ಟಿಎಂಸಿ ರಾಜ್ಯಸಭಾ ಮುಖಂಡನ ಹತಾಶ ಸೈಬರ್ ಕ್ರೈಮ್

ಸಂಪುಟ: 
10
ಸಂಚಿಕೆ: 
19
Monday, 2 May 2016

ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸಿನ ಮುಖಂಡ ಡೆರಿಕ್ ಒಬ್ರಿಯನ್ ಕಳೆದ ವಾರ ದಿಲ್ಲಿಯಲ್ಲಿ ಪತ್ರಿಕಾ ಸಮ್ಮೇಳನವೊಂದರಲ್ಲಿ ತನ್ನ ‘ಪ್ರಿಯ’ ಫೋಟೋ ಎಂದು ಒಂದು ಫೋಟೋವನ್ನು ಸಂಬ್ರಮದಿಂದ ‘ಬಿಡುಗಡೆ’ ಮಾಡಿದರು. ಅದರಲ್ಲಿ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಸಿಪಿಐ(ಎಂ)ನ ಹಿರಿಯ ಮುಖಂಡ ಪ್ರಕಾಶ ಕಾರಟ್ ಅವರಿಗೆ ಲಾಡು ತಿನ್ನಿಸುವಂತೆ ತೋರಿಸಲಾಗಿದೆ. ಆದರೆ ಇದು ವಾಸ್ತವವಾಗಿ ಮೋಸದ ಚಿತ್ರ, ರಾಜನಾಥ್ ಸಿಂಗ್ ಅವರು ಪ್ರಧಾನಿಗಳಿಗೆ ಲಾಡು ತಿನ್ನಿಸುವ ಚಿತ್ರದಲ್ಲಿ ಪ್ರಧಾನಿಗಳ ಬದಲಾಗಿ ಕಾರಟ್ ಅವರ ಚಿತ್ರವನ್ನು ಸೇರಿಸಿ ಮಾಡಿದ ಮೋಸದ ಚಿತ್ರ ಎಂದು ಬೇಗನೇ ಬಯಲಾಯಿತು.

ಸಿಪಿಐ(ಎಂ)ನ ಮತ್ತು ಪ್ರಕಾಶ ಕಾರಟ್‍ರವರ ಹೆಸರುಗೆಡಿಸುವ ಹತಾಶ ಪ್ರಯತ್ನ ಇದು ಎಂಬದು ಸ್ವಯಂವೇದ್ಯ. 

ಈಗ ಈತ ಸಾಮಾಜಿಕ ಮಾಧ್ಯಮದಲ್ಲಿ  ‘ಡೆರಿಕ್ ಓಹ್ ಬ್ರೈನ್’(ಓಹ್, ಎಂತಾ ತಲೆ!) ಎಂದೇ ಕುಖ್ಯಾತನಾಗಿದ್ದಾರಂತೆ. 

ದಿಲ್ಲಿಯ ಮಂದಿರ್‍ಮಾರ್ಗ್ ಡಿಸಿಪಿಗೆ ಈ  ಭಾರೀ  ‘ತಲೆ’ಯ ವಿರುದ್ಧ ದೂರು ದಾಖಲಿಸಲಾಗಿದೆ, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.