Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

‘ಜನಸಮೂಹಗಳ (ಮಾಸ್) ಕ್ರಾಂತಿಕಾರಿ ಪಕ್ಷ’ ಕ್ಕೂ ಏನು ವ್ಯತ್ಯಾಸ ?

ಸಂಪುಟ: 
10
ಸಂಚಿಕೆ: 
06
date: 
Sunday, 31 January 2016

ಈಗ ಹೇಳಲಾಗುತ್ತಿರುವ ‘ಜನಸಮೂಹಗಳ ಧೋರಣೆ (ಮಾಸ್ ಲೈನ್) ಇರುವ ಕ್ರಾಂತಿಕಾರಿ ಪಕ್ಷ’ಕ್ಕೂ ಹಿಂದೆ ಸಾಲ್ಕಿಯಾ ಪ್ಲೀನಂ ನಿರ್ಣಯದಲ್ಲಿ ಹೇಳಲಾದ ‘ಜನಸಮೂಹಗಳ (ಮಾಸ್) ಕ್ರಾಂತಿಕಾರಿ ಪಕ್ಷ’ ಕ್ಕೂ ಏನು ವ್ಯತ್ಯಾಸ ?

- ಆರ್.ಜವಾಹರ್, ಚೆನ್ನೈ

ಸಾಲ್ಕಿಯಾ ಪ್ಲೀನಂನಲ್ಲಿ ‘ಜನಸಮೂಹಗಳ ಕ್ರಾಂತಿಕಾರಿ ಪಕ್ಷ’ ಕಟ್ಟಲು ಕರೆ ನೀಡಲಾಯಿತು. ಸಾಲ್ಕಿಯಾ ಪ್ಲೀನಂನ ಮುಂದೆ ಇದ್ದಿದ್ದು, ಬೆಳೆಯುತ್ತಿರುವ ಜನಸಮೂಹಗಳ ಹೋರಾಟಗಳು ಹಾಗೂ ಪಕ್ಷದ ಪ್ರಭಾವಗಳಿಗಿಂತ, ಪಕ್ಷದ ಸದಸ್ಯತ್ವಕ್ಕೆ ಸೇರ್ಪಡೆ ಹಿಂದೆ ಬಿದ್ದ (ಅಥವಾ ವಿಳಂಬವಾದ) ಸಮಸ್ಯೆ. ಪಕ್ಷದ ಸದಸ್ಯತ್ವದಲ್ಲಿ ಹೆಚ್ಚಳ, ಹೆಚ್ಚಾಗಿದ್ದ ಪಕ್ಷದ ಪ್ರಭಾವವನ್ನು ಬಿಂಬಿಸುತ್ತಿರಲಿಲ್ಲ ಎಂಬುದ ಅಂದಿನ ಸಮಸ್ಯೆಯಾಗಿತ್ತು.

