆ ಅನಾರೋಗ್ಯ ಇದ್ದರೆ ಇ.ಎಸ್.ಐ ಸೌಲಭ್ಯ ದೊರೆಯುವುದಿಲ್ಲ.  ವಿ.ಆರ್.ಎಸ್ ಎಂದರೆ ಸ್ವಯಂ ನಿವೃತ್ತಿ ಯೋಜನೆ ಎಂಬುದೊಂದಿತ್ತು. ಅದನ್ನು ಪಿ.ಆರ್.ಎಸ್ ಎಂದು ಮಾಡಿದ್ದಾರೆ. ಅಂದರೆ ಕಾರ್ಮಿಕನಿಗೆ 45 ವರ್ಷ ದಾಟಿದರೆ ಮಾಲಕರೆ ಬಲವಂತವಾಗಿ ನಿವೃತ್ತಿ ನೀಡಿ ಕಳುಹಿಸುವುದು. ಮಾಲೀಕರಿಗೆ ಮಾತ್ರ ಬಜೆಟ್‍ನ ಮೊತ್ತಕ್ಕಿಂತ ಜಾಸ್ತಿ ತೆರಿಗೆ ರಿಯಾಯ್ತಿ ನೀಡಲಾಗುತ್ತಿದೆ. ದೇಶ ಆರ್ಥಿಕ ಅಭಿವೃಧ್ಧಿ ಹೊಂದಲು ಪೂರಕವಾದ ಆರ್ಥಿಕ ಕೈಗಾರಿಕೆ ನೀತಿಗಳನ್ನು ಅನುಸರಿಸಬೇಕಿದ್ದು ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಕಾರ್ಮಿಕರ ಒಗ್ಗೂಡಿಸುವಿಕೆ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ 2ಸಪ್ಟೆಂಬರ್ 2016 ರಂದು ಜರಗುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವುದಕ್ಕೆ ಮೀನಾಕ್ಷಿಸುಂದರಂ ಕರೆ ನೀಡಿದರು.

ಸಿ.ಐ.ಟಿ.ಯು ಉಡುಪಿ ಜಿಲ್ಲಾ ಸಮಿತಿಗೆ ಆಯ್ಕೆ: 

ಪಿ.ವಿಶ್ವನಾಥ ರೈ (ಅಧ್ಯಕ್ಷ) ಕೆ.ಶಂಕರ (ಪ್ರಧಾನ ಕಾರ್ಯದರ್ಶಿ) ಮಹಾಬಲ ವಡೇರ್ ಹೋಬಳಿ, ಬಾಲಕೃಷ್ಣ ಶೆಟ್ಟಿ, ಉಮೇಶ್ ಕುಂದರ್, ಬಲ್ಕೀಸ್, ಕೆ.ಲಕ್ಷ್ಮಣ (ಉಪಾಧ್ಯಕ್ಷರು), ಹೆಚ್ ನರಸಿಂಹ, ಸುರೇಶ ಕಲ್ಲಾಗರ, ಸುಜಾತ ಶೆಟ್ಟಿ, ಶೇಖರ ಬಂಗೇರ (ಕಾರ್ಯದರ್ಶಿಗಳು), ಶಶಿಧರ ಗೊಲ್ಲ (ಕೋಶಾಧಿಕಾರಿ), ಇವರನ್ನೊಳಗೊಂಡ 40 ಮಂದಿ ಕಾರ್ಯಾಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಗಣೇಶ ಗಂಗೊಳ್ಳಿ ತಂಡದಿಂದ ಕ್ರಾಂತಿಗೀತೆ ಹಾಗೂ ಜನಪದ ಹಾಡು ರಂಗಗೀತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವರದಿ: ವೆಂಕಟೇಶ ಕೋಣಿ