ಸ್ಕಿಮ್ ನೌಕರ ಬೇಡಿಕೆಗಾಗಿ ರಾಷ್ಟ್ರ ಮಟ್ಟದಲ್ಲಿ ಹೋರಾಟ

ಸಂಪುಟ: 
10
ಸಂಚಿಕೆ: 
06
date: 
Sunday, 31 January 2016
Image: 

ಕನಿಷ್ಟ ಕೂಲಿಯನ್ನು ಮಾಸಿಕ 18,000 ರೂ.  ನಿಗದಿಗೊಳಿಸಬೇಕು, ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ನಿಷೇಧಿಸಬೇಕು, ಹಾಲಿ ಮುನಿಸಿಪಾಲಿಟಿ, ಆಸ್ಪತ್ರೆ, ನಿಗಮ ಮಂಡಳಿಗಳಲ್ಲಿ, ಹಾಸ್ಟಲ್, ಖಾಸಗಿ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಅಂಗನವಾಡಿ, ಬಿಸಿ ಊಟ, ಆಶಾಗಳಲ್ಲಿ ದುಡಿಯುತ್ತಿರುವ  ನೌಕರರ  ಸೇವೆಯನ್ನು ಖಾಯಂಗೊಳಿಸಬೇಕು, ಹಾಗು ಅನುಧಾನ ಕಡಿತವನ್ನು ನಿಲ್ಲಿಸಿ, ಮುಂದಿನ  ಬಜೆಟ್ ನಲ್ಲಿ  ಪೂರ್ಣ ಅನುಧಾನ ನೀಡಬೇಕು, ಕೇಂದ್ರ ಸರ್ಕಾರ  ರೈತ -ಕಾರ್ಮಿಕರ  ಪರವಾದ  ನೀತಿಯನ್ನು ಜಾರಿಗೊಳಿಸಬೇಕು ಮೊದಲಾದ  ಬೇಡಿಕೆಗಳ ಜಾರಿಗಾಗಿ ಫೆಬ್ರವರಿ 05ರಂದು ದೇಶದ ಎಲ್ಲಾ ಕಡೆಗಳಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಲಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಿನಾಕ್ಷಿ ಸುಂದರಂ ತಿಳಿಸಿದರು.

ಅವರು ದಿನಾಂಕ 24-01-2016ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆಯ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಯ ತೀರ್ಮಾನಗಳ ಬಗ್ಗೆ ತಿಳಿಸಲು ತುಮಕೂರು ನಗರದಲ್ಲಿ ಏರ್ಪಡಿಸಿದ್ದ ಸಭೆಯನ್ನು ಉದ್ದೆಶಿಸಿ ಮಾತನಾಡುತ್ತಿದ್ದರು, ಮುಂದುವರಿದು ಮಾತನಾಡಿದ  ಅವರು ಕಾರ್ಮಿಕ ವರ್ಗವು  ಐಕ್ಯತೆಯಿಂದ ಚಳುವಳಿ ಯಶಸ್ವಿಗೊಳಿಸಲು  ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜಿಬ್ ಅವರು ಮಾತನಾಡಿ ರಾಜ್ಯ ಸರ್ಕಾರವೂ   ಕಾರ್ಮಿಕರ ಕನಿಷ್ಟ ಕೂಲಿಯನ್ನು ಕಡಿತ ಮಾಡಲು ಹೋರಡುವ ಕ್ರಮವನ್ನು ಕೈಬಿಡುವಂತೆ ಆಗ್ರಹಿಸಿದರು ಹಾಗು ಬೀಡಿ ಕಾರ್ಮಿಕರ ತುಟಿಭತ್ಯೆ ನೀಡದಂತೆ ಅದೇಶಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಖಚಾಂಜಿ ಜಿ. ಕಮಲ, ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾಧ್ಯಾಕ್ಷರಾದ ಬಿ.ಉಮೇಶ, ಗ್ರಾಮ ಪಂಚಾಯತಿ ನೌಕರರ ಸಂಘದ ನಾಗೇಶ್, ಅಂಗನವಾಡಿ ನೌಕರರ ಸಂಘದ ಗುಲ್ಜಾರ್ ಬಾನು, ಶಾಂತಕುಮಾರಿ, ಅನಸೂಯ, ಕೈಗಾರಿಕ ಕಾರ್ಮಿಕ ಸಂಘದ ಮುಖಂಡರಾದ ದಿಸಾ ಲೋಕೆಶ್. ಷಣ್ಮುಗಪ್ಪ, ಶಶಿಕುಮಾರ, ಶಿವಕುಮಾರ್, ಸಂದೀಪ್ ಗೌಡ ಮತ್ತಿತರರು ಹಾಜರಿದ್ದರು.

