ಕನಿಷ್ಟ ವೇತನ ಪರಿಷ್ಕರಣೆ: ಮಾಲೀಕರ ಒತ್ತಡಕ್ಕೆ ಮಣಿಯದಿರಲು ಆಗ್ರಹ

ಸಂಪುಟ: 
10
ಸಂಚಿಕೆ: 
06
date: 
Sunday, 31 January 2016

ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆಗಳು ಮತ್ತು ಕರಡು ಅಧಿಸೂಚನೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಕೈಗಾರಿಕಾ ಮಾಲೀಕರ ಸಂಘಗಳು ಈ ಕನಿಷ್ಟವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಬಾರದೆಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆಗ್ರಹಿಸಿವೆ. ಇದಕ್ಕೆ ಸ್ಪಂದಿಸುವಂತೆ ಕಂಡಿರುವ ಮುಖ್ಯಮಂತ್ರಿಗಳು ಈ ಬಗೆಗೆ ಪರಿಶೀಲಿಸುವಂತೆ ಕನಿಷ್ಟವೇತನ ಸಲಹಾ ಮಂಡಳಿ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ಬಗ್ಗೆ ಸಿಐಟಿಯು ರಾಜ್ಯ ಕೇಂದ್ರದ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಸಿಐಟಿಯು ಸ್ವತಂತ್ರವಾಗಿ ಹಾಗೂ ಇತರೆ ಕೇಂದ್ರ ಕಾರ್ಮಿಕ ಸಂಘಗಳೊಂದಿಗೆ ಸೇರಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ. ಅಲ್ಲದೆ ಜನವರಿ 28 ರಂದು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಮನವಿ ಕೂಡ ಸಲ್ಲಿಸಲಾಗಿದೆ.

ಅಂದು ಬೆಂಗಳೂರಿನಲ್ಲಿ ರಾಜ್ಯ ಕಾರ್ಯದರ್ಶಿಗಳು ಕೆ.ಎನ್. ಉಮೇಶ್, ಕೆ.ಮಹಾಂತೇಶ್ ಅವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಕಚೇರಿಗೆ ತೆರಳಿ ಯಾವುದೇ ಒತ್ತಡಕ್ಕೆ ಮಣಿದು ಈಗಾಗಲೇ ಪ್ರಕಟಿಸಿರುವ ಅಂತಿಮ ಹಾಗು ಕರಡು ಅಧಿಸೂಚನೆಗಳನ್ನು ಹಿಂಪಡೆಯಬಾರದೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಪರವಾಗಿ ಮನವಿ ಸಲ್ಲಿಸಲಾಯಿತು.

 

ಕೆ. ಮಹಾಂತೇಶ್