ಸಾರಿಗೆ ನೌಕರರ ಜಾಥಾ-ವಿಭಾಗೀಯ ಸಮಾವೇಶ

ಸಂಪುಟ: 
10
ಸಂಚಿಕೆ: 
22
Sunday, 22 May 2016

ಸಾವಿರಾರು ಕೋಟಿ ರೂಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾಗಳಿಗೆ ತೆರಿಗೆ ರೂಪದಲ್ಲಿ ಹಣವನ್ನು ಸಾರಿಗೆ ಇಲಾಖೆ ನೀಡುತ್ತಿದ್ದರು ಸಹ ಒಂದು ನಯಾ ಪೈಸೆಯನ್ನಯು ಸಹ ಸಾರಿಗೆ ಇಲಾಖೆಗೆ ಕೇಂದ್ರ ರಾಜ್ಯ ಸರ್ಕಾರಗಳು ಅನುದಾನವನ್ನು ನೀಡುತ್ತಿಲ್ಲ, ರಾಜ್ಯದಲ್ಲಿ 1.25 ಲಕ್ಷ ಸಾರಿಗೆ ನೌಕರರಿಗೆ ಸರಿಯಾದ ರೀತಿಯಲ್ಲಿ ವೇತನ ಹೆಚ್ಚಳ ಮಾಡದೆ ಆಡಳಿತ ಮಂಡಳಿ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದು ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಸರ್ಕಾರ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಾರಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದಶಿ ಹೆಚ್.ಎಸ್. ಮಂಜುನಾಥ್ ಸರ್ಕಾರವನ್ನು ಆಗ್ರಹಿಸಿದರು

ಅವರು ಮೇ 15 ರಿಂದ ಜಿಲ್ಲೆಯಾದ್ಯಂತ ಸಾರಿಗೆ ನೌಕರರ ವೇತತ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಸಿದ ಜಾಥದ ಸಮಾರೋಪ ಹಾಗೂ ವಿಭಾಗೀಯ ಸಮಾವೇಶವನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಾರಿಗೆ ನೌಕರರು ದಿನನಿತ್ಯ ಹೆಚ್ಚಳವಾಗುತ್ತಿರುವ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಹೆಚ್ಚಳವಾಗದೆ ಜೀವನ ನಿರ್ವಹಣೆ, ಮಕ್ಕಳ ಶಿಕ್ಷಣ ಆರೋಗ್ಯದ ಖರ್ಚುವೆಚ್ಚಗಳನ್ನು ನಿರ್ವಹಿಸಲು ಸಾಧ್ಯವಾಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಸಾರಿಗೆ ವಿಭಾಗದ ಲಾಭಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನೌಕರರಿಗೆ ಕಳೆದ 20 ವರ್ಷಗಳಿಂದ ವೇತನ ಹೆಚ್ಚಳವಾಗದೆ ಪರಿತಪಿಸುತ್ತಿದ್ದಾರೆ, ಆಡಳಿತ ಮಂಡಳಿ ನೌಕರರ ವೇತನ ಹೆಚ್ಚಳದ ವಿಚಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ ಎಂದ ಅವರು ನೌಕರರು ಡಬಲ್ ಡ್ಯೂಟಿ, ತ್ರೀಬಲ್ ಡ್ಯೂಟಿಗಳನ್ನು ಮಾಡಬೇಕಾದ ಅನುವಾರ್ಯತೆ ಇದ್ದು ವಿಪರೀತವಾದ ಕೆಲಸದ ಒತ್ತಡದಿಂದ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಜೊತೆಗೆ ನೌಕರರು ರಾತ್ರಿಯ ವೇಳೆಯಲ್ಲಿ ಉಳಿದುಕೊಳ್ಳಲು ವಿಶ್ರಾಂತಿ ಗೃಹಗಳು ಇಲ್ಲದೆ ಬಸ್ ಗಳಲ್ಲಿಯೇ ವಾಸ್ತವ್ಯ ಹೂಡಬೇಕಾಗಿದ್ದು ರಾಜ್ಯ ಸರ್ಕಾರ ಸಾರ್ವಜನಿಕರ ಹಿತದೃಷ್ಠಿಯಿಂದ ನೌಕರರ ಬೇಡಿಕೆಗಳ ಬಗ್ಗೆ ಗಮನಹರಿಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ನೌಕರರು ಸಂಘಟಿತರಾಗುವ ಮೂಲಕ ನೌಕರರಿಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಬಿ.ಎಂ.ಟಿಸಿ ನೌಕರರ ಸಂಘದ ಆನಂದ್, ರಾಜಣ್ಣ.ಕೆ. ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಆರ್. ದೇವರಾಜು ವಹಿಸಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ರಮೇಶ್ ಸ್ವಾಗತಿಸಿ, ಯತೀಶ್ ವಂದಿಸಿದರು. 

ಕೆ. ರಾಜಣ್ಣ