ದೆಹಲಿಯಲ್ಲಿ ಮಾರ್ಚ 1 ರಂದು ಸಾರಿಗೆ ನೌಕರರ ಪ್ರತಿಭಟನೆ 

ಜನ ವಿರೋಧೀ, ಕಾರ್ಮಿಕ ವಿರೋಧಿ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ 2015 ನ್ನು ವಾಪಾಸಾತಿ ಮಾಡಬೇಕು. ವಿ.ವಿ.ಗಿರಿ ಲೇಬರ್ ಇನ್ಯೂಸ್ಟಿಚ್ಯೂಟ್ನ ಶಿಫಾರಸುಗಳನ್ನು ಜಾರಿ ಮಾಡಬೇಕು ಹಾಗು ನೇಮಕಾತಿ ಪತ್ರ ಮತ್ತು ಗುರುತಿನ ಚೀಟಿಯನ್ನು ನೀಡಬೇಕು. ಸಾಮಾಜಿಕ ಭದ್ರತಾ ಯೋಜನೆಯನ್ನು ಅಸಂಘಟಿತ ಕಾರ್ಮಿಕರಾದ ಸಾರಿಗೆ ನೌಕರರಿಗೆ ಹಣಕಾಸಿನ ನೆರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಲು ಕ್ರಮವಹಿಸಬೇಕು. ಪೆಟ್ರೋಲ್ ಮತ್ತು ಡಿಸೇಲ್ಗಳ ಮೇಲೆ ಹಾಕುವ ಅಮದು ಸುಂಕ ಮತ್ತು ತೆರಿಗೆಯನ್ನು ಕಡಿಮೆ ಮಾಡಬೇಕು. ಐಎಲ್ಓನ ಶಿಫಾರಸಿನಂತೆ ಮೋಟಾರ್ ವಾಹನ ಚಾಲಕರ ಜೊತೆಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರನ್ನು ಒಳಗೊಂಡಂತೆ ಇಎಸ್ಐ ಸೌಲಭ್ಯವನ್ನು ಜಾರಿ ಮಾಡಬೇಕು. ಸಾರಿಗೆ ಅಧಿಕಾರಿಗಳು ಹಾಗು ಪೋಲೀಸ್ರು ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು ಎಂಬ ಮೊದಲಾದ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬರುವ ಮಾರ್ಚ 1 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸಲಿದ್ದಾರೆ. 

ಜನವರಿ 9 ಮತ್ತು 10 ರಂದು ಕೊಲ್ಕತ್ತಾದಲ್ಲಿ ನಡೆಸಲಾದ ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಫೆಡರೇಷನ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಈ ಹೋರಾಟದ ಭಾಗವಾಗಿ ಫೆಬ್ರವರಿ 16 ರಂದು ಕರ್ನಾಟಕದ ಸಾರಿಗೆ ನೌಕರರ ರಾಜ್ಯ ಮಟ್ಟದ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರಿಗೆ ನೌಕರರ ಫೇಡರೇಶನಿನ ಪ್ರಧಾನ ಕಾರ್ಯದರ್ಶಿ ಕೆ.ಕೆ. ದಿವಾಕರನ್ ಭಾಗವಹಿಸಲಿದ್ದಾರೆ.

 

- ಕೆ.ಮಹಾಂತೇಶ್