ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ದಿನ

ಸಂಪುಟ: 
10
ಸಂಚಿಕೆ: 
20
Sunday, 8 May 2016

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆರಡು ಪಟ್ಟಣಗಳಿಗಷ್ಟೇ ಸೀಮಿತವಾಗಿ ನಡೆಯುತ್ತಿದ್ದ ಮೇ ದಿನ, ಕಳೆದ ಎರಡು ವರ್ಷಗಳಿಂದ ಹಲವು ಊರುಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಂಗಳೂರು, ಕೊಂಚಾಡಿ, ಮೂಡಬಿದ್ರೆ, ಬೆಳ್ತಂಗಡಿ, ಗುರುಪುರ, ಸುಳ್ಯಗಳಲ್ಲಿ ಮೇ ದಿನಾಚರಣೆ ಸಿಐಟಿಯು ನೇತೃತ್ವದಲ್ಲಿ ನಡೆದಿದೆ .

ಕುಂದಾಪುರದಲ್ಲಿ ಹಲವಾರು ವರ್ಷಗಳಿಂದ ಮೇ ದಿನವನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತಿದ್ದು, ಈ ವರ್ಷವೂ ನಗರದ ಪ್ರಮುಖ ರಸ್ತೆಗಳಲ್ಲಿ ಸಿಐಟಿಯು ನೇತೃತ್ವದಲ್ಲಿ ಸಮವಸ್ತ್ರಧಾರಿಗಳ ಮೆರವಣಿಗೆ ನಡೆದು ಶಾಸ್ತ್ರಿ ವೃತ್ತದ ಬಳಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಿಂದ ನಡೆಯಿತು.

ಗುರುಪುರ ವಲಯ ಸಿಐಟಿಯು ನೇತೃತ್ವದಲ್ಲಿ ಮೇ 1 ರಂದು ಗುರುಪುರ ಕೈಕಂಭದಲ್ಲಿ ಮೇ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮೇ ದಿನ ಸಮಾರಂಭದ ಮುಖ್ಯ ಅತಿಥಿಯಾಗಿ ಸಿಐಟಿಯು ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿದರು. ಸಿಐಟಿಯು ಮುಖಂಡರಾದ ಯು.ಬಿ.ಲೋಕಯ್ಯ, ಸದಾಶಿವ ದಾಸ್, ಗಂಗಯ್ಯ ಅಮೀನ್, ನೋಣಯ್ಯ ಗೌಡ, ವಸಂತಿ ಕುಪ್ಪೆಪದವು. ಹಸನಬ್ಬ ಭಾಗವಹಿಸಿದ್ದರು.

ಮೇ 2 ರಂದು ಮೂಡಬಿದರೆಯಲ್ಲಿ ಸಿಐಟಿಯು ವತಿಯಿಂದ ಅಲ್ಲಿನ ಸಮಾಜಮಂದಿರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಮಾತನಾಡಿದರು. ಸಿಐಟಿಯು ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಕಾರ್ಮಿಕ ಮುಖಂಡರಾದ ರಮಣಿ,ಗಿರಿಜ,ರಾಧಾ,ಸುಂದರ ಶೆಟ್ಟಿ, ಶಂಕರ ವಾಲ್ವಾಡಿ, ಸೀತರಾಮ ಶೆಟ್ಟಿ ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಸಿಐಟಿಯು ಮಂಗಳೂರು ನಗರ ಸಮಿತಿಯ ನೇತೃತ್ವದಲ್ಲಿ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಿತು.

ಸುಳ್ಯದಿಂದ ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಶ್ರಯದಲ್ಲಿ ಮೊದಲು ಸುಳ್ಯ ಗಾಂಧಿನಗರದಿಂದ ಶಾಸ್ರ್ತವೃತ್ತದ ತನಕ ಕಾರ್ಮಿಕರ ಮೆರವಣಿಗೆ ನಡೆಯಿತು. ಅಮೃತಭವನದಲ್ಲಿ ನಡೆದ ಮೇ ದಿನ ಕಾರ್ಮಿಕ ಸಮಾವೇಶದಲ್ಲಿ ಫೆಡರೇಶನ್ ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಮಾತನಾಡಿದರು.

ಮೇ 2 ರಂದು ಬೆಳ್ತಂಗಡಿಯಲ್ಲಿ ನಡೆದ ಮೇ ದಿನ ಭಾರೀ ಭರ್ಜರಿಯಾಗಿತ್ತು. ಸುಮಾರು 900 ಜನ ಭಾಗವಹಿಸಿದ್ದರು.

ಮಂಗಳೂರು ನಗರದ ಇಂಡಸ್ಟ್ರಿಯಲ್ ಎಸ್ಟೇಟ್ ಇರುವ ಕೊಂಚಾಡಿಯಲ್ಲಿ ಮೂರನೆಯ ವರ್ಷದಲ್ಲಿ ಸಂಭ್ರಮದ ಮೇ ದಿನ ಮೇ 2 ರಂದು ನಡೆಸಲಾಯಿತು. ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ಎಂಪ್ಲೋಯಿಸ್ ಫೆಡರೇಶನ್ ಆಫ್ ಇಂಡಿಯಾದ ಮುಖಂಡರಾದ ಬಿ.ಎಂ.ಮಾಧವ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಮಿಕ ಮುಖಂಡರುಗಳಾದ ರವಿಚಂದ್ರ ಕೊಂಚಾಡಿ, ಸಿಪಿಐ(ಎಂ) ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ಯುವಜನ ಮುಖಂಡರಾದ ನವೀನ್ ಕೊಂಚಾಡಿ ಮತ್ತಿತರರು ಭಾಗವಹಿಸಿದ್ದರು.