ಕೊಲ್ಕತ್ತಾ ಪ್ಲೀನಂ ಮುಂದೆ ಇರುವ ಸಮಸ್ಯೆ ಬೇರೆಯದೇ ಆಗಿದೆ. ಪಕ್ಷದ ಸದಸ್ಯತ್ವ ಹಲವು ವರ್ಷಗಳಿಂದ ಏರುತ್ತಿದ್ದರೂ, ಜನಸಮೂಹಗಳ ನಡುವೆ ಪಕ್ಷದ ಪ್ರಭಾವ ಹೆಚ್ಚಿರಲಿಲ್ಲ. ಪಕ್ಷದ ಸದಸ್ಯತ್ವ ವಿಸ್ತಾರ ಮಾಡುತ್ತಲೇ ಸದಸ್ಯತ್ವದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂಬುದನ್ನು ಸಾಲ್ಕಿಯಾ ಪ್ಲೀನಂ ಒತ್ತಿ ಹೇಳಿತ್ತು. ಆದರೆ ಈಗಿರುವ ಪಕ್ಷದ ಸದಸ್ಯತ್ವದ ಗುಣಮಟ್ಟ, ಜನಸಮೂಹಗಳ ನಡುವೆ ಪಕ್ಷದ ಪ್ರಭಾವ ಹೆಚ್ಚಿಸಲು ಇರಬೇಕಾದ ಮಟ್ಟದಲ್ಲಿ ಇಲ್ಲ. ಜನಸಮೂಹಗಳ ನಡುವೆ ಪ್ರಭಾವದ ಕೊರತೆಯ ಹಿನ್ನೆಲೆಯಲ್ಲಿ, ವರ್ಗ ಹೋರಾಟಗಳು ಮತ್ತು ಚಳುವಳಿಗಳ ಮೂಲಕ ಜನಸಮೂಹಗಳಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸುವ ಆವಶ್ಯಕತೆ ಬಗ್ಗೆ ಒತ್ತು ಕೊಟ್ಟಿದೆ. ಆದ್ದರಿಂದ ಈ ಕಾರ್ಯಭಾರವನ್ನು ನಿರ್ವಹಿಸಬಲ್ಲ ಸದಸ್ಯತ್ವದ ಗುಣಮಟ್ಟ ಮತ್ತು ಪಕ್ಷದ ಕ್ರಾಂತಿಕಾರಿ ಸ್ವರೂಪದ ಬಗ್ಗೆ ಒತ್ತು ಕೊಡಲಾಗಿದೆ.

ಜನಸಮೂಹಗಳ ಮಧ್ಯೆ ಪಕ್ಷದ ನೆಲೆಯನ್ನು ವಿಸ್ತರಿಸುವುದು ಅಂದರೆ ಪಕ್ಷದ ಸದಸ್ಯತ್ವವನ್ನು ವಿಸ್ತರಿಸುವುದು ಎಂಬುದು ಪಕ್ಷದ ಈ ಹಿಂದಿನ ಅನುಭವವಾಗಿತ್ತು. ಜನಸಮೂಹಗಳ ಮಧ್ಯೆ ಒಂದು ಕಮ್ಯುನಿಸ್ಟ್ ಪಕ್ಷದ ನೆಲೆಯ ಸ್ವರೂಪವನ್ನು ಬರಿಯ ಅದರ ಸದಸ್ಯತ್ವದ ಬಲದಿಂದಷ್ಟೇ ನಿರ್ಧರಿಸುವುದು ಸಾಧ್ಯವಿಲ್ಲ. ಕಾರ್ಮಿಕ ವರ್ಗದ ಮತ್ತು ವಿವಿಧ ದುಡಿಯುವ ಜನರ ವಿಭಾಗಗಳಲ್ಲಿ ಪಕ್ಷದ ನೆಲೆ ಮತ್ತು ಇನ್ನೂ ಮುಖ್ಯವಾಗಿ ಅದಕ್ಕಿರುವ ವ್ಯಾಪಕ ರಾಜಕೀಯ ಪ್ರಭಾವ ಮತ್ತು ತನ್ನ ಕರೆಗೆ ಜನಸಮೂಹಗಳನ್ನು ಅಣಿ ನೆರೆಸುವ ಸಾಮಥ್ರ್ಯ - ಇವೆಲ್ಲಾ ಜನಸಮೂಹಗಳ ಮಧ್ಯೆ ಒಂದು ಕಮ್ಯುನಿಸ್ಟ್ ಪಕ್ಷದ ನಿಜವಾದ ನೆಲೆಯ ಸ್ವರೂಪವನ್ನು ನಿರ್ಧರಿಸುವ ಅಂಶಗಳು.

