ಮನೆ ನಿವೇಶನ ಹಂಚಲು ಒತ್ತಾಯಿಸಿ ಅಂಬ್ಲಮೊಗರಿನಲ್ಲಿ ಸಿಐಟಿಯು ಧರಣಿ:

ಸಂಪುಟ: 
10
ಸಂಚಿಕೆ: 
20
Sunday, 8 May 2016

ಉಳ್ಳಾಲ ಪ್ರದೇಶದ ಅಂಬ್ಲಮೊಗರು ಗ್ರಾಮ ಪಂಚಾಯತಿನಲ್ಲಿ ನಿವೇಶನ ರಹಿತರಿಗೆ ನೀಡಲು 3 ಎಕ್ರೆ ಜಮೀನನ್ನು ಗ್ರಾಮ ಪಂಚಾಯತು ಕಾದಿರಿಸಿದ್ದರೂ ಈವರೆಗೂ ಹಂಚಿಕೆ ನಡೆದಿಲ್ಲ. ಮನೆ ಹಾಗೂ ನಿವೇಶನ ರಹಿತರಿಗೆ ಶೀಘ್ರ ನಿವೇಶನ ಹಂಚುವಂತೆ ಸಿಐಟಿಯು ನೇತೃತ್ವದಲ್ಲಿ ಮೇ 2 ರಂದು ಅಂಬ್ಲಮೊಗರು ಗ್ರಾಮ ಪಂಚಾಯತು ಕಚೇರಿ ಮುಂದೆ ಧರಣಿಯನ್ನು ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಸಿಐಟಿಯು ದ.ಕ.ಜಿಲ್ಲಾ ಸಮಿತಿ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಉಳ್ಳಾಲ ಸಿಐಟಿಯು ಮುಖಂಡರಾದ ಜಯಂತ ನಾಯ್ಕ್, ಸಿಪಿಐ(ಎಂ) ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಸ್ಥಳೀಯ ಮುಖಂಡರಾದ ಜಯಂತ ಅಂಬ್ಲಮೊಗರು ಮತ್ತಿತರರು ಭಾಗವಹಿಸಿದ್ದರು.