ಗಾರ್ಮೆಂಟ್ಸ್ ಕಾರ್ಮಿಕರ ವಿರುದ್ದ ಮೊಕದ್ದಮೆ ಹಿಂತೆಗೆಯಿರಿ : ಸಿಐಟಿಯು

ಸಂಪುಟ: 
10
ಸಂಚಿಕೆ: 
19
Sunday, 1 May 2016

ಕೇಂದ್ರ ಸರ್ಕಾರ ಭವಿಷ್ಯನಿಧಿ ಕಾನೂನಿಗೆ ಅವೈಜ್ಞಾನಿಕ ತಿದ್ದುಪಡಿ ಮಾಡಿ ಹೊರಡಿಸಿದ ಅಧಿಸೂಚನೆಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ವಿಶೇಷವಾಗಿ ಗಾಮೆಂಟ್ಸ್ ಕಾರ್ಮಿಕರು ಸ್ವಯಂ ಪ್ರೇರಿತವಾಗಿ ವ್ಯಕ್ತಪಡಿಸಿದ ತೀವ್ರ ಸ್ವರೂಪದ ಪ್ರತಿರೋಧ  ನಂತರ ಉಂಟಾದ ಅಹಿತಕರ ಘಟನೆಗಳ ಕುರಿತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಬಂಧಿಸಲಾಗಿರುವ ನೂರಾರು ಕಾರ್ಮಿಕರ ವಿರುದ್ಧ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಒತ್ತಾಯಿಸಿದೆ.

ಕೇಂದ್ರ ಕಾರ್ಮಿಕ ಸಂಘಟನೆಗಳು ಒಕ್ಕೂರಲಿನಿಂದ ಈ ಕಾರ್ಮಿಕ ವಿರೋಧಿ ತಿದ್ದುಪಡಿ ರದ್ದುಪಡಿಸಬೇಕೆಂದು ಆಗ್ರಹಿಸಿದ್ದರೂ ಕೇಂದ್ರ ಸರಕಾರ ತನ್ನ ಹಠಮಾರಿ  ನೀತಿಯನ್ನು ಮುಂದುವರೆಸಿತ್ತು. ಕೇಂದ್ರ ಸರಕಾರದ ಈ ಕ್ರಮ ಸಹಜವಾಗಿಯೇ ಅತ್ಯಂತ ಕಡಿಮೆ ವೇತನ ಮತ್ತು ಯಾವೊದೇ ಸಾಮಾಜಿಕ ಭದ್ರತೆಯಿಲ್ಲದೆ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕನ್ನು ಧೃತಿಗೆಡಿಸಿತ್ತು. ಇದರಿಂದಾಗಿ ತಮ್ಮ ಶ್ರಮದ ಹಣ ಕೈ ತಪ್ಪಿ ಹೋಗುವ ಭಯವು ಕಾರ್ಮಿಕರನ್ನು ಇಂತಹ ತೀವ್ರ ತರಹದ ಹೋರಾಟಕ್ಕೆ ಧುಮುಕಲು ಪ್ರೇರಣೆ ನೀಡಿದೆ. ಅದರ ಪರಿಣಾಮವಾಗಿ ಇಡೀ ದೇಶದ ಗಮನ ಸೆಳೆಯುವಲ್ಲಿ ಗಾಮೆಂಟ್ಸ್ ಕಾರ್ಮಿಕರ ಈ ಹೋರಾಟ ಸಫಲವಾಗಿದೆ.

ಆದರೆ ಕೇಂದ್ರ ಸರಕಾರದಂತೆ ರಾಜ್ಯ ಸರಕಾರವೂ ತನ್ನ ಹಿಡಿತದಲ್ಲಿರುವ ಪೊಲೀಸರನ್ನು ಬಳಸಿ ಅಮಾಯಕ ಕಾರ್ಮಿಕರನ್ನು ಲಾಠಿ ಬೂಟುಗಳಿಂದ ದಮನಿಸಲು ಪ್ರಯತ್ನಿಸಿದ್ದು ತೀವ್ರ ಖಂಡನಾರ್ಹ. ಎರಡು ದಿನಗಳ ಈ ಹೋರಾಟದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಮಧ್ಯ ಪ್ರವೇಶಿಸಿ ಗಲಭೆಗಳನ್ನು ಸೃಷ್ಟಿಸಲು ಮತ್ತು ಸಾರ್ವಜನಿಕ ಸ್ವತ್ತುಗಳನ್ನು ನಾಶಪಡಿಸಿದ್ದಾರೆ. ಆದರೆ ಅಂತಹ ಶಕ್ತಿಗಳನ್ನು ಪತ್ತೆ ಮಾಡದ ಪೊಲೀಸರು ಇದಕ್ಕೆ ಸಂಬಂಧವೇ ಇರದ ನೂರಾರು ಅಮಾಯಕ ಕಾರ್ಮಿಕರ ಮೇಲೆ ಬೆಂಗಳೂರು ನಗರದಲ್ಲಿ 42 ಮತ್ತು ಗ್ರಾಮೀಣ ಪ್ರದೇಶದಲ್ಲಿ 12 ಪ್ರಕರಣಗಳನ್ನು ದಾಖಲು ಮಾಡಿ ಬಂಧಿಸಿ ಜೈಲಿಗೆ ಕಳಿಸಲಾಗಿದೆ.

