ಸಮುದಾಯ ಭವನ ನಿರ್ಮಾಣಕ್ಕೆ ಆಗ್ರಹ

ಸಂಪುಟ: 
10
ಸಂಚಿಕೆ: 
06
Sunday, 31 January 2016

ವಿಜಯಪರ ಜಿಲ್ಲಾಧಿಕಾರಿಗಳಾದ ಡಿ.ರಂದೀಪ ಹಾಗೂ ಯೋಜನಾ ನಗಾರಾಭೀವೃದ್ಧಿ ಅಧಿಕಾರಿಗಳಾದ ಮಹಾದೇವ ಮುರಗಿ ಅವರಿಗೆ  ಗೊಲ್ಲರ ಸಮಾಜದಿಂದ ಪಟ್ಟಣದ ಜಾಗೆಯ ಸಲುವಾಗಿ ಮನವಿ ಸಲ್ಲಿಸಿದರು. ಸಿಂದಗಿ ಪಟ್ಟಣದ ಪುರಸಭೆ ವಾಡ್ ನಂ : 01 ಇರದಲ್ಲಿ ರಿ.ಸ.ನಂ 771\1ರಲ್ಲಿ 12 ಎಕರೆ 28 ಗುಂಟೆ ಗೌಠಣ ಜಾಗೆಯಲ್ಲಿ ಇದರಲ್ಲಿ 3 ಎಕರೆ ಭೂಮಿಯನ್ನು ಗೊಲ್ಲರ ಸಮಾಜಕ್ಕೆ ನೀಡಿದ್ದು ಹಾಗೂ 9 ಎಕರೆ 25 ಗುಂಟೆ ಪಂಚಾಯಿತಿಗೆ ಕೊಟ್ಟಿದ್ದು.

ಡಿವಿಜನ್ ಕಮೀಷನರ್ ಬೆಳಗಾಂವ್ ಇವರ  ಆದೇಶದಂತೆ ಆರ್‍ಬಿಎಲ್.ಎಡಿ ಆರ್ರ್ 2285 03-12-1965 ನೇ ಪ್ರಕಾರ ಮಂಜೂರಾಗಿದೆ ಮತ್ತು 13-02-1966 ಪ್ರಕಾರವು ಆಗಿದೆ. ತಹಶೀಲ್ದಾರ ಸಾಹೇಬರು ಸಿಂದಗಿ ಎಎಸ್.ಆರ್. 3/66/ ದಿನಾಂಕ 17/1/1966 ನೇದ್ದರ ಪ್ರಕಾರ ನಮ್ಮ ಗೊಲ್ಲ ಸಮಾಜಕ್ಕೆ 3 ಎಕರೆ ಜಮೀನನ್ನು ರಿ.ಸ.ನಂ. 771/1 ರಲ್ಲಿ 3 ಎಕರೆ ಮೀಸಲಾಗಿಡಲಾಗಿದೆ ಮತು 771/2 9ಎಕರೆ 25 ಗುಂಟೆ ಪಂಚಾಯಿತಿಗೆ ಇಟ್ಟಿರುತ್ತಾರೆ.

01-01-1988ರಂಲ್ಲಿ ರೇಣುಕಾ ಎಲ್ಲಮ್ಮ ಗುಡಿ ದಾಖಲಾಗಿದೆ ಉತಾರಿವಿತ್ತು ಅದನ್ನು ಪರುಸಭೆ ಸದಸ್ಯರು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಎರಡು ರದ್ದು ಮಾಡಿದರು. ಇದನ್ನು ಕಾನೂನು ಬಾಹಿರವಾಗಿ ತೆಗೆದುಹಾಕಿದ್ದಾರೆ ಮತ್ತು ಯಲ್ಲಪ್ಪ ಬೋರಗಿ ಅಕ್ರಮವಾಗಿ ಮೊಡಕ ಅಂಗಡಿಇಟ್ಟಿದನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರಿಗೆ ಪುರಸಭೆ ಮುಖ್ಯಾಧಿಕಾರಿಗಳು ಪೊಲೀಸರು ಬಂದು ತಗೆದುಹಾಕಿದ್ದಾರೆ.

ಮಾಜಿ ಶಾಸಕರು ಮಧ್ಯ ಪ್ರವೇಶಮಾಡಿ ವ್ಯಾಪಾರಿ ಮಳಿಗೆಗಳನ್ನು ಹಾಗ ಸಮುದಾಯ ಭವನ ನಿರ್ಣಯ ಮಾಡಿಲಿಕ್ಕೆ ಒತ್ತಡಮಾಡಿದ್ದರಿಂದ ತಿಳಿದು ಬಂದಿತು. ವ್ಯಾಪಾರ ಮಳಿಗೆ ಆಗಬಾರು ಆ ಜಾಗದಲ್ಲಿ ಸಮುಭವನ ಹಾಗೂ ಹನುಮಾನು ಗುಡಿ ನಿರ್ಮಾಣ ಮಾಡಿಲಿಕ್ಕೆ ಆದೇಶ ಮಾಡಬೇಕು. ಇದರಲ್ಲಿ ಭ್ರಷ್ಟಚಾರ ನಡೆದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ತಗೆದುಕೊಂಡು ನಮ್ಮ ಸಮಾಜಕ್ಕೆ ಮೀಸಲಾಗಿಟ್ಟ ಸಮುದಾಯ ಭವನ ಹಾಗೂ ಹನುಮಾನ ಗುಡಿ ನಿರ್ಮಾಣಮಾಡಬೇಕು ಯಾವುದೇ ಉಳಿದ ಮಳಿಗೆಯಾಗಲಿ ಯಾವುದಕ್ಕೂ ಅಸ್ಪದ ನೀಡಬಾರದೆಂದು ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ನಾನು ಖುದ್ಧಾಗಿ ಸಿಂದಗಿಗೆ ಬಂದ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆಂದು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ, ಗೊಲ್ಲರ ಸಮಾಜದ ಮುಖಂಡರಾದ ಭೀಮ ಗು. ಮೊರಟಗಿ, ರಾಜಶೇಖರ ಗೊಲ್ಲರ, ಸುರೇಶ ಯ. ಮೊರಟಗಿ ಭೀಮಾ ಬಿಜಾಪುರ, ಯಂಕಪ್ಪ ಯ. ದುತ್ತರಗಿ, ಗುರುಪ್ಪ ತಿ. ಆಲಮೇಲ ಮುಂತಾದವರು ಉಪಸ್ಥಿತರಿದ್ದರು.