Error message

 • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
 • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ-ವಿರೋಧಿ ನೀತಿಗಳ ವಿರುದ್ಧ ಎಡಪಕ್ಷಗಳಿಂದ ಪ್ರತಿಭಟನೆ ಜೂನ್ 6ಕ್ಕೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಭೆ

ಸಂಪುಟ: 
10
ಸಂಚಿಕೆ: 
21
Sunday, 15 May 2016

ದೇಶದ ಪರಿಸ್ಥಿತಿಯು ಹಿಂದೆಂದಿಗಿಂತಲೂ ಹೆಚ್ಚು ಹದಗೆಟ್ಟಿದೆ. ಸ್ವಾತಂತ್ರ್ಯ ಪಡೆದಂದಿನಿಂದಲೂ ಇಲ್ಲಿಯವರೆಗೆ ನಮ್ಮ ದೇಶವನ್ನಾಳಿದ ಎಲ್ಲಾ ಸರ್ಕಾರಗಳು, ಕಾಂಗ್ರೆಸ್ ಆಗಿರಬಹುದು ಅಥವಾ ಬಿಜೆಪಿ ಆಗಿರಬಹುದು, ಜನಸಾಮಾನ್ಯರಿಗೆ ಮಾರಕವಾದ ನೀತಿಗಳನ್ನೇ ಜಾರಿಗೊಳಿಸುತ್ತಾ ಬಂದಿವೆ.

ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಭಾರತದ ಆರ್ಥಿಕತೆ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ವ್ಯಾಪಾರೀಕರಣ ಹಾಗೂ ಖಾಸಗೀಕರಣದಿಂದಾಗಿ ಕೋಟ್ಯಂತರ ಬಡವರು ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ, ಕಠಿಣ ಹೋರಾಟಗಳಿಂದ ಗಳಿಸಲಾಗಿದ್ದ ಕಾರ್ಮಿಕರ ಹಕ್ಕುಗಳನ್ನು ಹರಣ ಮಾಡಲಾಗುತ್ತಿದೆ.

ಅದೇ ರೀತಿಯಲ್ಲಿ ರಾಜ್ಯದಲ್ಲಿ ಆಳುತ್ತಿರುವ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿರುದ್ಯೋಗ, ರೈತರ ಆತ್ಮಹತ್ಯೆ ಮತ್ತು ಇತರೆ ಜ್ವಲಂತ ಸಮಸ್ಯೆಗಳು ದ್ವಿಗುಣಗೊಂಡಿವೆ. ಮಧ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ಬಹುತೇಕಕಡೆಕುಡಿಯುವ ನೀರು ಸಿಗದಂತಹ ಬರ ಪರಿಸ್ಥಿತಿ ಬಂದಪ್ಪಳಿಸಿದೆ. ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸುವುದು ಜರೂರು ಆಗಲೇಬೇಕು, ಆದಾಗ್ಯೂ ಅಗತ್ಯ ಹಣ ಮಂಜೂರು ಮಾಡಲು ಕೇಂದ್ರ ಸರ್ಕಾರವಾಗಲಿ ಹಾಗೂ ರೈತರನ್ನು ಕಾಪಾಡಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವಾಗಲಿ ಮುಂದೆ ಬಂದಿಲ್ಲ.

ಭ್ರಷ್ಟಾಚಾರ-ಮುಕ್ತ ಕರ್ನಾಟಕದ ಆಶ್ವಾಸನೆ ನೀಡಿದ್ದ ರಾಜ್ಯ ಸರ್ಕಾರ ಪ್ರಸಕ್ತ ಅಸ್ತಿತ್ವದಲ್ಲಿರುವ ‘ಲೋಕಾಯುಕ್ತ’ವನ್ನು ಬಲಗೊಳಿಸುವ ಬದಲು ಹೊಸದಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರಚಿಸುತ್ತಿರುವುದು ಸಮಂಜಸವಲ್ಲ. ಇದು ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೊಂದು ರಹದಾರಿಯಷ್ಟೇ!. ಹಾಗೆಯೇ ನಮ್ಮ ರಾಜ್ಯದಲ್ಲಿಯೂ ಸಹ ಸಂಘ ಪರಿವಾರ ಮತ್ತು ಬಿಜೆಪಿಗೆ ಸೇರಿದ ಪ್ರತಿಗಾಮಿ ಶಕ್ತಿಗಳ ಚಟುವಟಿಕೆಗಳು ಜನತೆಯ ಒಗ್ಗಟ್ಟು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿವೆ.

ಪ್ರಬಲ ಜನಾಂದೋಲನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಪೋರೇಟ್-ಪರ ಮತ್ತು ಜನ-ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವುದೇ ಈ ಘಳಿಗೆಯ ಅವಶ್ಯಕತೆ. ಈ ದಿಶೆಯಲ್ಲಿ-ಸಿಪಿಐ, ಸಿಪಿಐ(ಎಂ), ಎಸ್‍ಯುಸಿಐ(ಸಿ), ಸಿಪಿಐಎಂಎಲ್(ಲಿಬರೇಷನ್), ಫಾರ್ವರ್ಡ್ ಬ್ಲಾಕ್ - ಎಡಪಕ್ಷಗಳು ಜಂಟಿಯಾಗಿ 2016 ಜೂನ್ 6ರಂದು ಬೆಂಗಳೂರಿನಲ್ಲಿ  ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಂಘಟಿಸುತ್ತಿವೆ. ಅದಕ್ಕೂ ಮುಂಚೆ ಜಿಲ್ಲಾ ಮಟ್ಟದ ಸಮಾವೇಶಗಳನ್ನು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು.