‘ಜನಸಮೂಹಗಳ ಕ್ರಾಂತಿಕಾರಿ ಪಕ್ಷ’ದ ಪರಿಕಲ್ಪನೆ ಸರಿಯಾದ್ದೇ.  ‘ಜನಸಮೂಹಗಳ ಕ್ರಾಂತಿಕಾರಿ ಪಕ್ಷ’ವನ್ನು ಕಟ್ಟುವ ಕಾರ್ಯಭಾರವನ್ನು ಪಕ್ಷದ ಸಮಕಾಲೀನಗೊಳಿಸಿದ ಕಾರ್ಯಕ್ರಮದಲ್ಲಿ ನಿಗದಿ ಮಾಡಲಾಗಿದೆ. ಆದರೆ ಇಂದಿನ ಪಕ್ಷದ ಸಂಘಟನಾ ಸ್ಥಿತಿಯಲ್ಲಿ, ಜನಸಮೂಹಗಳ ಮಧ್ಯೆ ಪಕ್ಷದ ನೆಲೆಯನ್ನು ವಿಸ್ತರಿಸಬಲ್ಲ ಗುಣಮಟ್ಟದ ಸದಸ್ಯತ್ವ ಇರುವ ಪಕ್ಷ ಕಟ್ಟಬೇಕಾಗಿದೆ.  ‘ಜನಸಮೂಹಗಳ ಧೋರಣೆ’ (ಮಾಸ್ ಲೈನ್) ಜನಸಮೂಹಗಳ ಮಧ್ಯೆ ಪಕ್ಷದ ನೆಲೆಯನ್ನು ವಿಸ್ತರಿಸಲು ಸಹಾಯಕವಾಗಬೇಕು. ಅದಕ್ಕಾಗಿಯೇ ‘ಜನಸಮೂಹಗಳ ಧೋರಣೆ’ಯನ್ನು ಅಂಗೀಕರಿಸುವುದನ್ನು ಪ್ಲೀನಂ ವರದಿ/ನಿರ್ಣಯಗಳು ಒತ್ತಿ ಹೇಳುತ್ತವೆ.

ಆದ್ದರಿಂದಲೇ ಸಂಘಟನಾ ನಿರ್ಣಯದಲ್ಲಿ ಈ ಘೋಷಣೆಗಳನ್ನು ಕೊಡಲಾಗಿದೆ:

ಅಖಿಲ ಭಾರತ ಜನಸಮೂಹಗಳ ನೆಲೆ ಇರುವ ಸಿಪಿಐ(ಎಂ) ಕಟ್ಟಲು ಮುನ್ನಡೆಯೋಣ!    ಜನಸಮೂಹಗಳ ಧೋರಣೆ ಇರುವ ಕ್ರಾಂತಿಕಾರಿ ಪಕ್ಷ ಕಟ್ಟುವತ್ತ ಮುನ್ನಡೆಯೋಣ!

* ಈ ಪ್ರಶ್ನೆ ‘ಪೀಪಲ್ಸ್ ಡೆಮೊಕ್ರಸಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಎಲ್ಲರಲ್ಲ್ಲೂ ಏಳುವ ಪ್ರಶ್ನೆಯಾದ್ದರಿಂದ ಅದರ ಅನುವಾದವನ್ನು ಪ್ರಕಟಿಸಲಾಗುತ್ತಿದೆ. ಈ ಉತ್ತರದಲ್ಲಿ ಇಂಗ್ಲೀಷಿನ ‘ಮಾಸ್’ ಎಂಬುದಕ್ಕೆ ಸಂವಾದಿಯಾಗಿ, ಸಾಮಾನ್ಯವಾಗಿ ಬಳಸುವ ಆದರೆ ನಿಖರವಲ್ಲದ (ಅದರಲ್ಲೂ ಈ ಪ್ರಶ್ನೆಯ ಸಂದರ್ಭದಲ್ಲಿ ತಪ್ಪು ಅರ್ಥ ಕೊಡಬಹುದಾದ) ‘ಸಾಮೂಹಿಕ’ (ನಿಜವಾಗಿಯೂ ಕಲೆಕ್ಟಿವ್ ಗೆ ಸಂವಾದಿಯಾದ) ಎಂಬ ಪದದ ಬದಲು, ‘ಜನಸಮೂಹ’ ಎಂಬ ಪದ ಬಳಸಲಾಗಿದೆ ಎಂದು ಗಮನಿಸಬೇಕು.