ಸಿಐಟಿಯು ನಾಯಕರ ನಿಯೋಗವು ಜೈಲಿನಲ್ಲಿ ಬಂಧಿಸಲ್ಪಟ್ಟಿರುವ ವಿವಿಧ ಗಾಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕೆಲವು ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿಸಿದೆ. ಏಪ್ರಿಲ್ 18 ಮತ್ತು 19 ರ ಹೋರಾಟ ನಂತರ ನೂರಾರು ಕಾರ್ಮಿಕರನ್ನು ಪೊಲೀಸರು ಬಂಧಿಸಿರುವುದರಿಂದ ಅವರ ಕುಟುಂಬಗಳು ತೀವ್ರ ಆತಂಕಕ್ಕೀಡಾಗಿವೆ. ವಿಶೇಷವಾಗಿ ಬೆಂಗಳೂರು ಮತ್ತು ಸುತಮುತ್ತಲಿನ ಗ್ರಾಮೀಣ ಪ್ರದೇಶದ ಈ ಕಾರ್ಮಿಕರ ಬಂಧನದಿಂದ ಅವರ ದಿನನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಪ್ರವೇಶಿಸಿ ಅಮಾಯಕ ಗಾರ್ಮೆಂಟ್ಸ್ ಕಾರ್ಮಿಕರ ಮೇಲೆ ಹೊಡಲಾದ ಎಲ್ಲಾ ಮೊಕದ್ದÀಮೆಗಳನ್ನು ಹಿಂಪಡೆಯಲು ಕ್ರಮವಹಿಸಬೇಕೆಂದು ಸಿಐಟಿಯು ರಾಜ್ಯ ಸಮಿತಿ ಗೃಹ ಮಂತ್ರಿ ಡಾ. ಜಿ. ಪರಮೇಶ್ರ್ ಅವರನ್ನು ಅವರನ್ನು ಒತ್ತಾಯಿಸಿದೆ.

ಬಂಧಿತ ಗಾರ್ಮೆಂಟ್ಸ್ ಕಾರ್ಮಿಕರಿಗೆ ಸಿಐಟಿಯು ನಿಂದ ಉಚಿತ ಕಾನೂನು ನೆರವು

ಸಿಐಟಿಯು ನಾಯಕರ ನಿಯೋಗವು ಜೈಲಿನಲ್ಲಿ ಬಂಧಿಸಲ್ಪಟ್ಟಿರುವ ವಿವಿಧ ಗಾಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಂಧಿತರಾಗಿರುವ ಕಾರ್ಮಿಕರು ಬಿಡುಗಡೆಯಾಗಲು ಅಗತ್ಯವಿರುವ ಕಾನೂನು ನೆರವನ್ನು ಅಖಿಲ ಭಾರತ ವಕೀಲರ ಸಂಘ(ಎಐಎಲ್‍ಯು) ಸಹಕಾರದಿಂದ ನೀಡಲು ತೀರ್ಮಾನಿಸಿದೆ. ಅಲ್ಲದೆ ಭವಿಷ್ಯದಲ್ಲೂ ಗಾರ್ಮೆಂಟ್ಸ್ ಕಾರ್ಮಿಕರ ಸಮಸ್ಯೆಗಳಾದ, ಕನಿಷ್ಟವೇತನ, ಭವಿಷ್ಯನಿಧಿ, ವಿಮಾ ಸೌಲಭ್ಯ, ಗ್ರಾಚುಟಿ, ನಿವೃತ್ತಿ ಮೊದಲಾದ ಸಮಸ್ಯೆಗಳ ಕುರಿತಾಗಿಯೂ ಈ ನೆರವನ್ನು ಮುಂದುವರೆಸಲು ಸಿಐಟಿಯು ನಿರ್ಧರಿಸಿದೆ.

ಆದ್ದರಿಂದ ಏಪ್ರಿಲ್ 18 ಮತ್ತು 19 ರ ಹೋರಾಟದಲ್ಲಿ ಬಂಧಿತರಾಗಿರುವ ಕಾರ್ಮಿಕರು ಅಥವಾ ಅವರ ಕುಟುಂಬಗಳು ಕೆಳಕಂಡವ ಸಿಐಟಿಯು ನಾಯಕರನ್ನು ಸಂಪರ್ಕಿಸಿ ಉಚಿತ ವಕೀಲರ ಕಾನೂನು ನೆರವು ಪಡೆಯಬಹುದೆಂದು ಹೇಳಿಕೆಯೊಂದರಲ್ಲಿ ತಿಳಿಸಿದೆ:

ಸಂಪಂಗಿರಾಮನಗರದ ಸಿಐಟಿಯು ರಾಜ್ಯ ಸಮಿತಿ ಕಚೇರಿ, ಹೆಚ್.ಎನ್ ಗೋಪಾಲಗೌಡ, ಅಧ್ಯಕ್ಷರು (9880281281) ಟಿ. ಲೀಲಾವತಿ ಪ್ರಧಾನ ಕಾರ್ಯದರ್ಶಿ(9886522073) ಬೆಂಗಳೂರು ಜಿಲ್ಲಾ ಗಾಮೆಂಟ್ಸ್ ವರ್ಕರ್ಸ್ ಯೂನಿಯನ್, ಎಸ್, ವರಲಕ್ಷ್ಮೀ(9448087189), ಮೀನಾಕ್ಷಿ ಸುಂದರಂ,(9448070267)