ಹಕ್ಕೊತ್ತಾಯಗಳು

 1. ಜನವಿರೋಧಿ ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ಕೈಬಿಡಿ. ಸರ್ಕಾರದ ಅಡಿಯಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾಂಟ್ರಾಕ್ಟ್, ಅರೆಕಾಲಿಕ ಉದ್ಯೋಗಿಗಳ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಿ, ಅಸಂಘಟಿತ ಕ್ಷೇತ್ರಗಳ ಕಾರ್ಮಿಕರಿಗೆ ರಕ್ಷಣೆ ಒದಗಿಸಿ.
   
 2. ಬರಗಾಲ ಪರಿಹಾರ ಕಾಮಗಾರಿಗಳಿಗಾಗಿ ಹಾಗೂ ನರೇಗಾದ ಸೂಕ್ತ ಅನುಷ್ಠಾನಗೊಳಿಸಿ. ಮಧ್ಯ ಹಾಗೂ ಉತ್ತರಕರ್ನಾಟಕದ ಜಿಲ್ಲೆಗಳ ನೀರಿನ ಕೊರತೆಯನ್ನು ನೀಗಿಸಲು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿ. ಬಗರ್ ಹುಕುಂ ರೈತರಿಗೆ ಭೂಮಿ ಹಕ್ಕು ನೀಡಿ, ಬಡ-ಮಧ್ಯಮ ರೈತರ ಸಾಲ ಮನ್ನಾ ಮಾಡಿ, ರೈತ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಿ, ಅಗ್ಗ ದರದಲ್ಲಿ ಬೀಜ, ಗೊಬ್ಬರ, ಕೀಟನಾಶಕಗಳ ಒದಗಿಸಿ, ನಿರಂತರ ವಿದ್ಯುತ್‍ಗಾಗಿ, ಕಬ್ಬು-ಭತ್ತ-ತೆಂಗು ಬೆಳೆಗಾರರ ಬಿಕ್ಕಟ್ಟುನ್ನು ಶೀಘ್ರ ಪರಿಹರಿಸಿ.
   
 3. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಿರಿ, ಮರ್ಯಾದಾ ಹತ್ಯೆಗಳಿಗೆ ಕೊನೆಹಾಕಿ, ಮಹಿಳಾ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಎಲ್ಲಾ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಿ, ಮಹಿಳೆಯರಿಗೆ ಉದ್ಯೋಗ-ಶಿಕ್ಷಣಗಳ ಹಕ್ಕನ್ನು ಖಾತ್ರಿ ಪಡಿಸಿ.
   
 4. ಎಲ್ಲರಿಗೂ ಸಾರ್ವತ್ರಿಕ ಶಿಕ್ಷಣ ಹಾಗೂ ಆರೋಗ್ಯ ಖಾತ್ರಿ ಪಡಿಸಿ. ಉನ್ನತ ಶಿಕ್ಷಣವೂ ಸಹ ಬಡವರಿಗೆ-ಮಧ್ಯಮ ವರ್ಗದವರಿಗೆ ಕೈಗೆಟುಕುವಂತೆ ಮಾಡಿ. ಎಲ್ಲ ರೀತಿಯ ಡೊನೇಶನ್ ಕ್ಯಾಪಿಟೇಶನ್ ಫೀ ಪದ್ಧತಿಗೆ ಕೊನೆಹಾಕಿ. ಶಿಕ್ಷಣದ ಕೋಮುವಾದೀಕರಣ-ಕೇಸರೀಕರಣಗಳನ್ನು ತಡೆಗಟ್ಟಿ. ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯದ ವಾತಾವರಣವನ್ನು ಉಳಿಸಿ.
   
 5. ಎಲ್ಲರಿಗೂ ಉದ್ಯೋಗ ಒದಗಿಸಿ, ಅಲ್ಲಿಯವರೆಗೂ ನಿರುದ್ಯೋಗ ಭತ್ಯೆ ನೀಡಿ, ಸರ್ಕಾರದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿ.  
   
 6. ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಮೇಲಿನ ದಮನಕಾರಿ ಧೋರಣೆಗಳನ್ನು ಮಟ್ಟಹಾಕಿ, ಕೋಮುವಾದಿ-ಜಾತಿವಾದಿ ಶಕ್ತಿಗಳಿಗೆ ಕಡಿವಾಣ ಹಾಕಿ. ಸಾಂಸ್ಕøತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೂಕ್ತ ನೀತಿ ರೂಪಿಸಿ. ಎಲ್ಲಾ ಸಾಂಸ್ಕೃತಿಕ-ಪಾರಂಪರಿಕ ತಾಣಗಳ ಖಾಸಗೀಕರಣವನ್ನು ನಿಲ್ಲಿಸಿ.
   
 7. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಕೈಬಿಟ್ಟು ಲೋಕಾಯುಕ್ತವನ್ನು ಬಲಪಡಿಸಿ.